ಶೆವರ್ಲೆ ಶೆವರ್ಲೆ ಕಂಪನಿ ಕೂಡ ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಯಾವುದೇ ಹೊಸ ವಾಹನಗಳನ್ನು ಪರಿಚಯಿಸಿಲ್ಲ. ಇರುವ ವಾಹನಗಳು ಕೂಡ ಗ್ರಾಹಕರನ್ನು ಪ್ರಬಲವಾಗಿ ಆಕರ್ಷಿಸುತ್ತಿಲ್ಲ. ಆದರೆ ಶೆವರ್ಲೆ ಕಂಪನಿ ಕ್ಯಾಪ್ಟಿವಾ ಹೋಲುವ ಮಿನಿ ಎಸ್‌ಯುವಿಯನ್ನು ಮಾರುಕಟ್ಟೆಗೆ ಬೇಗನೆ ಪರಿಚಯಿಸಿದರೆ ಮಿನಿ ಎಸ್‌ಯುವಿ ಗ್ರಾಹಕರನ್ನು ಸೆಳೆಯಲು ಸಹಕಾರಿ. ಈಗಾಗಲೇ ಶೆವರ್ಲೆ ಕಂಪನಿ 'ಟ್ರ್ಯಾಕ್ಸ್‌' ಹೆಸರಿನ ಮಿನಿ ಎಸ್‌ಯುವಿಯನ್ನು ಬೇರೆ ದೇಶಗಳಲ್ಲಿ ಪರಿಚಯಿಸಿದೆ. ಆದರೆ ಭಾರತದಲ್ಲಿ ಫೋರ್ಸ್ ಮೋಟಾರ್ಸ್ ಸಂಸ್ಥೆ 'ಟ್ರ್ಯಾಕ್ಸ್‌' ಹೆಸರಿನ ಸ್ವಾಮ್ಯ ಹೊಂದಿದೆ. ಇದರಿಂದಾಗಿ ಬೇರೆ ಹೆಸರನ್ನು ಶೆವರ್ಲೆ ಕಂಪನಿ ಇಡಬೇಕಾಗುತ್ತದೆ. ಈ ಕಾರಿನಲ್ಲಿ ಫಿಯೆಟ್ 1.3ಲೀ. ಮಲ್ಟಿಜೆಟ್ ಡೀಸೆಲ್ ಎಂಜಿನ್ ಕಾರ್ಯನಿರ್ವಹಿಸಲಿದ್ದು, 1.4 ಲೀ. ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಲ್ಲೂ ವಾಹನ ಲಭ್ಯವಿರುವ ಸಾಧ್ಯತೆ ಇದೆ. ಈ ಕಾರು ಆದಷ್ಟು ಬೇಗ ಭಾರತದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. - ವಕ್ರದಂತ