ನೋಡ ಬನ್ನಿ ನಮ್ಮೂರ ಹುಬ್ಬಳ್ಳಿ ಬಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಭಾರತದ ರಾಷ್ಟ್ರಧ್ವಜ ತಯಾರಿಸಿ, ಪೂರೈಸಲು ಅನುಮತಿ ಪಡೆದಿರುವ ದೇಶದ ಏಕೈಕ ಘಟಕ. 1957ರಲ್ಲಿ ಸಂಘ ಆರಂಭವಾಯಿತು. 'ಕರ್ನಾಟಕ ಸಂಗೀತದ ಪಿತಾಮಹ' ಪುರಂದರದಾಸರು ಜನಿಸಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಎನ್ನುತ್ತಾರೆ ಸಂಶೋಧಕರು. ಅವರು ರಚಿಸಿರುವ ಸಾವಿರಕ್ಕೂ ಹೆಚ್ಚು ಕೀರ್ತನೆಗಳು ಇಂದಿಗೂ ಸಹ ಪ್ರಸ್ತುತವಾಗಿವೆ. ಕೃಷ್ಣರಾಜ ಸಾಗರ ಅಣೆಕಟ್ಟೆ ಹಿಂದಿನ ಶಕ್ತಿ ಸರ್ ಎಂ.ವಿಶ್ವೇಶ್ವರಯ್ಯ. ಅವರ ಜನ್ಮದಿನವಾದ ಸೆಪ್ಟೆಂಬರ್ 15ನ್ನು ಪ್ರತಿವರ್ಷ ಭಾರತದಲ್ಲಿ 'ಎಂಜಿನಿಯರುಗಳ ದಿನ' ಎಂದು ಆಚರಿಸಲಾಗುತ್ತದೆ.