ಓಮಿಕ್ರಾನ್ ಲಕ್ಷಣಗಳು ಏನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ? ಎಲ್ಲಾ ಕಡೆ ಓಮಿಕ್ರಾನ್ ಹೊಸ ರೂಪಾಂತರಿಯ ದುಗುಡ ಹೆಚ್ಚಾಗುತೊಡಗಿದೆ. ಡೆಲ್ಟಾ ರೂಪಾಂತರಿಯಿಂದ ಭೀತಿಗೊಳಗಾಗಿದ್ದ ವಿಶ್ವದ ರಾಷ್ಟ್ರಗಳು ಓಮಿಕ್ರಾನ್ ಹೊಸ ರೂಪಾಂತರಿಯಿಂದಾಗಿ ಮತ್ತೆ ಭೀತಿ ಆವರಿಸತೊಡಗಿದೆ. ಬೆಂಗಳೂರು: ಎಲ್ಲಾ ಕಡೆ ಓಮಿಕ್ರಾನ್ ಹೊಸ ರೂಪಾಂತರಿಯ ದುಗುಡ ಹೆಚ್ಚಾಗುತೊಡಗಿದೆ. ಡೆಲ್ಟಾ ರೂಪಾಂತರಿಯಿಂದ ಭೀತಿಗೊಳಗಾಗಿದ್ದ ವಿಶ್ವದ ರಾಷ್ಟ್ರಗಳು ಓಮಿಕ್ರಾನ್ ಹೊಸ ರೂಪಾಂತರಿಯಿಂದಾಗಿ ಮತ್ತೆ ಭೀತಿ ಆವರಿಸತೊಡಗಿದೆ.ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಈ ಹೊಸ ರೂಪಾಂತರವು ಮತ್ತೊಮ್ಮೆ ಪ್ರಪಂಚದಾದ್ಯಂತದ ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳ ಕಳವಳವನ್ನು ಹೆಚ್ಚಿಸಿದೆ. ಈ ರೂಪಾಂತರವು ಕರೋನಾ ವೈರಸ್‌ನ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ರೂಪಾಂತರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಓಮಿಕ್ರಾನ್ ರೂಪಾಂತರಿ ಪತ್ತೆಯಾದ ಎರಡೇ ದಿನದಲ್ಲಿ ಡಬ್ಲ್ಯುಎಚ್ಒ, ಇದೊಂದು ಕಳವಳಕಾರಿ ರೂಪಾಂತರಿ ಎಂದು ಘೋಷಣೆ ಮಾಡಿತ್ತು.ಇದನ್ನೂ ಓದಿ: ಕೊರೋನಾ ಹೊಸ ರೂಪಾಂತರ ಓಮಿಕ್ರಾನ್ ಎಷ್ಟು ಡೇಂಜರ್? ಎಷ್ಟು ದೇಶಗಳಲ್ಲಿ ಈ ಕೇಸ್‌ಗಳು ಪತ್ತೆ?24 ನವೆಂಬರ್ 2021 ರಂದು ದಕ್ಷಿಣ ಆಫ್ರಿಕಾದಲ್ಲಿ ಕರೋನಾ, ಓಮಿಕ್ರಾನ್‌ನ ಹೊಸ ರೂಪಾಂತರದ ಮೊದಲ ಪ್ರಕರಣ ಪತ್ತೆಯಾಯಿತು. ದಕ್ಷಿಣ ಆಫ್ರಿಕಾದ ಹೊರತಾಗಿ, ಈ ರೂಪಾಂತರವನ್ನು ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಇಟಲಿ, ಬೆಲ್ಜಿಯಂ, ಬೋಟ್ಸ್‌ವಾನಾ, ಹಾಂಗ್ ಕಾಂಗ್ ಮತ್ತು ಇಸ್ರೇಲ್‌ನಲ್ಲಿಯೂ ಗುರುತಿಸಲಾಗಿದೆ. ಈ ರೂಪಾಂತರವು ಕಾಣಿಸಿಕೊಂಡ ನಂತರ, ಪ್ರಪಂಚದ ಅನೇಕ ದೇಶಗಳು ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಕರನ್ನು ನಿಷೇಧಿಸಿವೆ.ಓಮಿಕ್ರಾನ್ ನ ಗುಣಲಕ್ಷಣಗಳು ಏನು? ಇದು ಎಷ್ಟು ಅಪಾಯಕಾರಿ?ಇದನ್ನೂ ಓದಿ: ಓಮಿಕ್ರಾನ್ ವೈರಾಣುವಿನ ರೋಗಲಕ್ಷಣಗಳೇನು, ತೀವ್ರತೆ ಎಷ್ಟು?: ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದ್ದು ಹೀಗೆ...ಓಮಿಕ್ರಾನ್‌ನಿಂದ ತಪ್ಪಿಸಿಕೊಳ್ಳಲು ನೀವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಹೊಸ ರೂಪಾಂತರವನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಾಗೂ ಡಬ್ಲ್ಯುಎಚ್ಒ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಲ್ಲದೆ, ಎಲ್ಲಾ ತಜ್ಞರು ಲಸಿಕೆ ಪಡೆಯಲು ಸಲಹೆ ನೀಡುತ್ತಿದ್ದಾರೆ.(ಮೂಲ ಮಾಹಿತಿ : ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಕಮ್ಯನಿಕೇಬಲ್ ಡಿಸೀಸ್ (ಎನ್ಐಸಿಡಿ) ದಕ್ಷಿಣ ಆಫ್ರಿಕಾದ ಓಮಿಕ್ರಾನ್ ತಜ್ಞರು)