ಒರಿಸ್ಸಾದ ಬೆಳವಣಿಗೆ ಕಾರು, ಜೀಪು ಹಾಗೂ ವ್ಯಾನುಗಳ ಮಾರಾಟದಲ್ಲಿ ಯಾವ ರಾಜ್ಯ ಮುಂದಿರಬಹುದು ಊಹಿಸಿ? ಮುಂದುವರಿದ ರಾಜ್ಯಗಳ ಹೆಸರು ನಿಮ್ಮ ತಲೆಯಲ್ಲಿ ಬಂದಿದ್ದರೆ, ಊಹೂಂ. ಅದು ಒರಿಸ್ಸಾ. ಅದು ಹತ್ತು ವರ್ಷಗಳಲ್ಲಿ 293 ಶೇಕಡಾ ಬೆಳವಣಿಗೆ ತೋರಿಸಿದೆಯಂತೆ! ಅತ್ಯಂತ ಹಿಂದಿರುವುದು ಪಶ್ಚಿಮ ಬಂಗಾಳ. ಹಿಮಾಚಲ ಪ್ರದೇಶ ಮತ್ತು ಹರ್ಯಾಣಗಳು ಒರಿಸ್ಸಾದ ನಂತರದ ಸ್ಥಾನದಲ್ಲಿವೆ. ಈ ಲೆಕ್ಕಾಚಾರಗಳನ್ನು ನೀಡಿರುವುದು ಅಸೋಚಾಮ್.