ಹಳೆಯ ವಾಹನಗಳನ್ನು ಬದಲಿಸಲು ಒಂದು ಬಾರಿ ಪ್ರೋತ್ಸಾಹಧನ ಪ್ರಸ್ತಾಪಿಸಿದ ಆಟೋ ಕಂಪನಿಗಳು 2000 ಇಸವಿಗೂ ಹಿಂದಿನ ನೋಂದಾಯಿತ ವಾಹನಗಳನ್ನು ರಸ್ತೆಗಿಳಿಯದಂತೆ ತಡೆಯುವ ನಿಟ್ಟಿನಲ್ಲಿ ತೆರಿಗೆಗಳಲ್ಲಿನ ರಿಯಾಯಿತಿಗಳ ರೂಪದಲ್ಲಿ ಒಂದು ಬಾರಿ ಪ್ರೋತ್ಸಾಹವನ್ನು ಆಟೋ ಕಂಪನಿಗಳು ಪ್ರಸ್ತಾಪಿಸಿವೆ ನವದಹಲಿ: 2000 ಇಸವಿಗೂ ಹಿಂದಿನ ನೋಂದಾಯಿತ ವಾಹನಗಳನ್ನು ರಸ್ತೆಗಿಳಿಯದಂತೆ ತಡೆಯುವ ನಿಟ್ಟಿನಲ್ಲಿ ತೆರಿಗೆಗಳಲ್ಲಿನ ರಿಯಾಯಿತಿಗಳ ರೂಪದಲ್ಲಿ ಒಂದು ಬಾರಿ ಪ್ರೋತ್ಸಾಹವನ್ನು ಆಟೋ ಕಂಪನಿಗಳು ಪ್ರಸ್ತಾಪಿಸಿವೆ ಬಜೆಟ್ ಮಂಡನೆಗೂ ಮುಂಚೆ ಭಾರಿ ಕೈಗಾರಿಕಾ ಸಚಿವರ ಜೊತೆಗಿನ ಸಭೆಯಲ್ಲಿ ವಿದ್ಯುದೀಕರಣ ವಾಹನಗಳಿಗೆ ವಿಶೇಷ ದರ ಪರಿಚಯಿಸುವಾಗ ಪ್ರಯಾಣಿಕ ಕಾರುಗಳಿಗೆ ಬಹು ತೆರಿಗೆಯನ್ನು ದೂರ ಇಡುವಂತೆ ಸರ್ಕಾರವನ್ನು ಉದ್ಯಮಗಳು ಕೇಳಿಕೊಂಡಿವೆ. ಇತ್ತೀಚಿಗೆ ನಡೆದ ಆಟೋ ಉದ್ಯಮಗಳ ಪ್ರತಿನಿಧಿಗಳು ಹಾಗೂ ಭಾರೀ ಕೈಗಾರಿಕೆ ಇಲಾಖೆಯ ಅಧಿಕಾರಿಗಳ ನಡುವಿನ ಸಭೆಯಲ್ಲಿ ಈ ಸಲಹೆಯನ್ನು ನೀಡಲಾಗಿದೆ.