ಉದ್ದನೆಯ ಎಸ್‌ಯುವಿ! ಬಲಿಷ್ಠ ಎಸ್‌ಯುವಿ ಮೂಲಕ ಭಾರತ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರ ಮಾಡಿಕೊಳ್ಳಲು ಫೋಕ್ಸ್‌ವ್ಯಾಗನ್ ಸಂಸ್ಥೆ ಮುಂದಾಗಿದೆ. ಕೆಲ ಬೆರಳೆಣಿಕೆಯ ಸೆಡಾನ್ ಹಾಗೂ ಒಂದು ಹ್ಯಾಚ್‌ಬಾಕ್ ಮೂಲಕ ಭಾರತೀಯ ಗ್ರಾಹಕರಿಗೆ ನಿಯಮಿತ ಉತ್ಪನ್ನ ನೀಡಿದ್ದ ಫೋಕ್ಸ್‌ವ್ಯಾಗನ್ ಇದೀಗ ಉದ್ದನೆಯ ಎಸ್‌ಯುವಿ ನೀಡಲು ನಿರ್ಧರಿಸಿದೆ. ಏಳು ಸೀಟರ್‌ನ ಈ ಎಸ್‌ಯುವಿ ವರ್ಷಾಂತ್ಯಕ್ಕೆ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಫಾರ್ಚ್ಯುನರ್ ಹಾಗೂ ಸಂಟಾಫೆ ಕಾರುಗಳಿಗೆ ಸ್ಪರ್ಧಿಯಾಗಿ ಇದು ಬರುತ್ತಿದ್ದು, ಬರೋಬ್ಬರಿ 4.6 ಮೀ. ಉದ್ದವಿದೆ. ದರವು ರು. 26ರಿಂದ ರು. 30 ಲಕ್ಷವಿರಬಹುದು ಎಂದು ಅಂದಾಜಿಸಲಾಗಿದೆ.