ಹೆಚ್ಚು ಕಾರು ಮಾರುತಿ ಮಾರುತಿ ಸುಝುಕಿ ಮಿನುಗುತ್ತಿದೆ...ಕಾರಣ, ಭಾರತೀಯ ಕಾರು ಮಾರುಕಟ್ಟೆಯ ಟಾಪ್-10 ಕಾರುಗಳಲ್ಲಿ ಮಾರುತಿ ಸುಝುಕಿ... ಮಾರುತಿ ಸುಝುಕಿ ಮಿನುಗುತ್ತಿದೆ... ಕಾರಣ, ಭಾರತೀಯ ಕಾರು ಮಾರುಕಟ್ಟೆಯ ಟಾಪ್-10 ಕಾರುಗಳಲ್ಲಿ ಮಾರುತಿ ಸುಝುಕಿಯ 5 ಬ್ರಾಂಡ್‌ಗಳು ಸೇರಿರುವುದು. ಹೋಂಡಾ ಅಮೇಝ್ ಒಂದನ್ನು ಬಿಟ್ಟರೆ ಹಳೆಯ ಕಾರುಗಳು ಅಥವಾ ಅದರ ಫೇಸ್‌ಲಿಫ್ಟೆಡ್ ಮಾದರಿಗಳೇ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. 2013-14ನೇ ಆರ್ಥಿಕ ವರ್ಷದ ಆರಂಭ ಹಾಗೂ ಅದಕ್ಕೂ ಮುಂಚೆ ಆಟೋಮೊಬೈಲ್ ಮಾರುಕಟ್ಟೆಯ ಕುಸಿತವನ್ನು ನಿಯಂತ್ರಿಸಿದ್ದ ಡಸ್ಟರ್ ಹಾಗೂ ಇಕೋಸ್ಪೋರ್ಟ್‌ಗಳ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದ್ದು, ಭಾರತೀಯರು ಮತ್ತೆ ಸಣ್ಣ ಕಾರುಗಳ ಬಗೆಗಿನ ತಮ್ಮ ಒಲವನ್ನು ಮುಂದುವರಿಸಿದ್ದು ಅರಿವಿಗೆ ಬರುತ್ತದೆ. ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮೊದಲ 4 ಹಾಗೂ 9ನೇ ಸ್ಥಾನವನ್ನು ಮಾರುತಿ ಸುಝುಕಿಯ ಹ್ಯಾಚ್‌ಬ್ಯಾಕ್ ಅಥವಾ ಸೆಡಾನ್‌ಗಳು ಆಕ್ರಮಿಸಿಕೊಂಡಿವೆ. ಉಳಿದ 5 ಸ್ಥಾನಗಳಲ್ಲಿ 3 ಹುಂಡೈ ಹಾಗೂ ತಲಾ ಒಂದು ಹೋಂಡಾ ಮತ್ತು ಮಹೀಂದ್ರಾ ಪಾಲಾಗಿದೆ. ಹಿಂದಿನ 3 ಆರ್ಥಿಕ ವರ್ಷದಿಂದ ಒಟ್ಟಾರೆ ಆಟೋಮೊಬೈಲ್ ಮಾರುಕಟ್ಟೆ ಕುಸಿತದ ಹಾದಿಯಲ್ಲೇ ಸಾಗಿದೆ. ಆದಾಗ್ಯೂ ಎಸ್‌ಯುವಿ ಹಾಗೂ ಕಾಂಪ್ಯಾಕ್ಟ್ ಎಸ್‌ಯುವಿಗಳು ದೊಡ್ಡ ಸದ್ದು ಮಾಡಿದ್ದವು. ಆಶ್ಚರ್ಯಕರ ಬೆಳವಣಿಗೆಯಲ್ಲಿ ಈ ವಿಭಾಗವು ಶೇ.20ರಷ್ಟು ಮಾರಾಟ ಕುಸಿತ ಕಂಡಿದೆ. ಪ್ರಾರಂಭಿಕ ಸೆಡಾನ್‌ಗಳಲ್ಲಿ ಸ್ವಿಫ್ಟ್ ಡಿಝೈರ್‌ನ ಪಾರುಪತ್ಯ ಹಾಗೆಯೇ ಇದೆ. ಅಲ್ಪಮಟ್ಟಿಗೆ ಹೋಂಡಾ ಅಮೇಝ್ ಸ್ಪರ್ಧೆ ನೀಡುತ್ತಿದೆ. ವಿಚಿತ್ರವೆಂದರೆ ಸ್ವಿಫ್ಟ್ ಡಿಝೈರ್ ಒಂದೇ ಗಾಡಿಯ ಒಟ್ಟು ವ್ಯಾಪಾರವು ಹೋಂಡಾ ಕಂಪನಿಯ ಒಟ್ಟು ವ್ಯಾಪಾರಕ್ಕಿಂತ 40 ಸಾವಿರ ಹೆಚ್ಚಾಗಿದೆ. ಆದ್ದರಿಂದ ಸದ್ಯದ ಮಟ್ಟಿಗೆ ಮಾರುತಿ ಆರಾಮಾಗಿರಬಹುದು. ಎಂಟ್ರಿ ಲೆವಲ್ ಸೆಡಾನ್‌ಗಳ ಟಾಪ್-5 ಪಟ್ಟಿಯಲ್ಲಿ ಈಟಿಯೋಸ್, ಮಾಂಝಾ ಹಾಗೂ ಸೇಲ್ ಕಾರುಗಳ ಹೆಸರು ಸೇರ್ಪಡೆಯಾದರೂ ಒಟ್ಟು ಮಾರಾಟವು 20 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು ಸೆಡಾನ್‌ನಲ್ಲಿ ಹುಂಡೈ ವರ್ನಾ ಫ್ಲ್ಯೂಡಿಕ್ ಮೊದಲ ಸ್ಥಾನ ಪಡೆದರೆ, ಡೀಸೆಲ್ ಎಂಜಿನ್ ಮಾರುಕಟ್ಟೆಗೆ ಬಿಟ್ಟ ಪರಿಣಾಮದಿಂದಾಗಿ ಹೋಂಡಾ ಸಿಟಿ ಎರಡನೇ ಸ್ಥಾನ ಗಳಿಸಿದೆ. ಉಳಿದಂತೆ ವೆಂಟೋ, ರ್ಯಾಪಿಡ್ ಹಾಗೂ ಸನ್ನಿ ನಂತರದ ಸ್ಥಾನ ಪಡೆದಿವೆ. ಕಳೆದೆರಡು ವರ್ಷದಿಂದ ಭಾರತದಲ್ಲಿ ಸ್ವಲ್ಪ ಸುದ್ದಿಯಲ್ಲಿರುವುದು ಎಸ್‌ಯುವಿಗಳು. ಅದರಲ್ಲೂ ಡಸ್ಟರ್, ಇಕೋಸ್ಪೋರ್ಟ್‌ಗಳು ಪ್ರತಿಯೊಬ್ಬ ವಾಹನ ಪ್ರಿಯರ ಬಾಯಲ್ಲಿ ಕೇಳಬಹುದಾಗಿತ್ತು. ಆದರೆ ಈ ವಿಭಾಗದಲ್ಲಿ ಅತಿ ಹೆಚ್ಚು ವಾಹನ ಮಾರಾಟವಾಗಿರುವುದು ಮಾತ್ರ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ. ಮಾರಾಟ ಪ್ರಮಾಣದಲ್ಲಿ ಇಂದಿಗೂ ಡಸ್ಟರ್ ಅಥವಾ ಇಕೋಸ್ಪೋರ್ಟ್‌ಗೆ ಸ್ಕಾರ್ಪಿಯೋವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಅಂದಹಾಗೆ ಎಕ್ಸ್‌ಯುವಿ ಹಾಗೂ ಫಾರ್ಚುನರ್‌ಗಳನ್ನು ಹಿಂದಿಕ್ಕಿ ಇವೆರಡು ಗಾಡಿಗಳು ಮುಂದೆ ಸಾಗಿವೆ. ಎಂಯುವಿ ಅಥವಾ ಎಂಪಿವಿ ವಿಭಾಗದಲ್ಲಿ ಇನೋವಾಗಿಂತ ಅರ್ಟಿಗಾ, ಓಮ್ನಿ ಹಾಗೂ ಬೊಲೆರೋ ಮುಂದಿವೆ. 2013-14 ರ ಟಾಪ್ ಲಿಸ್ಟ್ ಆಲ್ಟೊ 800 258,281 ಸ್ವಿಫ್ಟ್ 1,98,571 ಸ್ವಿಫ್ಟ್ ಡಿಝೈರ್ 1,97,685 ವ್ಯಾಗನ್‌ಆರ್ 1,58,954 ಬೊಲೆರೋ 1,07,181 ಹುಂಡೈ ಇಯಾನ್ 86,464 ಹೋಂಡಾ ಅಮೇಝ್ 77,411 ಗ್ರ್ಯಾಂಡ್ ಐ10 72,789 ಮಾರುತಿ ಒಮ್ನಿ 64,164 ಐ10 63,648