ಬಂದಿದೆ ಹ್ಯುಂಡೈ ಐ20 ಆಕ್ಟಿವ್ ಹ್ಯುಂಡೈ ಮೋಟಾರ್ ಇಂಡಿಯಾ ಕ್ರೀಡಾ ಶೈಲಿಯ ಐ೨೦ ಆಕ್ಟಿವ್ ಕಾರನ್ನು ಅನಾವರಣ ಮಾಡಿದೆ. ನವದೆಹಲಿ: ಹ್ಯುಂಡೈ ಮೋಟಾರ್ ಇಂಡಿಯಾ ಕ್ರೀಡಾ ಶೈಲಿಯ ಐ20 ಆಕ್ಟಿವ್ ಕಾರನ್ನು ಅನಾವರಣ ಮಾಡಿದೆ. ಇದರ ಬೆಲೆ 8.89 ಲಕ್ಷ ಎಂದು ಸಂಸ್ಥೆ ತಿಳಿಸಿದೆ. ಇದೇ ಕಾರಿನ ಪೆಟ್ರೋಲ್ ಅವತರಿಣಿಕೆಯ ಬೆಲೆ ೬.೩೮ ರಿಂದ ೭.೦೯ ಲಕ್ಷದವರೆಗೆ ಇದ್ದು, ಡೀಸೆಲ್ ಅವತರಿಣಿಕೆ ಕಾರು ೭.೬೩ ರಿಂದ ೮.೮೯ ಲಕ್ಷದವರೆಗೆ ಇದೆ. ಈಗ ಈ ಐ೨೦ ಆಕ್ಟಿವ್, ಟೊಯೋಟಾ ಎತಿಯೋಸ್ ಕ್ರಾಸ್, ವೋಕ್ಸ್ ವ್ಯಾಗನ್ ಕ್ರಾಸ್ ಪೋಲೊ ಮತ್ತು ಫಿಯಟ್ ಅವ್ವೆಂಚುರಾ ಕಾರುಗಳ ಜೊತೆಗೆ ಸ್ಪರ್ಧಿಸಲಿದೆ. ಪ್ರಾದೇಶಿಕ ಮಾರುಕಟ್ಟೆಯಲ್ಲಿ ೫ ಲಕ್ಷ ಐ೨೦ ಆಕ್ಟಿವ್ ಕಾರುಗಳನ್ನು ಮಾರಾಟ ಮಾಡುವ ಗುರಿ ಇಟ್ಟುಕೊಂಡಿದೆ ಹ್ಯುಂಡೈ. ಅಲ್ಲದೆ ಆಗಸ್ಟ್-ಸೆಪ್ಟಂಬರ್ ನಲ್ಲಿ ಐಎಕ್ಸ್೨೫ ಎಸ್ ಯು ವಿಯನ್ನು ಪರಿಚಯಿಸಲಿದೆ ಎಂದು ಕೂಡ ಹ್ಯುಂಡೈ ಸಂಸ್ಥೆ ತಿಳಿಸಿದೆ.