ಗ್ಯಾಜೆಟ್ ವ್ಯಸನಿಗಳಾಗುತ್ತಿದ್ದಾರೆ ಶಾಲಾ ಮಕ್ಕಳು! ಪಾಲಕರೇ ಎಚ್ಚರ! ತರಗತಿಯಲ್ಲಿ ವಿಹಾನ್ ಶಿಕ್ಷಕಿ ಆತನಲ್ಲಿ ಬದಲಾವಣೆಯನ್ನು ಗುರುತಿಸಿದ್ದರು. ಅವನು ತರಗತಿಯಲ್ಲಿ ಆತಂಕದಿಂದಿರುತ್ತಿದ್ದ. ಪ್ಯಾನಿಕ್ ಅಟ್ಯಾಕ್ ಗೆ ಒಳಗಾಗುತ್ತಿದ್ದ. ಇದೇ ಸಮಯದಲ್ಲಿ ಆತನ ತಾಯಿಯೂ ವಿಹಾನ್ ನಲ್ಲಿ ಒಂದು ಬದಲಾವಣೆಯನ್ನು ಗುರುತಿಸಿದ್ದರು. ಬೆಂಗಳೂರು: ಇಷ್ಟುದಿನದ ಆನ್ ಲೈನ್ ತರಗತಿಗಳಿಗೆ ಬ್ರೇಕ್ ಬಿದ್ದಿದೆ. ಶಾಲೆಗಳು ಮತ್ತೆ ಆರಂಭವಾಗಿದೆ. ಮಕ್ಕಳು ಬ್ಯಾಗುಗಳನ್ನು ನೇತುಹಾಕಿಕೊಂಡು ತರಗತಿಗಳತ್ತ ಮುಖ ಮಾಡಿದ್ದಾರೆ. ಅವರಲ್ಲಿ ವಿಹಾನ್ ಕೂಡಾ ಒಬ್ಬ. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳು: ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಹೆಚ್ಚುತರಗತಿಯಲ್ಲಿ ವಿಹಾನ್ ಶಿಕ್ಷಕಿ ಆತನಲ್ಲಿ ಬದಲಾವಣೆಯನ್ನು ಗುರುತಿಸಿದ್ದರು. ಅವನು ತರಗತಿಯಲ್ಲಿ ಆತಂಕದಿಂದಿರುತ್ತಿದ್ದ. ಪ್ಯಾನಿಕ್ ಅಟ್ಯಾಕ್ ಗೆ ಒಳಗಾಗುತ್ತಿದ್ದ. ಇದೇ ಸಮಯದಲ್ಲಿ ಆತನ ತಾಯಿಯೂ ವಿಹಾನ್ ನಲ್ಲಿ ಒಂದು ಬದಲಾವಣೆಯನ್ನು ಗುರುತಿಸಿದ್ದರು. ಶಾಲೆಯಿಂದ ಮನೆಗೆ ಬರುತ್ತಿದ್ದಂತೆಯೇ ವಿಹಾನ್ ಮೊಬೈಲ್ ಫೋನ್ ಹಿಡಿದುಕೊಳ್ಳಲು ಮುಗಿಬೀಳುತ್ತಿದ್ದ. ಅವನ ಕೈಗೆ ಮೊಬೈಲು ಸಿಕ್ಕ ನಂತರವೇ ಅವನಿಗೆ ಸಮಾಧಾನವಾಗುತ್ತಿತ್ತು. ಇದನ್ನೂ ಓದಿ: ನಗರದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: ಐವರ ಬಂಧನ, 11 ಮಕ್ಕಳ ರಕ್ಷಣೆಹೀಗೆ ಮುಂದುವರಿದು ಆತ ರಾತ್ರಿ ನಿದ್ರಾಹೀನತೆಯಿಂದ ಬಳಲತೊಡಗಿದ್ದ. ನಿದ್ದೆಯನ್ನೇ ಚೆನ್ನಾಗಿ ಮಾಡುತ್ತಿರಲಿಲ್ಲ. ವಿಹಾನ್ ನಲ್ಲಿ ಉಂಟಾದ ಬದಲಾವಣೆಗಳಿಗೆ ಕಂಗಾಲಾದ ಹೆತ್ತವರು ಅವನನ್ನು ಮನೋವೈದ್ಯರ ಬಳಿ ಕರೆದೊಯ್ದರು.ವಿಹಾನ್ ನನ್ನು ತಪಾಸಣೆಗೊಳಪಡಿಸಿದ ವೈದ್ಯರಿಗೆ ಆತನ ಸಮಸ್ಯೆ ತಿಳಿದುಬಿಟ್ಟಿತ್ತು. ಸ್ಮಾರ್ಟ್ ಫೋನಿನಲ್ಲಿಯೇ ಇಷ್ಟು ದಿನ ತರಗತಿಯ ಎಲ್ಲಾ ಕಾರ್ಯಗಳು ನಡೆಯುತ್ತಿದ್ದುದರಿಂದ ಅವನು ಸ್ಮಾರ್ಟ್ ಫೋನಿಗೆ ಅಡಿಕ್ಟ್ ಆಗಿಬಿಟ್ಟಿದ್ದ. ಈಗ ತರಗತಿಗಳು ಎಂದಿನಂತೆ ಪ್ರಾರಂಭವಾಗಿದ್ದರಿಂದ ಸ್ಮಾರ್ಟ್ ಫೋನ್ ನಿಂದ ಬಹುಕಾಲ ದೂರ ಇರುವುದು ಅವನಿಗೆ ಕಷ್ಟವಾಗಿಬಿಟ್ಟಿತ್ತು. ಇದನ್ನೂ ಓದಿ: ಎರಡು ಹೊಳೆ ದಾಟಿ 5 ಕಿಲೋ ಮೀಟರ್ ನಡೆದುಕೊಂಡು ಹೋಗಿ ಓದಬೇಕು: ಇದು ಗದಗ ಜಿಲ್ಲೆಯ ಗ್ರಾಮವೊಂದರ ಮಕ್ಕಳ ಪಾಡು!ಮಾದಕ ವ್ಯಸನಿಗಳು ಮಾದಕ ವಸ್ತುಗಳನ್ನು ಸೇವಿಸದೇ ಸ್ವಲ್ಪ ಕಾಲ ದೂರವಿದ್ದಲ್ಲಿ ಅವರ ಮನಸ್ಸು ಮತ್ತು ದೇಹ ಒದ್ದಾಡಿಹೋಗುತ್ತದೆ. ಮಾದಕವಸ್ತು ಸೇವಿಸದೇ ಇದ್ದರೆ ಏನೋ ಆಗಿಬಿಡುತ್ತದೆ ಎನ್ನುವಶ್ಟು ಪರದಾಡುತ್ತಾರೆ. ಇದನ್ನು ವಿತ್ ಡ್ರಾವಲ್ ಸಿಂಪ್ಟಂ( ) ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅಡಿಕ್ಟ್ ಆದವರ ವ್ಯಕ್ತಿತ್ವ ಮತ್ತು ದೇಹದಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ವಿಹಾನ್ ಗೆ ಆಗಿದ್ದು ಕೂಡಾ ಇದೇ. ಸ್ಮಾರ್ಟ್ ಫೋನ್ ಆಗಲಿ, ಮಾದಕ ವಸ್ತುವೇ ಆಗಲಿ ವ್ಯಸನ ವ್ಯಸನವೇ.ಇದನ್ನೂ ಓದಿ: ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವವಿಹಾನ್ ಪರಿಸ್ಥಿತಿಯನ್ನು ಅವಲೋಕಿಸಿದ ಮನೋವೈದ್ಯರು ಆತನ ಸ್ಕ್ರೀನ್ ಟೈಮ್ ಅಂದರೆ ಡಿಜಿಟಲ್ ಪರದೆ ಮುಂದೆ ಕಳೆಯುವ ಸಮಯವನ್ನು ನಿಯಂತ್ರಿಸುವಂತೆ ಸಹೆ ನೀಡಿದ್ದರು. ಒಂದೇ ಬಾರಿ ಮೊಬೈಲ್ ಕಿತ್ತುಕೊಳ್ಳುವುದಕ್ಕಿಂತ ನಿಧಾನಕ್ಕೆ, ಹಂತ ಹಂತವಾಗಿ ಮೊಬೈಲ್ ಅನ್ನು ಬಳಸುವುದರ ಮೇಲೆ ನಿಯಂತ್ರಣ ಹೇರುವುದು ಸೂಕ್ತ ಎನ್ನುವುದನ್ನು ಪಾಲಕರಿಗೆ ಮನದಟ್ಟು ಮಾಡಲಾಯಿತು. ಈ ಪರಿಸ್ಥಿತಿ ವಿಹಾನ್ ಒಬ್ಬನದೇ ಅಲ್ಲ ಅನೇಕ ಮಕ್ಕಳು ಈ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಕೃಷ್ಣನಿಗೆ ಪೇಂಟಿಂಗ್ ಅರ್ಪಿಸಿದ ಕೇರಳದ ಮುಸ್ಲಿಂ ಯುವತಿ: 6 ವರ್ಷಗಳಲ್ಲಿ 500 ಕೃಷ್ಣನ ಚಿತ್ರಗಳು ಬಹುತೇಕ ಮಕ್ಕಳು ಆಫ್ ಲೈನ್ ಮತ್ತು ಆನ್ ಲೈನ್ ತರಗತಿಗಳಲ್ಲಿ ಆನ್ ಲೈನ್ ತರಗತಿಯತ್ತಲೇ ಒಲವು ತೋರಿಸುತ್ತಿದ್ದಾರೆ ಎಂದು ಮಕ್ಕಳ ವೈದ್ಯೆ ಡಾ.ಪ್ರೀತಿ ಗಲಗಲಿ ಹೇಳುತ್ತಾರೆ. ಕಾಲವೇ ಇದಕ್ಕೆ ತಕ್ಕ ಉತ್ತರ. ಸರಿಯಾದ ಮಾರ್ಗ ಅನುಸರಿಸಿದರೆ ಪಾಲಕರು ತಮ್ಮ ಮಕ್ಕಳ ಸ್ಮಾರ್ಟ್ ವ್ಯಸನವನ್ನು ದೂರಮಾಡಬಹುದು. ಇದನ್ನೂ ಓದಿ: 14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳಮಹಿಳೆಯರು ತಿಳಿದಿರಬೇಕಾದ 4 ಸಂತಾನ ನಿಯಂತ್ರಣ ಮಾರ್ಗಗಳು'ಬಿಪಿ' ನಿರ್ಲಕ್ಷ್ಯದಿಂದ ದೇಹದಲ್ಲಿ ರೋಗದ ಹೊರೆ ಹೆಚ್ಚಾಗಲಿದೆ: ಹೈಪರ್'ಟೆನ್ಶನ್ ಕುರಿತು ಅಧ್ಯಯನಕ್ಯಾನ್ಸರ್ ರೋಗಿಗಳ ನೆಚ್ಚಿನ ಔಷಧ ಪದ್ಧತಿ ಆಯುರ್ವೇದ: ಸಮೀಕ್ಷೆಯಿಂದ ಬಹಿರಂಗತುಂಬಾ ಹೊತ್ತು ಮೊಬೈಲ್ ಪರದೆ ದಿಟ್ಟಿಸುವ ಮಕ್ಕಳಲ್ಲಿ ಸಮೀಪದೃಷ್ಟಿ ದೋಷವಿಶ್ವ ಸರ್ವಧರ್ಮ ಸಂಸತ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಬೆಂಗಳೂರಿನ ಗಾಯಕಿ ದೀಪ್ತಿ ನವರತ್ನಡ್ರೋನ್ ಬಳಸಿ ಆಕಾಶಮಾರ್ಗದಲ್ಲಿ ಔಷಧಿ ತಲುಪಿಸುವ ಯೋಜನೆ ಪ್ರಾತ್ಯಕ್ಷಿಕೆ ಯಶಸ್ವಿಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಹಲವು ಮಂದಿಗೆ ಜೀವದಾನ: ಅಂತಿಮ ಕ್ಷಣದ ಆಪದ್ಬಾಂಧವ