ಮಾರುಕಟ್ಟೆಗೆ ಲಗ್ಗೆ ಇಟ್ಟ ಆಡಿ ಸೈಕಲ್; ಬೆಲೆ ರು. 12.5 ಲಕ್ಷ ದುಬಾರಿ ಕಾರುಗಳ ನಿರ್ಮಾಣ ಮೂಲಕ ಜಗತ್ತನ್ನು ಗೆದ್ದ ಆಡಿ ಕಂಪನಿ, ಸೈಕಲ್ ನಿರ್ಮಾಣ ಕ್ಷೇತ್ರದಲ್ಲಿ ಗಮನ ಸೆಳೆಯತೊಡಗಿದೆ. ಈ ಸೈಕಲ್... ದುಬಾರಿ ಕಾರುಗಳ ನಿರ್ಮಾಣ ಮೂಲಕ ಜಗತ್ತನ್ನು ಗೆದ್ದ ಆಡಿ ಕಂಪನಿ, ಸೈಕಲ್ ನಿರ್ಮಾಣ ಕ್ಷೇತ್ರದಲ್ಲಿ ಗಮನ ಸೆಳೆಯತೊಡಗಿದೆ. ಈ ಸೈಕಲ್ ಬೆಲೆ ರು. 12.5 ಲಕ್ಷ . ವಿನೂತನ ಸ್ಫೋರ್ಟಿ ವಿನ್ಯಾಸವಿರುವ ಸೈಕಲ್ ಇದಾಗಿದೆ. ಆದಾಗ್ಯೂ, ಕೇವಲ 50 ಯೂನಿಟ್‌ಗಳನ್ನು ಮಾತ್ರ ಕಂಪನಿ ಈಗ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಆಡಿ ಕಾರುಗಳಂತೆಯೇ ಮಾರುಕಟ್ಟೆಗೆ ಬಂದಿರುವ ದುಬಾರಿ ಸೈಕಲ್ ಇದೀಗ ಆಡಿಯ ಟೋಕಿಯೋ ಶೋರೂಂನಲ್ಲಿ ಮಾತ್ರ ಲಭ್ಯವಾಗಿದೆ. 5.8 ಕಿಲೋ ಭಾರವಿರುವ ಈ ಸ್ಫೋಟ್ಸ್ ಸೈಕಲ್‌ನಲ್ಲಿ ಕಾರುಗಳಲ್ಲಿ ಬಳಸಲಾಗುವ ಟಿ1000 ಕಾರ್ಬನ್ ಫೈಬರ್‌ಗಳನ್ನು ಬಳಸಲಾಗಿದೆ. ಡ್ಯೂರ ಆ್ಯಕ್ಸ್ ಪಿಡಿ 9000 ಪೆಡಲ್‌ಗಳು ಮತ್ತು ಡ್ಯೂರಾ ಏಕ್ಸ್ ಬ್ರೇಕ್ ಈ ಸೈಕಲ್‌ನಲ್ಲಿದೆ. ಸೈಕಲ್‌ನ ನಂತರ ಶೀಘ್ರದಲ್ಲೇ ಇ ಬೈಕ್‌ಗಳನ್ನೂ ಮಾರುಕಟ್ಟೆಗೆ ಪರಿಚಯಿಸಲು ಆಡಿ ಸಿದ್ಧತೆ ನಡೆಸಿದೆ.