ನಯಾ ಜಮಾನ ವಾಹನ ಮಾರುಕಟ್ಟೆ ಎಷ್ಟೇ ಕುಸಿದರೂ ಮಿನಿ ಎಸ್‌ಯುವಿಗಳ ಕುರಿತು ಗ್ರಾಹಕರ ಆಕರ್ಷಣೆ... ವಾಹನ ಮಾರುಕಟ್ಟೆ ಎಷ್ಟೇ ಕುಸಿದರೂ ಮಿನಿ ಎಸ್‌ಯುವಿಗಳ ಕುರಿತು ಗ್ರಾಹಕರ ಆಕರ್ಷಣೆ ಮತ್ತು ಕಂಪನಿಗಳ ನಿರೀಕ್ಷೆ ಕುಸಿದಿಲ್ಲ. 2014ರಲ್ಲಿ ವಾಹನ ಮಾರುಕಟ್ಟೆಯಲ್ಲಿ ಏನಾದರೂ ಸಂಚಲನವಾದರೆ ಅದು ಮಿನಿಎಸ್‌ಯುವಿ ಕ್ಷೇತ್ರದಲ್ಲಿ ಮಾತ್ರ ಎಂಬ ಸ್ಥಿತಿ ಸದ್ಯಕ್ಕಿದೆ. ಯಾಕೆಂದರೆ ಈ ವರ್ಷದಲ್ಲಿ ವಾಹನ ಕ್ಷೇತ್ರ ಉಸಿರಾಡಲು ಸಾಧ್ಯವಾಗಿದ್ದೇ ಮಿನಿ ಎಸ್‌ಯುವಿಗಳಿಂದ. ಈ ವರ್ಷ ಡಸ್ಟರ್, ಇಕೋಸ್ಪೋರ್ಟ್ ಮಿನಿಎಸ್‌ಯುವಿ ಕ್ಷೇತ್ರದಲ್ಲಿ ಮಿಂಚಿರಬಹುದು. ವರ್ಷಾಂತ್ಯಕ್ಕೆ ನಿಸಾನ್ ಟೆರ್ರಾನೊ ಕೂಡ ಮಾರುಕಟ್ಟೆ ಪ್ರವೇಶಿಸಿರಬಹುದು. ಆದರೆ ಅದೇ ಸ್ಥಿತಿ ಮುಂದಿನ ವರ್ಷ ಖಂಡಿತ ಇರಲಾರದು. ಈಗ ಮಾರುಕಟ್ಟೆಯಲ್ಲಿರುವ ಮಿನಿಎಸ್‌ಯುವಿಗಳಿಗೆ ಭರ್ಜರಿ ಪೈಪೋಟಿ ನೀಡಲು ಸಾಕಷ್ಟು ಮಿನಿಎಸ್‌ಯುವಿಗಳು 2014ರಲ್ಲಿ ಮಾರುಕಟ್ಟೆಗೆ ಬರಲು ಸಿದ್ಧತೆ ನಡೆಸಿವೆ. ಅವು ಈಗಿರುವ ಮಿನಿಎಸ್‌ಯುವಿಗಳಿಗಿಂತ ವಿನ್ಯಾಸದಲ್ಲಿ ಅತ್ಯಂತ ಆಕರ್ಷಕವಾಗಿರುವುದು ಗ್ರಾಹಕರ ದೃಷ್ಟಿಯಿಂದ ಅತ್ಯಂತ ಪ್ರಮುಖ ಆಕರ್ಷಣೆ. ಹಾಗೆಯೇ ತಂತ್ರಜ್ಞಾನದಲ್ಲಿಯೂ ಅವು ಕೊಂಚ ಆಧುನಿಕವಾಗಿರುವ ಲಕ್ಷಣಗಳಿವೆ. ಇದರ ಜತೆಗೆ ಈಗಿರುವ ಡಸ್ಟರ್ ಕೂಡ ಹೊಸ ರೂಪ ಪಡೆದುಕೊಳ್ಳುವ ಸಿದ್ಧತೆಯಲ್ಲಿದೆ. ಸಣ್ಣ ಕಾರಿನ ಗಾತ್ರ (ಉದ್ದ 4 ಮೀಟರ್ ಒಳಗೆ) ಆದರೆ ದೊಡ್ಡ ವಾಹನದ ನೋಟ ಮತ್ತು ಅನುಕೂಲಗಳು ಇವು ಮಿನಿಎಸ್‌ಯುವಿಗಳ ಪ್ರಮುಖ ಆಕರ್ಷಣೆ. ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆ ಇಡುವ ಮಿನಿಎಸ್‌ಯುವಿಗಳ ಝಲಕ್ ಓದುಗರಿಗಾಗಿ. - ವಕ್ರದಂತ