ವೆಸ್ಪಾ- ಹ್ಯಾವ್ ಎ ಹ್ಯಾಪಿ ಜರ್ನಿ! ಭಾರತದಲ್ಲಿ ಮತ್ತೆ ವೆಸ್ಪಾಯುಗ ಶುರುವಾಗಲಿದೆ. ಸ್ಟೈಲೀಶ್ ಹಾಗೂ ಕ್ಯೂಟ್ ಸ್ಕೂಟರ್ ಎಂಬ ಖ್ಯಾತಿ ಹೊಂದಿರುವ ಈ ಸ್ಕೂಟರ್‌ಗೆ ಮತ್ತೆ ಸುದ್ದಿಯಾಗುತ್ತಿದೆ. ವೆಸ್ಪಾ ವಿಎಕ್ಸ್ ಎಕ್ಸ್‌ಕ್ಲೂಸಿವೋ ಸ್ಕೂಟರ್ ಮುಂದಿನವಾರ ಮಾರುಕಟ್ಟೆಗೆ ಬರುತ್ತಿದೆ. ಭಾರತದಾದ್ಯಂತ ಕೇವಲ 1 ಸಾವಿರ ಸ್ಕೂಟರ್ ಮಾರುಕಟ್ಟೆಗೆ ಬರಲಿದ್ದು, ಈಗಿರುವ ವಿಎಕ್ಸ್‌ಗಿಂತ ರು. 3 ಸಾವಿರ ದುಬಾರಿ ಆಗಿರುತ್ತದೆ. ಅಲಾಯ್ ವ್ಹೀಲ್, ಡಿಸ್ಕ್ ಬ್ರೇಕ್, ಎರಡು ಬಣ್ಣದಲ್ಲಿ ಸೀಟ್ ಹಾಗೂ ಎಂಆರ್‌ಎಫ್ ಸೀಟ್‌ಗಳು ಇದರಲ್ಲಿ ಲಭ್ಯವಿರುತ್ತದೆ. ಕಪ್ಪು, ಬಿಳಿ ಹಾಗೂ ಕೆಂಪು ಬಣ್ಣದಲ್ಲಿ ಮಾತ್ರ ಲಭ್ಯವಿದ್ದು, ಕೆಲ ಗ್ರಾಫಿಕ್ಸ್‌ಗಳನ್ನು ಇದರಲ್ಲಿ ಬಳಸಲಾಗಿದೆ.