ಮಾರುತಿ ಸುಜುಕಿ ಸಂಸ್ಥೆ ವಾಹನಗಳ ಮಾರಾಟ ಶೇ.8 .5 ರಷ್ಟು ಏರಿಕೆ ಅಟೋಮೊಬೈಲ್ ಕ್ಷೇತ್ರದ ದಿಗ್ಗಜ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ವಾಹನಗಳ ಮಾರಾಟ ಡಿಸೆಂಬರ್ ತಿಂಗಳಲ್ಲಿ ಏರಿಕೆ ಕಂಡಿದೆ. ಮುಂಬೈ: ಅಟೋಮೊಬೈಲ್ ಕ್ಷೇತ್ರದ ದಿಗ್ಗಜ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ವಾಹನಗಳ ಮಾರಾಟ ಡಿಸೆಂಬರ್ ತಿಂಗಳಲ್ಲಿ ಏರಿಕೆ ಕಂಡಿದೆ. ಕಳೆದ ತಿಂಗಳಲ್ಲಿ ಶೇ.8 .5 ರಷ್ಟು ಮಾರಾಟ ಏರಿಕೆಯಾಗಿದ್ದು 2014 ರ ಡಿಸೆಂಬರ್ ನಲ್ಲಿ 109,791 ಯುನಿಟ್ ಗಳಷ್ಟಿದ್ದ ಮಾರಾಟ 119 ,149 ಯುನಿಟ್ ಗಳಿಗೆ ಏರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ನವೆಂಬರ್ ತಿಂಗಳಲ್ಲಿ ಸಂಸ್ಥೆಯ ವಾಹನಗಳ ಮಾರಾಟ ಶೇ.9 .7 ರಷ್ಟು ಏರಿಕೆಯಾಗಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಕಾರುಗಳ ಮಾರಾಟ ಶೇ.13 .5 ರಷ್ಟು ಏರಿಕೆಯಾಗಿದ್ದರೆ, ರಫ್ತು ಪ್ರಮಾಣ ಶೇ.33 .1 ಇಳಿಕೆಯಾಗಿದೆ. ಇನ್ನು ಪ್ಯಾಸೆಂಜರ್ ವಿಭಾಗದ ಕಾರುಗಳ ಮಾರಾಟದಲ್ಲಿ ಶೇ.11 .6 ರಷ್ಟು ಏರಿಕೆಯಾಗಿದೆ.