ಗೋ ಗ್ರೀನ್‌ನ ವಿದ್ಯುತ್ ಮಾರ್ಗ! ಪೆಟ್ರೋಲಿಯಂಗೆ ಪರ್ಯಾಯ ದಾರಿಗಳು ತೆರೆದುಕೊಳ್ಳುತ್ತಲೇ ಇವೆ. ಅವುಗಳಲ್ಲಿ ಮುಖ್ಯವಾದ್ದು ವಿದ್ಯುತ್.... ಪೆಟ್ರೋಲಿಯಂಗೆ ಪರ್ಯಾಯ ದಾರಿಗಳು ತೆರೆದುಕೊಳ್ಳುತ್ತಲೇ ಇವೆ. ಅವುಗಳಲ್ಲಿ ಮುಖ್ಯವಾದ್ದು ವಿದ್ಯುತ್. ಗೋ ಗ್ರೀನ್ ಬಿಓವಿ ಸಂಸ್ಥೆ ಹೊಸ ಶ್ರೇಣಿಯ ಎಲೆಕ್ಟ್ರಿಕ್ ಗೇರ್‌ರಹಿತ ಬೈಕ್‌ಗಳನ್ನು ಪರಿಚಯಿಸಿದೆ. ಯುವ ವಿದ್ಯಾರ್ಥಿಗಳು, ಮಹಿಳೆಯರು, ದಿನವಿಡೀ ಸುತ್ತುವ ಉದ್ಯೋಗಿಗಳನ್ನು ಗಮನದಲ್ಲಿರಿಸಿ ವಿವಿಧ ಶ್ರೇಣಿಗಳನ್ನು ಹೊರತರಲಾಗಿದೆ. ವಿದ್ಯಾರ್ಥಿಗಳಿಗೆ ಕೊಹ್ರಾ, ಮಹಿಳೆಯರಿಗೆ ಕಿಮಯಾ, ಫೀಲ್ಡ್ ವರ್ಕರ್‌ಗಳಿಗೆ ಕವಚ್ ಹಾಗೂ ಸರಕು ಸಾಗಿಸಲು ಸುನ್ನೋಟಿ ಮಾದರಿಗಳನ್ನು ವಿನ್ಯಾಸಗೊಳಿಸಲಾಗಿದೆ. ಮಾದರಿಗಳಿಗೆ ತಕ್ಕಂತೆ ರು. 38,000 ರಿಂದ 53,000 ಬೆಲೆಯಿದೆ. ಮಕ್ಕಳೂ ಬಳಸಲು ಸಾಧ್ಯವಾಗುವ ಕೊಹ್ರಾನಲ್ಲಿ 60 ಕಿ.ಮೀ. ಗರಿಷ್ಠ ಚಾಲನೆ ಮಾಡಬಹುದು. ಈ ಮಾದರಿಯ ಬೈಕ್ ಮಾರುಕಟ್ಟೆಯಲ್ಲಿ ರು. 38,000ಕ್ಕೆ ಲಭ್ಯವಿದೆ. ಕಿಮಯಾ ವಿಶೇಷವಾಗಿ ಮಹಿಳೆಯರು ಹಾಗೂ ಮನೆ ಹತ್ತಿರದಲ್ಲೇ ಸುತ್ತಾಡುವವರಿಗಾಗಿ ತಯಾರಿಸಲಾಗಿದೆ. 60 ಕಿ.ಮೀ. ಗರಿಷ್ಠ ವೇಗ ಹೊಂದಿರುವ ಈ ಮಾದರಿಯ ಬೆಲೆ 47,000. ಫೀಲ್ಡ್ ವರ್ಕರ್‌ಗಳಿಗಾಗಿ ಕವಚ್ ತಯಾರಿಸಲಾಗಿದೆ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 120 ಕಿ.ಮೀ. ಚಾಲನೆ ಮಾಡಬಹುದಾದ ಕವಚ್‌ನ ಬೆಲೆ ರು. 53,000. ದಿನದ ಹೆಚ್ಚು ಹೊತ್ತು ಸಂಚರಿಸುವ ಫೀಲ್ಡ್ ವರ್ಕರ್‌ಗಳಿಗೆ ಅನುಕೂಲವಾಗಲಿದೆ. ಸುನ್ನೋಟಿ ಬೈಕ್ ಅನ್ನು ಸರಕು ಸಾಗಿಸಲು ಹಾಗೂ ಇಬ್ಬರು ಮಾತ್ರವಿರುವ ಕುಟುಂಬಕ್ಕಾಗಿ ಬಳಸಬಹುದು. 60-100 ಕಿ.ಮೀ. ಚಲಿಸಬಹುದಾದ ಎರಡು ಮಾದರಿ ಲಭ್ಯವಿದ್ದು, ರು. 44,000-59,500 ಮಾರುಕಟ್ಟೆ ದರವಿದೆ. ರಾಜ್ಯದಲ್ಲಿ ಪರಿಸರ ಸ್ನೇಹಿ ದೃಷ್ಟಿಯಿಟ್ಟುಕೊಂಡು ಮಾರುಕಟ್ಟೆಗಿಳಿದಿರುವ ಗೋ ಗ್ರೀನ್ ತಿಂಗಳಿಗೆ 2600 ಬೈಕ್ ಮಾರಾಟ ಮಾಡುವ ನಿರೀಕ್ಷೆ ಇರಿಸಿಕೊಂಡಿದೆ. ಮಾಹಿತಿಗೆ- 080-65695656.