ಡ್ರೈವರ್ ಇಲ್ಲದ ಗೂಗಲ್ ಕಾರು! ಚಾಲಕ ರಹಿತ ಕಾರುಗಳ ಸಾಧ್ಯತೆ ಬಗ್ಗೆ ವರ್ಷಗಟ್ಟಲೇ ದೊಡ್ಡ ಚರ್ಚೆಯಾಗಿದೆ. ಆದರೆ ಗೂಗಲ್ ಕಂಪನಿಯು ಸುಮಾರು ಒಂದು ಸಾವಿರ ಕಿ.ಮೀ.. ಚಾಲಕ ರಹಿತ ಕಾರುಗಳ ಸಾಧ್ಯತೆ ಬಗ್ಗೆ ವರ್ಷಗಟ್ಟಲೇ ದೊಡ್ಡ ಚರ್ಚೆಯಾಗಿದೆ. ಆದರೆ ಗೂಗಲ್ ಕಂಪನಿಯು ಸುಮಾರು ಒಂದು ಸಾವಿರ ಕಿ.ಮೀ. ದೂರವನ್ನು ಚಾಲಕ ರಹಿತ ಕಾರನ್ನು ಪರೀಕ್ಷಾರ್ಥವಾಗಿ ಓಡಿಸಿದೆ. ತಂತ್ರಜ್ಞಾನದ ನಾನಾ ಮಜಲುಗಳನ್ನು ಇನ್ನು ಅಭ್ಯಸಿಸುತ್ತಿರುವ ಗೂಗಲ್, ಚಾಲಕ ರಹಿತ ಕಾರಿನ ಸಾಧ್ಯಾಸಾಧ್ಯತೆ ಹಾಗೂ ಸವಾಲಿನ ಬಗ್ಗೆ ಇನ್ನೂ ಸಂಶೋಧನೆ ನಡೆಸುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಕಾರಿನ ಆಸುಪಾಸಿನಲ್ಲಿರುವ ವಸ್ತು ಹಾಗೂ ಸಂವೇದನೆಗಳನ್ನು ಅರ್ಥೈಸಿಕೊಳ್ಳಲು ಸಫಲವಾಗಿದೆ ಎಂದು ಗೂಗಲ್ ಹೇಳಿಕೊಂಡಿದೆ. ಆದರೆ ರಸ್ತೆಯ ಎಲ್ಲ ನಿಯಮಗಳನ್ನು ಅರ್ಥೈಸಿಕೊಂಡು ಸ್ವಯಂ ಚಾಲನೆ ಮಾಡಲು ಕಾರು ವಿಫಲವಾಗುತ್ತಿದೆ. ಅಮೆರಿಕದಂಥ ದೇಶದ ಇಂಟರ್ನೆಟ್ ವ್ಯವಸ್ಥೆಯಲ್ಲಿಯೇ ಜಿಪಿಎಸ್ ಆಧರಿಸಿ ಎಲ್ಲ ಸಂದೇಶಗಳನ್ನು ಗ್ರಹಿಸಿ ಚಾಲಕ ರಹಿತ ವ್ಯವಸ್ಥೆ ರೂಪಿಸುವುದು ಗೂಗಲ್‌ಗೆ ತುಸು ಕಷ್ಟವೇ ಆಗುತ್ತಿದೆ. ಆದರೆ ಇನ್ನೆರಡು ವರ್ಷದೊಳಗೆ ರಸ್ತೆಗೆ ಬರಲಿದೆ ಎಂಬ ವಿಶ್ವಾಸವನ್ನು ಗೂಗಲ್ ವ್ಯಕ್ತಪಡಿಸಿದೆ.