ಎಲ್ಲೆಲ್ಲೂ ಸೌಂದರ್ಯವೇ... ಹುಡುಕುವ ಕಣ್ಣಿದ್ದರೆ ಎಲ್ಲೆಲ್ಲೂ ಸೌಂದರ್ಯವನ್ನು ನೋಡಬಹುದು. ಕೇವಲ ಹುಲ್ಲೆಂದು ಅವಗಣನೆಗೆ ಒಳಗಾಗುವ ಹುಲ್ಲೂ ಚೆಲುವನ್ನು ತೋರಿಸಬಲ್ಲದು. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ- ನಾನು ಹಸುಗಳಿಗೆಂದು ಒಂದಿಷ್ಟು ಸರಕಾರಿ ಹುಲ್ಲು ನಾಟಿ ಮಾಡಿದ್ದೆ. ಅವುಗಳಲ್ಲಿ ಕೆಲವನ್ನು ಕಡಿದು ಹಸುಗಳಿಗೆ ಹಾಕದೆ ಹಾಗೇ ಬಿಟ್ಟಿದ್ದೆ. ಹಾಗೆ ಬಿಟ್ಟ ಹುಲ್ಲುಗಳಲ್ಲಿ ಒಂದೊಂದೇ ತೆನೆಗಳು ಮೂಡುತ್ತಿದ್ದವು. ಅವು ಬಿಳಿ, ಕಂದು, ಕೆಂಪು ಮೊದಲಾದ ಬಣ್ಣಗಳಿಂದ ಕೂಡಿದ್ದವು. ಅವುಗಳಿಗೆ ಮರುಳಾದ ನಾನು ಅವುಗಳ ಸೌಂದರ್ಯವನ್ನು ನನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಿಕೊಂಡೆ. ಹಾಗೆ ಕ್ಲಿಕ್ಕಿಸಿಕೊಂಡ ಮುದ್ದಾದ ಚಿತ್ತಾರಗಳು ನೀವೂ ನೋಡಿ ಆನಂದಿಸಲಿ ಎಂಬ ಉದ್ದೇಶದಿಂದ ಇಲ್ಲಿವೆ. - ಗಣಪತಿ ಬಾಳೆಗದ್ದೆ