ಚಿಕ್ಕಮಗಳೂರ ಚೊಕ್ಕ ಮಲ್ಲಿಗೆ ಬಹುಷಃ ಕರ್ನಾಟಕದ ಅದ್ಭುತ ಹೋಮ್‌ಸ್ಟೇಗಳಲ್ಲಿ ಅತಿ ಮುಖ್ಯವಾದುದು ಚಿಕ್ಕಮಗಳೂರಿನ ಕಾರ್ತಿಕ್ ಎಸ್ಟೇಟ್ ಹೋಮ್‌ಸ್ಟೇ. ಚಿಕ್ಕಮಗಳೂರಿನ ಈ ಬಂಗಲೆಯಲ್ಲಿ ನೀವು ನಿಮ್ಮ ರಜೆಯನ್ನು ಕಳೆದಿರಾದರೆ ಅಪೂರ್ವ ಸಂಗೀತದಂತೆ ಮತ್ತೆ ಮತ್ತೆ ಅದು ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಕುಟುಂಬಸಮೇತ ಇಲ್ಲಿ ಹೋಗಿ ಬನ್ನಿ, ಚಿಕ್ಕಮಗಳೂರಿನ ಈ 'ಚೊಕ್ಕ' ಜಾಗದಲ್ಲಿ ಚಿಕ್ಕಚಿಕ್ಕ ಖುಷಿಯೂ ದೊಡ್ಡದಾಗುತ್ತದೆ! ಈ ಹೋಮ್‌ಸ್ಟೇನಿಂದ ಚಿಕ್ಕಮಗಳೂರಿನ ಎಲ್ಲ ಜಾಗಗಳೂ ಅತಿ ಹತ್ತಿರವೇ. ಮೆರವಣಿಗೆ ಹೊರಟ ಕಾಫಿ ಕಣಿವೆಗಳು, ಮಂಜು ತುಂಬಿದ ಕಣಿವೆ ಕಾವ್ಯಗಳು, ಮಾರ್ದನಿಸುವ ದೂರದ ಬೆಟ್ಟಗಳನ್ನು ಕಾರ್ತಿಕ್ ಹೋಮ್‌ಸ್ಟೇ ನಿಂದ ನೋಡುವುದೇ ಹಬ್ಬ. ಸದ್ದುಗದ್ದಲವಿಲ್ಲದ ಪರಿಸರದಲ್ಲಿ, ಮಾಲಿನ್ಯವೇ ಇರದ ವಾತಾವರಣದಲ್ಲಿ 100 ಪರ್ಸಂಟ್ ಆಕ್ಸಿಜನ್ ಪ್ರಿಯರಿಗೆ ಇದು ಆರೋಗ್ಯಧಾಮವೇ ಸರಿ. ಸ್ವಚ್ಛ ವಿಶಾಲ ಕೋಣೆಗಳು, ಬಾತ್‌ರೂಮ್‌ಗಳಿಂದ ಹೈಕ್ಲಾಸ್ ಬಂಗಲೆಯ ಊಟವನ್ನು ನೀವು ಅಲ್ಲಿಂದ ಹೋದ ಮೇಲೂ ಮೆಚ್ಚುತ್ತೀರಿ. ಕರ್ನಾಟಕದ ಅತ್ಯುತ್ತಮ ಹೋಮ್‌ಸ್ಟೇ ಎಂದು ಖ್ಯಾತಿ ಪಡೆದಿರುವ ಈ ಬಂಗಲೆಯ ಸೊಬಗಿಗೆ, ವೈಭವಕ್ಕೆ ಮತ್ತು ಆತಿಥ್ಯದ ಕನಸು ಕಂಡವರು ಅದರ ಮಾಲೀಕರಾದ ವಿಜಯಕುಮಾರ್ ಮತ್ತು ವಿನಯಾ ದಂಪತಿ. ಈ ಬಂಗಲೆಯಿಂದ ಮಾಯಾಲೋಕವೊಂದು ಜನರಿಗೆ ಕಾಣಿಸಬೇಕು. ಪ್ರಕೃತಿಯಲ್ಲಿ ಪರಮಾತ್ಮನನ್ನು ಜನರು ನೋಡಬೇಕು ಎಂಬ ಭಾವದಿಂದ, ಅತಿಥಿ ದೇವೋಭವ ಎನ್ನುವುದನ್ನು ನಂಬಿ ಪಾಲಿಸುತ್ತಿರುವ ದಂಪತಿಗಳ ಅಪರೂಪದ ಕೊಡುಗೆ ಇದು. ಈ ಎಸ್ಟೇಟ್‌ನಿಂದ 12ಕ್ಕೂ ಹೆಚ್ಚು ಪ್ರದೇಶಗಳಿಗೆ ಹೋಗಬಹುದು, ಪಕ್ಷಿಗಳ ದರ್ಶನ, ಬೆಟ್ಟದಲ್ಲಿ ವಾಹನಚಾಲನೆ - ಟ್ರೆಕ್ಕಿಂಗ್, ಕಾಫಿ ಕಣಿವೆಗಳಲ್ಲಿ ಓಡಾಟ ಎಲ್ಲವೂ ಸಾಧ್ಯವಾಗುವ ಈ ಆತಿಥ್ಯದ ಲೋಕಕ್ಕೆ ಒಮ್ಮೆ ಹೋಗಿಬನ್ನಿ! -ಅಂಜಲಿ