ಹಾರ್ಲೀ ಡೇವಿಡ್ಸನ್: 3 ಸೂಪರ್ ಬೈಕ್‌ಗಳು ಭಾರತದ ಮಾರುಕಟ್ಟೆಗೆ ಅಮೆರಿಕದ ಪ್ರತಿಷ್ಠಿತ ಕಂಪನಿ ಹಾರ್ಲೀ ಡೇವಿಡ್ಸನ್ ಅತ್ಯಾಧುನಿಕ ಮೂರು ಹೊಸ ಬೈಕ್‌ಗಳನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. ಮುಂಬೈ: ಅಮೆರಿಕದ ಪ್ರತಿಷ್ಠಿತ ಕಂಪನಿ ಹಾರ್ಲೀ ಡೇವಿಡ್ಸನ್ ಅತ್ಯಾಧುನಿಕ ಮೂರು ಹೊಸ ಬೈಕ್‌ಗಳನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. ಇದರಲ್ಲಿ ಸಿವಿಓ ಲಿಮಿಟೆಡ್ ಬೈಕ್ ನ ಬೆಲೆ ಅರ್ಧ ಕೋಟಿ. ಈ ಮೂರು ಸೂಪರ್ ಬೈಕ್‌ಗಳ ಬೆಲೆ 16 ಲಕ್ಷದಿಂದ 50 ಲಕ್ಷ ರುಪಾಯಿವರೆಗೂ ಇದೆ. ಬ್ರೇಕ್ ಔಟ್, ಸ್ಟ್ರೀಟ್ ಗ್ಲೈಡ್ ಸ್ಪೆಷಲ್ ಮತ್ತು ಸಿವಿಓ ಮಾಡೆಲ್‌ಗಳು ಇನ್ನುಂದೆ ಭಾರತೀಯರ ಕೈಗೂ ಸಿಗಲಿದೆ. ಹರಿಯಾಣದ ಬಾವಲ್'ನಲ್ಲಿರುವ ಹಾರ್ಲೇ-ಡೇವಿಡ್ಸನ್ ಕಂಪನಿಯ ಉತ್ಪಾದನಾ ಘಟಕದಲ್ಲಿ ಬ್ರೇಕ್'ಔಟ್ ಬೈಕನ್ನು ತಯಾರಿಲಾಗುತ್ತದೆ. ಆದರೆ, ಸ್ಟ್ರೀಟ್ ಗ್ಲೈಡ್ ಮತ್ತು ಸಿವಿಓ ಬೈಕುಗಳನ್ನು ಅಮೆರಿಕದಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಸಿವಿಓ ಬೈಕು ಭಾರತದಲ್ಲಿ ಲಭ್ಯವಿರುವ ಅತ್ಯುನ್ನುತ ಬೈಕೆನಿಸಿದೆ. ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲು ಯತ್ನಿಸುತ್ತಿರುವ ಕಂಪನಿಯು ಈ ವರ್ಷಾಂತ್ಯಕ್ಕೆ ಬೆಂಗಳೂರು ಮತ್ತು ಸೂರತ್'ನಲ್ಲಿ ಇನ್ನೆರಡು ಡೀಲರ್'ಶಿಪ್ ತೆರೆಯಲು ನಿರ್ಧರಿಸಿದೆ. ಇದರೊಂದಿಗೆ ಭಾರತದಲ್ಲಿ ಕಂಪನಿಯ ಔಟ್'ಲೆಟ್'ಗಳ ಸಂಖ್ಯೆ 17ಕ್ಕೇರಿದಂತಾಗುತ್ತದೆ. ಮೈಸೂರಿನಂಥ ಟೈಯರ್-1 ನಗರಗಳಲ್ಲೂ ಹಾರ್ಲೆ-ಡೇವಿಡ್ಸನ್ ಡೀಲರ್'ಶಿಪ್ ಆರಂಭಿಸುವ ಚಿಂತನೆಯೂ ಇದೆ. ಒಟ್ಟಿನಲ್ಲಿ ಭಾರತದಲ್ಲಿರುವ ಬುಲೆಟ್ ಸಾಮ್ರಾಜ್ಯಕ್ಕೆ ನುಗ್ಗಲು ಹಾರ್ಲೇ ಸಕಲ ಕಸರತ್ತನ್ನು ಮಾಡುತ್ತಿದೆ. ಹಾರ್ಲೆ-ಡೇವಿಡ್ಸನ್ ಮಾಡೆಲ್‌ಗಳು ಬ್ರೇಕೌಟ್ - 16.28 ಲಕ್ಷ ರು. ಸ್ಟ್ರೀಟ್ ಗ್ಲೈಡ್ - 29.7 ಲಕ್ಷ ರು. ಸಿವಿಓ ಲಿಮಿಟೆಡ್ - 49.23 ಲಕ್ಷ ರು.