ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರ ಇದುವರೆಗೂ ಒಂದು ಅಲಿಖಿತ ನಂಬಿಕೆ ಇತ್ತು. ಗರ್ಭಿಣಿಯಾದರೆ ದೇಹ ದಪ್ಪಗಾಗಿಬಿಡುತ್ತದೆ, ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೇಕಪ್ ಮೇಲಿನ ವ್ಯಾಮೋಹ ಹೋಗುತ್ತದೆ ಇವೇ ಇತ್ಯಾದಿ. ಆದರೆ ಅದನ್ನು ಸುಳ್ಳಾಗಿಸುವ ಸುದ್ದಿ ಇಲ್ಲಿದೆ. ಗರ್ಭಿಣಿಯರ ಆರೈಕೆ ಮತ್ತು ಪ್ರಸವ ನಂತರ ಸೌಂದರ್ಯ ಹಿಂಪಡೆಯಲು ವೈದ್ಯಕೀಯ ನೆರವು ಪಡೆದುಕೊಳ್ಳಬಹುದು. ಗರ್ಭಿಣಿಯಾದರೆ ಹೆಣ್ಣುಮಕ್ಕಳ ಬದುಕು ಮುಗಿದೇ ಹೋಯಿತು ಎನ್ನುವ ಕಾಲ ಈಗಿಲ್ಲ. ಕರೀನಾ ಕಪೂರ್ ರಿಂದ ಹಿಡಿದು ಹಲವು ಮಂದಿ ಸೆಲಬ್ರಿಟಿಗಳು ಗರ್ಭಿಣಿಯಾಗಿದ್ದಾಗ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಹೊಟ್ಟೆಯನ್ನು ಪ್ರದರ್ಶಿಸಿ ಎಲ್ಲರ ಹುಬ್ಬೇರಿಸಿದ್ದರು. ಸೌಂದರ್ಯ ಸಾಧನಗಳು, ಫಿಟ್ ನೆಸ್, ಡಯೆಟ್ ಬಗ್ಗೆ ಹೆಣ್ಣುಮಕ್ಕಳಿಗಿರುವ ಆಸ್ಥೆಯ ಬಗ್ಗೆ ಹೆಚ್ಚೇನನ್ನೂ ಹೇಳುವಂತಿಲ್ಲ. ಅವುಗಳಿಗೆ ಇದುವರೆಗೂ ಒಂದು ಅಲಿಖಿತ ನಂಬಿಕೆ ಇತ್ತು.. ಗರ್ಭಿಣಿಯಾದರೆ ದೇಹ ದಪ್ಪಗಾಗಿಬಿಡುತ್ತದೆ, ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೇಕಪ್ ಮೇಲಿನ ವ್ಯಾಮೋಹ ಹೋಗುತ್ತದೆ ಇವೇ ಇತ್ಯಾದಿ. ಆದರೆ ಅದನ್ನು ಸುಳ್ಳಾಗಿಸುವ ಸುದ್ದಿ ಇಲ್ಲಿದೆ. ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಹೊಸ ವಿಭಾಗವೇ ನಮ್ಮ ನಡುವೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಹಾಗೆ ನೋಡಿದರೆ ಕಾಸ್ಮೆಟಿಕ್ಸ್ ಮತ್ತು ಗೈನಕಾಲಜಿ ಎನ್ನುವುದು ಇದುವರೆಗೂ ವಿರುದ್ಧ ಪದಗಳೆಂಬಂತೆ ತೋರುತ್ತಿದ್ದವು. ಆದರೀಗ ಅವೆರಡನ್ನೂ ಮಿಳಿತಗೊಳಿಸಿ ಹೊಸ ವಿಭಾಗವೇ ಎದ್ದು ನಿಂತಿದೆ. ಗರ್ಭಿಣಿಯಾಗಿದ್ದಾಗ ಎದುರಾಗುವ ಸಮಸ್ಯೆಗಳು ಹಾಗೂ ಲೈಂಗಿಕ ಸಮಸ್ಯೆಗಳಿಗೆ ಈ ವಿಭಾಗ ಪರಿಹಾರ ಸೂಚಿಸುತ್ತದೆ. ಸಿಸೇರಿಯನ್ ಮಾಡುವ ವೇಳೆ ಕೆಲವೇ ನಿಮಿಷಗಳ ಅವಧಿಯಲ್ಲಿ ಪೆನಿಕ್ಯುಲೆಕ್ಟಮಿ ಶಸ್ತ್ರಚಿಕಿತ್ಸೆಯನ್ನೂ ಜೊತೆಯಾಗಿ ಮಾಡಿಸಿಕೊಳ್ಲಬಹುದು. ದೇಹದಲ್ಲಿನ ಹೆಚ್ಚುವರಿ ಕೊಬ್ಬಿನಂಶವನ್ನು ತೆಗೆಯಲು ಇದು ಸಹಕಾರಿ. ಅಲ್ಲದೆ ಗಾಯ ಬಹಳ ಬೇಗನೆ ವಾಸಿಯಾಗಲು ನೆರವು ನೀಡುತ್ತದೆ ಈ ಪ್ರಕ್ರಿಯೆ. ಗಾಯದ ಕಲೆ ಉಳಿಯುವುದಿಲ್ಲ ಎನ್ನುವುದು ಇದರ ಹೆಗ್ಗಳಿಕೆ.ಶೇ.೩೦ ಪ್ರತಿಶತ ಹೆಣ್ಣುಮಕ್ಕಳು ಪಿಸಿಒಎಸ್/ ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಾರೆ. ಮುಖದ ಮೇಲಿನ ಕೂದಲು, ಮೊಡವೆ ಮತ್ತಿತರ ಕಲೆಗಳನ್ನು ಲೇಸರ್ ಮೂಲಕ ಗುಣಪಡಿಸಬಹುದು. ಪ್ರೆಗ್ನೆನ್ಸಿ ನಂತರ ದೈಹಿಕ ಸೌಂದರ್ಯವನ್ನು ಮರಳಿ ಪಡೆಯಲು, ಸರ್ಜರಿ ಇಲ್ಲದೆ ಕೊಬ್ಬು ಕರಗಿಸಲು ಕ್ರೈ ಲೈಪೊಲಿಸಿಸ್ ಮತ್ತು ರೇಡಿಯೊ ಫ್ರೀಕ್ವೆನ್ಸಿ ತಂತ್ರಜ್ನಾನವನ್ನು ಬಳಸುತ್ತಾರೆ. ಡೆಲಿವರಿ ನಂತರ ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಹೊಂದಲು ಈ ಪ್ರಕ್ರಿಯೆ ಸಹಕಾರಿ. ಆತ್ಮವಿಶ್ವಾಸವನ್ನು ಇದು ನೀಡುತ್ತದೆ.ಆಂಟಿ ಏಜಿಂಗ್ ಔಷಧಿ ಸಹಾಯದಿಂದ , , , ಹಾಗೂ ಮೂತ್ರಕೋಶ ಸೋಂಕನ್ನು ತಡೆಗಟ್ಟಬಹುದು. ಅಲ್ಲದೆ ಎಲೆಕ್ಟ್ರೊ ಮ್ಯಾಗ್ನೆಟಿಕ್ ಚೇರ್ ಎನ್ನುವ ವಿಧಾನವನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ಕಿತ್ಸೆಗೆ ಪ್ರತಿ ಗಂಟೆಗೆ 1,000 ರೂ. ಶುಲ್ಕವಿದೆ.ಸೆಕ್ಸ್ ವಿಷಯಕ್ಕೆ ಬಂದಾಗ ಸಮಾಜದಲ್ಲಿ ಏರುಪೇರು ಕಂಡುಬರುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಬಹುತೇಕ ಮಹಿಳೆಯರು ಪುರುಷ ಸಂಗಾತಿಗಳಿಗೆ ಹೋಲಿಸಿದರೆ ಲೈಂಗಿಕ ಸಂತೃಪ್ತಿಯನ್ನು ಹೊಂದುವುದಿಲ್ಲ. ಪಿಆರ್ ಪಿ ಟ್ರೀಟ್ ಮೆಂಟ್, . , ಮಹಿಳೆಯರಿಗೆ ಲೈಂಗಿಕ ಸಂತೃಪ್ತಿ ದೊರಕಿಸಿಕೊಡುವಲ್ಲಿ ಸಹಕಾರಿ.ಪಿ ಆರ್ ಪಿ ಅನ್ನುವುದು ನಮ್ಮ ರಕ್ತದಲ್ಲೇ ಇರುವ ಅಂಶ. ಆದನ್ನು ಹೊರತೆಗೆದು ದೇಹದ ಯಾವುದೇ ಭಾಗಕ್ಕೆ ಇಂಜೆಕ್ಟ್ ಮಾಡುವುದರಿಂದ ಹಲವು ಆರೋಗ್ಯಕರ ಲಾಭವನ್ನು ಪಡೆದುಕೊಳ್ಲಬಹುದಾಗಿದೆ. ಐವಿಎಫ್ ವೈಫಲ್ಯತೆ, ಗರ್ಭಪಾತ ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲುದು.ಎಸ್ಟ್ರೋಜೆನ್ ಹಾರ್ಮೋನ್ ಸಹಾಯದಿಂದ ಉರಿ, ಮೂತ್ರಕೋಶ, ಯೋನಿಯಲ್ಲಿನ ಸೋಂಕನ್ನು ತಡೆಗಟ್ಟಬಹುದು. ಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳಮಹಿಳೆಯರು ತಿಳಿದಿರಬೇಕಾದ 4 ಸಂತಾನ ನಿಯಂತ್ರಣ ಮಾರ್ಗಗಳುಕೊರೋನಾ ಎಫೆಕ್ಟ್: ದಂಪತಿಗಳಿಗೆ ವರವಾದ 'ವರ್ಕ್ ಫ್ರಂ ಹೋಮ್', ನೈಸರ್ಗಿಕ ಗರ್ಭಧಾರಣೆಯಲ್ಲಿ ಹೆಚ್ಚಳ!ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳು: ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಹೆಚ್ಚು'ಬಿಪಿ' ನಿರ್ಲಕ್ಷ್ಯದಿಂದ ದೇಹದಲ್ಲಿ ರೋಗದ ಹೊರೆ ಹೆಚ್ಚಾಗಲಿದೆ: ಹೈಪರ್'ಟೆನ್ಶನ್ ಕುರಿತು ಅಧ್ಯಯನಕ್ಯಾನ್ಸರ್ ರೋಗಿಗಳ ನೆಚ್ಚಿನ ಔಷಧ ಪದ್ಧತಿ ಆಯುರ್ವೇದ: ಸಮೀಕ್ಷೆಯಿಂದ ಬಹಿರಂಗತುಂಬಾ ಹೊತ್ತು ಮೊಬೈಲ್ ಪರದೆ ದಿಟ್ಟಿಸುವ ಮಕ್ಕಳಲ್ಲಿ ಸಮೀಪದೃಷ್ಟಿ ದೋಷಕಳೆದ 30 ವರ್ಷಗಳಲ್ಲಿ ಹೈಪರ್ ಟೆನ್ಷನ್ ಪ್ರಮಾಣ ದುಪ್ಪಟ್ಟುಕೊರೊನಾ ವಾಸಿಯಾದವರಲ್ಲಿ ಕೂದಲು ಉದುರುವಿಕೆ ಅಡ್ಡ ಪರಿಣಾಮ ಪತ್ತೆ