ಸ್ವಿಪ್ಟ್ ಹೊಸ ಲುಕ್ಕು ಮಾರುತಿ ಸುಝುಕಿ ಸ್ವಿಫ್ಟ್‌ನ ನೂತನ ಮಾದರಿ 2014ರಲ್ಲಿ ಮಾರುಕಟ್ಟೆಗೆ ಬರಲಿದೆ. ಸ್ವಿಫ್ಟ್‌ಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಹುಂಡೈ ಐ-20ಯ ಕೆಲವಿನ್ಯಾಸಗಳನ್ನು ಹೋಲುವ ರೂಪದಲ್ಲೇ ಸ್ವಿಫ್ಟ್ ಹೊರಬರುವ ಸಾಧ್ಯತೆಯಿದೆ. ನೂತನ ಸ್ವಿಫ್ಟ್‌ನ ಹೊರವಿನ್ಯಾಸದ ಫೋಟೋ ಮಾತ್ರ ಹೊರಬಂದಿದ್ದು, ಒಳವಿನ್ಯಾಸ ಹಾಗೂ ಎಂಜಿನ್‌ನಲ್ಲಿ ಯಾವ ಬದಲಾವಣೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇಂಡಿಕೇಟರ್ ಲೈಟ್ ಅನ್ನು ವಿಂಗ್ ಮಿರರ್‌ಗೆ ಅಳವಡಿಸಲಾಗಿದೆ. ಅದಲ್ಲದೆ, ಡೇ ರನ್ನಿಂಗ್ ಲೈಟನ್ನೂ ನೀಡಲಾಗಿದೆ. ಇದು ಐ-20ಯಲ್ಲೂ ಕಾಣಬಹುದು.