ಚಳಿಗಾಲದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಸತ್ಯ ಸಂಗತಿ ವರ್ಸಸ್ ಮಿಥ್ಯ ತಿಳಿವಳಿಕೆ ಚಳಿಗಾಲ ಶುರುವಾದರೆ ಸಾಕು ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾವು ರೋಗಕಾರಕಗಳು ಸುಲಭವಾಗಿ ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಶೀತ, ಕೆಮ್ಮು, ಉಸಿರಾಟ ಸಮಸ್ಯೆಗಳು ಸೇರಿದಂತೆ ಮೊದಲಾದ ಆರೋಗ್ಯ ಸಮಸ್ಯೆಗಳಂತೂ ಸಾಮಾನ್ಯವಾಗಿ ಬಿಡುತ್ತವೆ. ಚಳಿಗಾಲ ಶುರುವಾದರೆ ಸಾಕು ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾಲವು ರೋಗಕಾರಕಗಳು ಸುಲಭವಾಗಿ ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಶೀತ, ಕೆಮ್ಮು, ಉಸಿರಾಟ ಸಮಸ್ಯೆಗಳು ಸೇರಿದಂತೆ ಮೊದಲಾದ ಆರೋಗ್ಯ ಸಮಸ್ಯೆಗಳಂತೂ ಸಾಮಾನ್ಯವಾಗಿ ಬಿಡುತ್ತವೆ. ಪ್ರಮುಖವಾಗಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತವೆ. ಹೀಗಾಗಿಯೇ ಚಳಿಗಾಲ ಬಂತೆಂದರೆ ಪೋಷಕರಿಗೆ ದೊಡ್ಡ ತಲೆನೋವು ಶುರುವಾಗುತ್ತದೆ.ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸುವುದು ಅತ್ಯಗತ್ಯವಾಗಿದ್ದು, ಈ ಸಂದರ್ಭದಲ್ಲಿ ಸೋಂಕು ತಡೆಗಟ್ಟುವ ವಿಧಾನಗಳು ಹಾಗೂ ಕೆಲವು ಸತ್ಯ-ಮಿಥ್ಯಗಳನ್ನು ಇಲ್ಲಿ ವಿವರಿಸಲಾಗಿದೆ...ಮಿಥ್ಯ: ಮಕ್ಕಳಲ್ಲಿ ಪ್ರತೀ ಬಾರಿ ಮೂಗು ಸೋರಿದಾಗಲೂ ಆ್ಯಂಟಿಬಯಾಟಿಕ್ ಬಳಕೆ ಮಾಡುವುದು ಅಗತ್ಯ ಎಂದು ಹೇಳಲಾಗುತ್ತದೆ. ಸತ್ಯ: ಮೂಗು ಸೋರಿದರೆ ಆ್ಯಂಟಿಬಯಾಟಿಕ್ ಬಳಕೆಯ ಅಗತ್ಯವಿಲ್ಲ. ಶೀತ, ಜ್ವರ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ವೈರಸ್ ನಿಂದ ಎದುರಾಗುತ್ತವೆ. ಅನಗತ್ಯವಾಗಿ ಆ್ಯಂಟಿಬಯಾಟಿಕ್ ಬಳಕೆ ಮಾಡಿದರೆ, ಅದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.ಮಿಥ್ಯ: ಮಕ್ಕಳು ಜಾಕೆಟ್ ಇಲ್ಲದೆ ತಂಪಾದ ವಾತಾವರಣದಲ್ಲಿ ಆಟವಾಡಿದರೆ ಶೀತವಾಗುತ್ತದೆ... ಸತ್ಯ: ಶೀತವು ಸಾಮಾನ್ಯವಾಗಿ ವೈರಸ್ ಗಳಿಂದ ಎದುರಾಗುತ್ತದೆಯೇ ಹೊರತು ಶೀತಯುಕ್ತ ವಾತಾವರಣದಿಂದಲ್ಲ. ಹೀಗಾಗಿ ತಂಪಾದ ವಾತಾವರಣದಲ್ಲೂ ಮಕ್ಕಳು ಆಟವಾಡಬಹುದು.ಮಿಥ್ಯ: ಫ್ಲೂ ಲಸಿಕೆ ಪಡೆದರೆ ಜ್ವರ ಬರುತ್ತದೆ. ಸತ್ಯ: ಫ್ಲೂ ಲಸಿಕೆಯನ್ನು ಸತ್ತ ರೋಗಕಾರಕಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ಈ ಲಸಿಕೆಗಳಿಂದ ಜ್ವರ ಬರಲು ಸಾಧ್ಯವಿಲ್ಲ.ಮಿಥ್ಯ: ಹೆಚ್ಚೆಚ್ಚು ಜೀವಸತ್ವಗಳು ಮತ್ತು ಖನಿಜವುಳ್ಳ ಆಹಾರ ಸೇವನೆಯಿಂದ ಮಕ್ಕಳು ಅನಾರೋಗ್ಯದಿಂದ ದೂರ ಉಳಿಯಬಹುದು. ಸತ್ಯ: ಹೆಚ್ಚೆಚ್ಚು ಜೀವಸತ್ವಗಳು ಮತ್ತು ಖನಿಜವುಳ್ಳ ಆಹಾರ ಸೇವಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಿಜ. ಆದರೆ, ಇದು ಮಕ್ಕಳಲ್ಲಿ ಶೀತ, ಜ್ವರ ಬರದಂತೆ ಮಾಡುವುದಿಲ್ಲ.ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಉಳಿಯುವುದು ಹೇಗೆ?ಈ ಕೆಳಕಂಡ ಲಕ್ಷಣಗಳು ಕಂಡು ಬಂದರೆ ಕೂಡಲೇ ಪೋಷಕರು ಜಾಗ್ರತೆ ವಹಿಸಬೇಕು...