ಜೂ.7 ಕ್ಕೆ ಡಸ್ಟನ್ ಇಂಡಿಯಾದಿಂದ ರೆಡಿ-ಗೋ ಕಾರು ಬಿಡುಗಡೆ ಕಾರು ಉತ್ಪಾದಕ ಸಂಸ್ಥೆ ಡಸ್ಟನ್ ಇಂಡಿಯಾ ತನ್ನ ಪ್ರಾರಂಭಿಕ ಬೆಲೆಯ ರೆಡಿ-ಗೋ ಕಾರಿನ ಬೆಲೆಯನ್ನು ಜೂ.7 ರಂದು ಘೋಷಿಸುವುದಾಗಿ ತಿಳಿಸಿದೆ. ನವದೆಹಲಿ: ಕಾರು ಉತ್ಪಾದಕ ಸಂಸ್ಥೆ ಡಸ್ಟನ್ ಇಂಡಿಯಾ ತನ್ನ ಪ್ರಾರಂಭಿಕ ಬೆಲೆಯ ರೆಡಿ-ಗೋ ಕಾರನ್ನು ಜೂ.7 ರಂದು ಮಾರುಕಟ್ಟೆಗೆ ಪರಿಚಯಿಸುವುದಾಗಿ ತಿಳಿಸಿದೆ. ರೆಡಿ-ಗೋ ಕಾರು ಜಾಗತಿಕವಾಗಿ ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದು ಭಾರತದಲ್ಲಿ ಪ್ರೀ-ಬುಕಿಂಗ್ ಪ್ರಾರಂಭವಾಗಿದೆ. ಸುಮಾರು 2 .5 ಲಕ್ಷದಿಂದ ಪ್ರಾರಂಭವಾಗಲಿರುವ ಡಸ್ಟನ್ ರೆಡಿ-ಗೋ ಕಾರು ಮಾರುತಿ ಸುಜೂಕಿ ಸಂಸ್ಥೆಯ ಆಲ್ಟೊ ಹಾಗೂ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಪರಿಚಯವಾಗಿರುವ ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪ್ರರಿಸ್ಪರ್ಧೆಯೊಡ್ಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 'ಟಾಲ್ ಬಾಯ್' ವಿನ್ಯಾಸ ತಂತ್ರಗಾರಿಕೆಯಲ್ಲಿ ನಿರ್ಮಾಣವಾಗಿರುವ ಕಾಂಪ್ಯಾಕ್ಟ್ ವಿಭಾಗದ ರೆಡಿ-ಗೋ ಕಾರು ಪ್ರತಿ ಲೀಟರ್ ಗೆ 25 ಕಿಮೀ ಮೈಲೇಜ್ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ. ಇನ್ನು ಈ ಕಾರು ಐದು ಬಣ್ಣಗಳಲ್ಲಿ ಲಭ್ಯವಿದ್ದು, 35 ಲೀಟರ್ ನಷ್ಟು ಸಾಮಾರ್ಥ್ಯ ಹೊಂದಿರುವ ಪೆಟ್ರೋಲ್ ಟ್ಯಾಂಕ್ ಹೊಂದಿದೆ.