ಅತಿಯಾದ ವ್ಯಾಯಾಮದ ಅಡ್ಡಪರಿಣಾಮಗಳು: ಫಿಟ್ನೆಸ್ ಆಮಿಷಕ್ಕೆ ಬಲಿಯಾಗುತ್ತಿದೆಯೇ ಯುವಪೀಳಿಗೆ? ಇದುವರೆಗೂ ವ್ಯಾಯಾಮ ಮಾಡದೆ ಆಲಸಿಯಾಗಿದ್ದರೆ ಬೊಜ್ಜು ಶೇಖರಣೆಯಾಗಿ ಹೃದಯದ ಸಮಸ್ಯೆಗಳು ಉಂಟಾಗಬಹುದೆಂದು ಹೇಳಲಾಗುತ್ತಿತ್ತು. ಅಂತೆಯೇ ಅತಿಯಾದ ವ್ಯಾಯಾಮ ಮಾಡುವುದರಿಂದಲೂ ಹೃದಯದ ಸಮಸ್ಯೆ ಬರುತ್ತದೆ ಎನ್ನುವ ಸಂಗತಿಯನ್ನು ಹಲವರು ನಂಬಲಿಕ್ಕಿಲ್ಲ. ಆದರೆ ಅದು ವಾಸ್ತವ. ದೈಹಿಕ ವ್ಯಾಯಾಮದ ವಿಷಯಕ್ಕೆ ಬಂದಾಗ ನೂರು ಮಂದಿ ನೂರು ಅಭಿಪ್ರಾಯಗಳನ್ನು ಮುಂದಿಡುತ್ತಾರೆ. ಬಕೆಟ್ ಗಟ್ಟಲೆ ಬೆವರು ಹರಿಸುವುದರಿಂದ ಹಿಡಿದು, ವ್ಯಾಯಾಮ ಮಾಡದೇ ಆಲಸಿಯಾಗಿ ಬಿದ್ದುಕೊಂಡಿರುವುದೇ ಲೇಸು ಎಂಬಲ್ಲಿಯವರೆಗೆ ಆರ್ಗ್ಯುಮೆಂಟುಗಳು ನಮ್ಮ ನಡುವೆ ಇವೆ. ಇದನ್ನೂ ಓದಿ: ಕಳೆದ ಆರು ತಿಂಗಳಲ್ಲಿ ಶೇ.35ರಿಂದ ಶೇ.40ರಷ್ಟು ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಗಳ ಹೆಚ್ಚಳ: ಕೋವಿಡ್ ಕಾರಣ? ಎಂಬ ಆಂಗ್ಲೋಕ್ತಿಯೇ ಇದೆ. ಅತಿಯಾದರೆ ಅಮೃತವೂ ವಿಷ ಎನ್ನುವ ನಾಣ್ಣುಡಿಯೇ ನಮ್ಮಲ್ಲಿಲ್ಲವೇ. ಈ ಮಾತು ವ್ಯಾಯಾಮದ ವಿಚಾರಕ್ಕೆ ಬಂದಾಗ ಹೆಚ್ಚು ಸೂಕ್ತ ಎನ್ನಿಸುತ್ತದೆ. ಸರಿಯಾಗಿ, ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ವ್ಯಾಯಾಮವನ್ನೇ ಮಾಡಿಕೊಂಡು ಹೋದರೆ ಯಾವುದೇ ತೊಂದರೆ ಬಾರದು. ಆ ಬಗೆಯ ವ್ಯಾಯಾಮದಿಂದ ರಕ್ತಪರಿಚಲನೆ, ಜೀರ್ಣಾಂಗ ವ್ಯವಸ್ಥೆ ಮತ್ತು ದೇಹದಿಂದ ಟಾಕ್ಸಿನ್ಸ್ ಗಳನ್ನು ಹೊರಹಾಕುವ ಪ್ರಕ್ರಿಯೆ ಎಲ್ಲವೂ ಸರಾಗವಾಗಿ ನಡೆಯುತ್ತದೆ. ಹಾಗಾದರೆ ನಮ್ಮ ನಮ್ಮ ದೇಹಕ್ಕೆ ಎಷ್ಟು ವ್ಯಾಯಾಮ ಅಗತ್ಯ ಎನ್ನುವುದೇ ನಮ್ಮ ಮುಂದಿರುವ ಅತಿ ದೊಡ್ಡ ಸವಾಲು. ಇದನ್ನೂ ಓದಿ: ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಾರಣವೇನು, ತಪ್ಪಿಸಲು ಏನು ಮಾಡಬಹುದು? ವ್ಯಾಯಾಮ ಅತಿಯಾದರೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎನ್ನುವ ಸಂಗತಿ ಈಗಾಗಲೇ ನಿಮಗೆ ಅರ್ಥವಾಗಿರುತ್ತದೆ. ಅದರಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದು ಅತಿಯಾದ ವ್ಯಾಯಾಮದಿಂದ ಹೃದಯದ ತೊಂದರೆ ಉಂಟಾಗಬಹುದು ಎಂಬುದನ್ನು ದೃಢಪಡಿಸಿದೆ. ಇದನ್ನೂ ಓದಿ: ವೈದ್ಯಕೀಯ ಕ್ಷೇತ್ರದ ಅದ್ಭುತ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿ ಮೂತ್ರಪಿಂಡ ಕಸಿ ಆಪರೇಷನ್‌ ಸಕ್ಸಸ್‌!ಇದುವರೆಗೂ ವ್ಯಾಯಾಮ ಮಾಡದೆ ಆಲಸಿಯಾಗಿದ್ದರೆ ಬೊಜ್ಜು ಶೇಖರಣೆಯಾಗಿ ಹೃದಯದ ಸಮಸ್ಯೆಗಳು ಉಂಟಾಗಬಹುದೆಂದು ಹೇಳಲಾಗುತ್ತಿತ್ತು. ಅಂತೆಯೇ ಅತಿಯಾದ ವ್ಯಾಯಾಮ ಮಾಡುವುದರಿಂದಲೂ ಹೃದಯದ ಸಮಸ್ಯೆ ಬರುತ್ತದೆ ಎನ್ನುವ ಸಂಗತಿಯನ್ನು ಹಲವರು ನಂಬಲಿಕ್ಕಿಲ್ಲ. ಆದರೆ ಅದು ವಾಸ್ತವ.ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಎನ್ನುವ ಸ್ಲೋ ಪಾಯ್ಸನ್: ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗಳ ಹೆಚ್ಚಳವ್ಯಾಯಾಮ ಶಾಲೆಗಳಲ್ಲಿ ಹೈ ಇಂಟೆನ್ಸಿಟಿ ವರ್ಕೌಟ್ ಗಳಲ್ಲಿ ಭಾಗಿಯಾಗುವವರಿಗೆ () ತೊಂದರೆ ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ತಿಳಿಸಿದೆ. ಮಧ್ಯವಯಸ್ಕ ಯುವಕರು, ಕಿರಿಯರು ಚಿಕ್ಕ ವಯಸ್ಸಿನಲ್ಲಿಯೇ ಹಠಾತ್ ಹೃದಯ ತೊಂದರೆಗಳಿಂದ ಸಾವನ್ನಪ್ಪುತ್ತಿರುವ ಪ್ರಕರನಗಳು ಹೆಚ್ಚುತ್ತಿರುವುದಕ್ಕೆ ವ್ಯಾಯಾಮವೂ ಕಾರಣ ಎನ್ನುವ ಸಂಗತಿಯಲ್ಲಿ ಸತ್ಯಾಂಶವಿದೆ. ಇದನ್ನೂ ಓದಿ: ಮಹಿಳೆಯರು ತಿಳಿದಿರಬೇಕಾದ 4 ಸಂತಾನ ನಿಯಂತ್ರಣ ಮಾರ್ಗಗಳುಮಾನಸಿಕ ಅಥವಾ ದೈಹಿಕ, ಯಾವುದೇ ಬಗೆಯ ಒತ್ತಡವಾಗಲಿ ಗುಣವಾಗಲು ಅದಕ್ಕೆ ಸಮಯ ತಗುಲುತ್ತದೆ. ಆ ಸಮಯವನ್ನು ನಾವು ನೀಡಬೇಕು. ಆದರೆ ತಮ್ಮ ಸಮಸ್ಯೆಯನ್ನು ಗುರುತಿಸಿ ಗುಣವಾಗುವುದಕ್ಕೆ ಸಮಯ ನೀಡುವದರಲ್ಲಿ ನಮ್ಮ ಯುವಪೀಳಿಗೆ ಹಿಂದೆ ಬೀಳುತ್ತಿದೆ. ಅತಿಯಾದ ಕಸರತ್ತಿನ ಜೊತೆಗೆ ನಿದ್ರಾಹೀನತೆ, ಡಯೆಟ್ ಸೇರಿಕೊಂಡರೆ ಅದು ಡೆಡ್ಲಿ ಕಾಂಬಿನೇಷನ್. ಸುಂದರ ಫಿಟ್ ಬದುಕಿನ ಆಮಿಷಕ್ಕೆ ಬಲಿಯಾಗಿ ಯುವಪೀಳಿಗೆ ಅನವಶ್ಯಕ ಒತ್ತಡಗಳನ್ನು ತಂದುಕೊಳ್ಳುತ್ತಿರುವುದು ವಿಪರ್ಯಾಸ. ಇದನ್ನೂ ಓದಿ: ಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳಓವರ್ ಆಗಿ ವ್ಯಾಯಾಮ ಮಾಡುವುದು ಮತ್ತು ಡಯೆಟ್ ಮಾಡುವುದರಿಂದ ದೇಹಕ್ಕೆ ಸಹಾಯವಾಗುವುದಿಲ್ಲ. ನಿಜ ಹೇಳಬೇಕೆಂದರೆ ನಾವು ತೆಗೆದುಕೊಳ್ಳುವ ಪೋಷಕಾಂಶಯುಕ್ತ ಆಹಾರವು ನಾವು ಮಾಡುವ ವ್ಯಾಯಾಮದ ಮೇಲೆ ಪ್ರಭಾವ ಬೀರುತ್ತದೆ. ಏರೋಬಿಕ್ಸ್, ಯೋಗ, ಬಾಡಿ ವೇಯ್ಟ್ ಹೀಗೆ ಯಾವುದೇ ವ್ಯಾಯಾಮವಾಗಲಿ ಅವುಗಳನ್ನು ಮಾಡಿದಾಗ ಹೆಚ್ಚು ಪೋಷಕಾಂಶಗಳನ್ನು ಬೇಡುತ್ತದೆ. ದೈಹಿಕ ಚಟುವಟಿಕೆಗಳಿಗೂ, ನಮ್ಮ ಆಹಾರ ಪದ್ಧತಿಗೂ ಹೊಂದಾಣಿಕೆ ಇಲ್ಲದೇ ಹೋದಾಗ ಅನಾರೋಗ್ಯ ಉಂಟಾಗುತ್ತದೆ. ಡಯೆಟ್ ಮೆತ್ತು ಜಿಮ್ಮಿನಲ್ಲಿ ಬೆವರು ಹರಿಸುವುದರಿಂದ ತೂಕ ಕಡಿಮೆಯಾಗಬಹುದು ನಿಜ. ಆದರೆ ಅದರಿಂದ ಆರೋಗ್ಯ ಸಮಸ್ಯೆಗಳು ಕಂಡುಬರುವುದು ಖಚಿತ.ವರ್ಕೌಟ್ ಮಾಡುವವರಿಗೆ ಆಹಾರ ಟಿಪ್ಸ್ನಿದ್ರಾಹೀನತೆ: ಹೃದಯದ ಸಮಸ್ಯೆಯನ್ನು ನಾವು ನಿರ್ಲಕ್ಷಿಸುತ್ತೇವೆ. ಅದರಲ್ಲೂ ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆ ಇದ್ದರೆ ಖಂಡಿತವಾಗಿ ಪರೀಕ್ಷಿಸಿಕೊಳ್ಲಬೇಕು. ಕಾಲ ಕಾಲಕ್ಕೆ ಹೃದಯ ತಪಾಸಣೆಯನ್ನು ಎಲ್ಲಾ ವಯೋಮಾನದವರೂ ಈ ಕಾಲದಲ್ಲಿ ಮಾಡಿಸಿಕೊಳ್ಲಬೇಕು. ನಾವು ನಮ್ಮ ಎಲ್ಲಾ ಕಾರ್ಕಕ್ರಮಗಳು, ಕೆಲಸಗಳನ್ನು ಮುಂದೂಡಬಹುದು. ಆದರೆ ಹೃದಯ ತಪಾಸಣೆಯನ್ನು ಮುಂದೂಡಬಾರದು.ಕೊರೊನಾದಿಂದ ಗುಣಮುಖರಾದವರು ಯಾವುದೇ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಹಾಗೆಯೇ ಇಲ್ಲ. ಇಂದು ಎಲ್ಲಾ ನಾರ್ಮಲ್ ಇರುವಂತೆ ಕಂಡರೂ ದೇಹದೊಳಗೆ ನಮಗೆ ಗೊತ್ತಿಲ್ಲದಂತೆ ಹಲವು ಸಂಗತಿಗಳು ಜರುಗುತ್ತಿರುತ್ತವೆ. ಕೊರೊನಾದಿಂದ ಹೆಚ್ಚಿನ ಅಪಾಯ ಬಂದಿರುವುದು ಹೃದಯಕ್ಕೆ ಎನ್ನುವ ಸಂಗತಿ ನೆನಪಲ್ಲಿರಲಿ. ಎದೆಯುರಿಯೇ ಇರಲಿ ಹೃದಯದ ಯಾವುದೇ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬಾರದು. ಕೊರೊನಾದಿಂದ ಗುಣಮುಖರಾದವರಲ್ಲಿ ರಕ್ತ ಕ್ಲಾಟ್ ಆಗುತ್ತಿರುವುದು ಕಂಡುಬಂಡಿದೆ. ಇದಧೃದಯಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಎಲ್ಲರಿಗೂ ಒಂದಲ್ಲ ಒಂದು ವಿಚಾರದಲ್ಲಿ ರೋಲ್ ಮಾಡೆಲ್ ಆದ ವ್ಯಕ್ತಿಯೊಬ್ಬರು ಇರುತ್ತಾರೆ. ಅವರ ಜೀವನಶೈಲಿಯನ್ನು ನಾವು ಅನುಕರಿಸಲು ಯತ್ನಿಸುತ್ತೇವೆ. ಹಲವು ವಿಚಾರಗಳಲ್ಲಿ ಇದು ಒಳ್ಲೆಯದು ಆದರೆ ಆರೋಗ್ಯ, ವ್ಯಾಯಾಮ ವಿಚಾರದಲ್ಲಿ ನಾವು ಯಾರನ್ನೂ ಫಾಲೋ ಮಾಡದಿರುವುದು ಒಳ್ಳೆಯದು. ಬಾಡಿ ಬಿಲ್ಡರ್, ಅಥ್ಲೀಟ್ ಗಳ ಜೀವನ ಹೊರಗಿನಿಂದ ನೋಡಲು ಆಕರ್ಷಕವಾಗಿರುತ್ತದೆ. ಅವರು ತಮ್ಮಂತಾಗಲು ಏನು ಮಾಡಬೇಕೆಂಬುದರ ಟಿಪ್ಸ್ ಕೊಡುತ್ತಾರೆ. ಆದರೆ ಎಲ್ಲರಿಗೂ ಸೂಟ್ ಆಗುತ್ತೆ ಎನ್ನುವಂತಿಲ್ಲ. ಏಕೆಂದರೆ ಪ್ರತಿಯೊಬ್ಬರ ದೇಹವೂ ವಿಭಿನ್ನವಾದುದು. ಜೈವಿಕವಾಗಿ ನಾವೆಲ್ಲರೂ ಒಬ್ಬರಿಗಿಂತ ಒಬ್ಬರು ಭಿನ್ನ. ಸಿಕ್ಸ್ ಪ್ಯಾಕ್, ಸೈಜ್ ಜೀರೊ ಫಿಗರ್ ಉತ್ತಮ ಆರೋಗ್ಯಕ್ಕೆ ಫಿಟ್ ನೆಸ್ ಗೆ ಮಾನದಂಡವಾಗದು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಲಬೇಕು. ದಿನಂಪ್ರತಿ ಜಿಮ್ಮಿಗೆ ಹೋಗುವುದು ಕೂಡಾ ಆರೋಗ್ಯಕರ ಲಕ್ಷಣವಲ್ಲ. ಜಿಮ್ಮಿನಲ್ಲಿ ಹೆಚ್ಚು ಭಾರದ ವೇಯ್ಟ್ ಎತ್ತುವ ಹಲವು ಮಂದಿ ಪುಲ್ ಅಪ್ ಮಾಡಲಾಗದೆ ಹೆಣಗಾಡುವವರಿದ್ದಾರೆ. ಹೀಗಾಗಿ ಜಿಮ್ ಹೋದರೆ ಆರೋಗ್ಯವಂತರಾಗಬಹುದು ಎನ್ನುವುದು ಸುಳ್ಳು. ನಮ್ಮ ಜೀವನಶೈಲಿ ದೋಷಪೂರಿತವಾಗಿದ್ದರೆ ಹೃದಯದ ಮೇಲೆ ಅದರ ನೇರ ಪರಿಣಾಮ ಉಂಟಾಗುತ್ತದೆ. ದೈಹಿಕ ಒತ್ತಡ ಮಾತ್ರವಲ್ಲದೆ ಮಾನಸಿಕ ಒತ್ತಡವೂ ಹೃದಯಕ್ಕೆ ತೊಂಡರೆಯೊಡ್ಡುತ್ತಿದೆ. ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳಕೊರೋನಾ ಎಫೆಕ್ಟ್: ದಂಪತಿಗಳಿಗೆ ವರವಾದ 'ವರ್ಕ್ ಫ್ರಂ ಹೋಮ್', ನೈಸರ್ಗಿಕ ಗರ್ಭಧಾರಣೆಯಲ್ಲಿ ಹೆಚ್ಚಳ!ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳು: ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಹೆಚ್ಚು'ಬಿಪಿ' ನಿರ್ಲಕ್ಷ್ಯದಿಂದ ದೇಹದಲ್ಲಿ ರೋಗದ ಹೊರೆ ಹೆಚ್ಚಾಗಲಿದೆ: ಹೈಪರ್'ಟೆನ್ಶನ್ ಕುರಿತು ಅಧ್ಯಯನತುಂಬಾ ಹೊತ್ತು ಮೊಬೈಲ್ ಪರದೆ ದಿಟ್ಟಿಸುವ ಮಕ್ಕಳಲ್ಲಿ ಸಮೀಪದೃಷ್ಟಿ ದೋಷಕಳೆದ 30 ವರ್ಷಗಳಲ್ಲಿ ಹೈಪರ್ ಟೆನ್ಷನ್ ಪ್ರಮಾಣ ದುಪ್ಪಟ್ಟು