ಸಿಮೆಂಟಿನಲ್ಲಿ ಅರಳಿದ ಗಾಂಧಿ ಒಂದು ದಿನ ನಾನು ಗಾಂಧಿಭವನದ ದಾರಿಯಲಿ, ಸಾಗುತ್ತಿದ್ದಾಗ ಕಲಾವಿದರ ದಂಡೇ ಸೇರಿತ್ತು. ಎಲ್ಲರೂ ನೋಡಿ .... ಒಂದು ದಿನ ನಾನು ಗಾಂಧಿಭವನದ ದಾರಿಯಲಿ, ಸಾಗುತ್ತಿದ್ದಾಗ ಕಲಾವಿದರ ದಂಡೇ ಸೇರಿತ್ತು. ಎಲ್ಲರೂ ನೋಡಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದರು. ಅವರು ಮಾಡುತ್ತಿದ್ದ ಗಾಂಧೀಜಿಯವರ ಸಿಮೆಂಟ್ ಕಲಾಕೃತಿಗಳನ್ನು ಗಮನಿಸಿದ ನಾನು ಒಂದು ಕ್ಷಣ ಮೂಕವಿಸ್ಮಿತನಾದೆ. ದಾರಿಯಲ್ಲಿ ಸಾಗುವವರೆಲ್ಲರೂ ಈ ಕಡೆಗೆ ತಿರುಗಿ ಹುಬ್ಬನ್ನೇರಿಸುವವರೇ, ಧನ್ಯವಾದಗಳನ್ನು ತಿಳಿಸುವವರೇ. ಸಿಮೆಂಟ್‌ನಲ್ಲಿ ಅರಳಿದ ಗಾಂಧೀಜಿ ಮತ್ತು ಅವರ ಅನುಯಾಯಿಗಳ ಕಲಾಕೃತಿಗಳು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧೀಭವನದ ಆವರಣದಲ್ಲಿ ಎಲ್ಲರನ್ನು ಆಕರ್ಷಿಸುತ್ತಿವೆ. ಗಾಂಧಿ ಭವನದ ಆವರಣ ಪ್ರವೇಶಿಸಿದಾಗ ಮನಸ್ಸಿಗೆ ಹಿತಕರ ಗಾಳಿ ಸೋಕುತ್ತದೆ. ಇಲ್ಲಿ 10 ದಿನದ ಸಿಮೆಂಟ್ ಕಲಾಕೃತಿಗಳ ಶಿಬಿರ ನಡೆದಿದ್ದು, ಒಟ್ಟು 14 ಕಲಾಕೃತಿಗಳು ಸಿದ್ಧವಾಗಿವೆ. ಇದರಲ್ಲಿ ಸರ್ವಧರ್ಮ ಸಮನ್ವಯತೆ ಸಾರುವ ಚಿತ್ರ, ಚಿತ್ರಕಲಾ ಪರಿಷತ್ತಿನ ಶಿಲ್ಪಕಲಾ ಮುಖ್ಯಸ್ಥ ನಾಗರ್ರ ಪ್ರಧಾನಿ ರಚಿಸಿರುವ ಕಸ್ತೂರ್ ಬಾ ಭಿತ್ತಿಚಿತ್ರ ಭಿನ್ನವಾಗಿದೆ. ಗಾಂಧಿಯ ಧ್ಯಾನಚಿತ್ರ , ಗಾಂಧೀಜಿ ಮತ್ತು ಮನುವಿನ ಕಲಾಕೃತಿಗಳು, ಗಾಂಧೀಜಿ ಆಸೀನಾವದ ಕಲಾಕೃತಿ, ಗಾಂಧೀಜಿ ವಾಯುವಿಹಾರಕ್ಕಾಗಿ ತನ್ನ ಮೊಮ್ಮಗನ ಜೊತೆ ಹೋಗುವ ಕಲಾಕೃತಿಗಳು ಮಂತ್ರಮುಗ್ಧರನ್ನಾಗಿಸುತ್ತವೆ. ಈ ಶಿಬಿರದಲ್ಲಿ ಒಟ್ಟು 14 ಮುಖ್ಯ ಶಿಲ್ಪಕಲಾವಿದರು , 15 ಸಹ ಶಿಲ್ಪಕಲಾವಿದರು ಹಗಲು ರಾತ್ರಿಯೆನ್ನದೆ ಈ ಕಾರ್ಯದಲ್ಲಿ ತೊಡಗಿದ್ದಾರೆ. ಬಳ್ಳಾರಿ, ಶಿವಮೊಗ್ಗ , ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಹಂಪೆ, ಗುಲ್ಬರ್ಗ ಕಲಾವಿದರ ದಂಡೇ ಇಲ್ಲಿ ಬಂದು ಒಂದಕ್ಕಿಂತ ಒಂದು ಭಿನ್ನ ಕಲಾಕೃತಿಗಳನ್ನು ಮಾಡಿದೆ. ಈ ಶಿಬಿರದ ನಿರ್ದೇಶಕರು ಕಲಾವಿದರಾದ ಶ್ರೀಯುತ ವೆಂಕಟಾಚಲಪತಿ ಮಾಜಿ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು ಮತ್ತು ಶಿಲ್ಪಕಲಾ ಅಕಾಡಮಿಯ ಸದಸ್ಯರು, ಸಂಚಾಲಕರಾದ ಶ್ರೀ ಕುಮಾರ ವೈ, ಗಾಂಧೀ ಭವನದ ಅಧ್ಯಕ್ಷ ಡಾ. ಹೊ. ಶ್ರೀನಿವಾಸಯ್ಯನವರ ನೇಕೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ. ಇದರ ಸಂಪೂರ್ಣ ಜವಾಬ್ದಾರಿ ಅಂದರೆ ಕರ್ನಾಟಕ ಶಿಲ್ಪಕಲಾ ಅಕಾಡು ಕಲಾವಿದರಿಗೆ ಸಂಭಾವನೆ ಮತ್ತು ಗಾಂಧೀಭವನದ ಅತಿಥ್ಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಇಂತಹ ಚಿತ್ರಗಳು ಇಂದಿನ ಯುವಜನತೆಯ ಮೇಲೆ ಗಾಂಧೀ ತತ್ವಗಳ ಅನುಕರಣೆ ಮಾಡುವಲ್ಲಿ ಸಹಾಯಕವಾಗಲಿದೆ. ಇದು ಇಂದಿನ ಜನರಿಗೆ ಒಳ್ಳೆಯ ಸಂದೇಶವನ್ನು ನೀಡುತ್ತದೆ. ಚಿತ್ರ, ಲೇಖನ: ಬಳಕೂರು ವಿ.ಎಸ್. ನಾಯಕ್