೧೦೦೮ಜಾಬ್ಸ್: ವ್ಯಾಲ್ಯೂ ವಿಂಗ್ಸ್‍ನಿಂದ ಆಟೋಮೇಟೆಡ್ ಜಾಬ್ ಪೋರ್ಟಲ್ ಉದ್ಘಾಟನೆ ಲಭ್ಯ ಸೀಮಿತ ಅವಕಾಶಕ್ಕೆ ಭಾರೀ ಪೈಪೋಟಿ ನಡೆಸಬೇಕಾದ ಈ ದಿನಗಳಲ್ಲಿ, ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು: ಲಭ್ಯ ಸೀಮಿತ ಅವಕಾಶಕ್ಕೆ ಭಾರೀ ಪೈಪೋಟಿ ನಡೆಸಬೇಕಾದ ಈ ದಿನಗಳಲ್ಲಿ, ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ `ವ್ಯಾಲ್ಯೂ ವಿಂಗ್ಸ್' ಸಂಸ್ಥೆಯು ನೂತನ `ಜಾಬ್ ಪೋರ್ಟಲ್' ಒಂದನ್ನು ಸ್ಥಾಪಿಸಿದೆ. .1008jobs. ಹೆಸರಿನ ಈ `ಉದ್ಯೋಗ ಹುಡುಕುತಾಣ', ಸಮಾಜದ ಎಲ್ಲಾ ವರ್ಗ ಮತ್ತು ರಂಗಗಳಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ವರದಾನವಾಗಲಿದ್ದು, ಅಂತರ್ಜಾಲದ ರಾಷ್ಟ್ರೀಯ ತಾಣಗಳಲ್ಲಿರುವ ಇತರೆಲ್ಲಾ `ಉದ್ಯೋಗ ಹುಡುಕುತಾಣ' (ಜಾಬ್ ಪೋರ್ಟಲ್) ಗಳಿಗಿಂತ ವಿಭಿನ್ನವಾಗಿದೆ ಎನ್ನುತ್ತದೆ ಪತ್ರಿಕಾ ಹೇಳಿಕೆ. ಉದ್ಯೋಗ ಕೇವಲ ಪುರುಷರ ಲಕ್ಷಣವಲ್ಲ, ಮಹಿಳೆಯರು ಮತ್ತು ತೃತಿಯ ಲಿಂಗಿಗಳಿಗೂ (ಲೈಂಗಿಕ ಅಲ್ಪಸಂಖ್ಯಾತರು/ಮಂಗಳಮುಖಿಯರು) ಅತ್ಯಗತ್ಯ ಎನ್ನುವುದನ್ನು ಮನಗಂಡ ರಾಷ್ಟ್ರದ ಮೊಟ್ಟಮೊದಲ ಜಾಬ್ ಪೋರ್ಟಲ್ ಆಗಲಿದೆ 1008 ಜಾಬ್ ಡಾಟ್ ಕಾಮ್ ಎನ್ನುತ್ತದೆ ಪತ್ರಿಕಾ ಹೇಳಿಕೆ. ಸರ್ವರಿಗೂ ಉದ್ಯೋಗ: "ಜೀವನ ನಿರ್ವಹಣೆಗೆ ಆದಾಯ ಅಗತ್ಯ, ದುಡಿಮೆಗೆ ಉದ್ಯೋಗ ಅತ್ಯಗತ್ಯ' ಎನ್ನುವ ಮಾತಿನಲ್ಲಿ ನಂಬಿಕೆ ಇರಿಸಿಕೊಂಡಿರುವ `ವ್ಯಾಲ್ಯೂ ವಿಂಗ್ಸ್' ರಾಷ್ಟ್ರದ ಪ್ರಮುಖ ಮಾನವ ಸಂಪನ್ಮೂಲ ಸಂಸ್ಥೆಗಳಲ್ಲಿ ಒಂದು. 2002 ರಲ್ಲಿ ಮೈದಳೆದ ಈ ಸಂಸ್ಥೆಯು, ನಾನಾ ರಂಗಗಳಲ್ಲಿನ ಸಂಸ್ಥೆಗಳ ಹಾರ್ಡ್‍ವೇರ್ ಮತ್ತು ಸಾಫ್ಟ್ ವೇರ್ ಅಗತ್ಯತೆಗಳನ್ನು ಪೂರೈಸುತ್ತಿದೆ. ಜೊತೆಗೆ, ಸಂಸ್ಥೆಗಳಿಗೆ ಮಾನವ ಸಂಪನ್ಮೂಲಗಳನ್ನೂ ಒದಗಿಸುತ್ತಿದೆ. ಮಾನವ ಸಂಪನ್ಮೂಲ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು 2002ರಿಂದಲೂ ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ಅಭ್ಯಸಿಸುತ್ತಿರುವ ವ್ಯಾಲ್ಯೂ ವಿಂಗ್ಸ್, ನಿರುದ್ಯೋಗಗಳ ಬದುಕಿನಲ್ಲಿ ಆಶಾಕಿರಣವಾಗಬೇಕು ಎನ್ನುವ ಉದ್ದೇಶದಿಂದ 1008 ಜಾಬ್ ಡಾಟ್ ಕಾಮ್ ಹೆಸರಿನ ಹುಡುಕುತಾಣವನ್ನು ಆರಂಭಿಸಿದೆ" ಎನ್ನುತ್ತಾರೆ ಸಂಸ್ಥೆಯ ಸಿಇಓ ಕೆ ಪ್ರಶಾಂತ್. ವಿಶೇಷತೆಗಳು: ಎಲ್ಲಾ ವರ್ಗದ ನಿರುದ್ಯೋಗಿಗಳಿಗೂ ನಿಗಧಿತ ಆದಾಯ ಮೂಲವಾಗಿ ಉದ್ಯೋಗವನ್ನು ಹುಡುಕಿಕೊಡಬೇಕು ಎನ್ನುವುದೇ 1008 ಜಾಬ್ ಡಾಟ್ ಕಾಮ್ ನ ಮೂಲ ಉದ್ದೇಶ. ಈ ಆಟೊಮೇಟೆಡ್ ಜಾಬ್ ಪೋರ್ಟಲ್ ಅನ್ನು ಎಚ್ಚರಿಕೆಯಿಂದ ರಚಿಸಲಾಗಿದೆ. ಇಲ್ಲಿ ಪರಿಣಿತ, ಅರೆಪರಿಣಿತ ಇಲ್ಲವೇ ಅನನುಭವಿಗಳಿಗೂ (, -) ಉದ್ಯೋಗ ಹೊಂದುವ ಅವಕಾಶ ಇದೆ. ಜೊತೆಗೆ, ಉದ್ಯೋಗಾಕಾಂಕ್ಷಿಗಳು ರಾಷ್ಟ್ರದ ಯಾವುದೇ ಭಾಗದಲ್ಲಿ ಪೂರ್ಣ ಪ್ರಮಾಣದ ಅಥವಾ ಅರೆಕಾಲಾವಧಿಯ ಕೆಲಸಗಳನ್ನು, ಇಲ್ಲವೇ ಇಂಟರ್ನ್‍ಶಿಪ್ ಉದ್ಯೋಗಗಳನ್ನು ( , ) ಹುಡುಕಬಹುದು. ಗೃಹಿಣಿಯರಿಗೆ: 18 ರಿಂದ 60 ವರ್ಷ ವಯೋಮಾನದ ಎಲ್ಲರಿಗೂ 1008 ಜಾಬ್ ಡಾಟ್ ಕಾಮ್ ಉದ್ಯೋಗ ಹೊಂದಲು ನೆರವಾಗಲಿದೆ. ಮುಖ್ಯವಾಗಿ, ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳ ಬಯಸುವ ಗೈಹಿಣಿಯರಿಗೆ ಈ ಉದ್ಯೋಗ ಹುಡುಕುತಾಣ ಆಶಾಕಿರಣವಾಗಲಿದೆ. "ಹೆಸರೇ ಸೂಚಿಸುವಂತೆ, ಒಂದೆಡೆ ಸಹಸ್ರಾರು ಉದ್ಯೋಗಗಳನ್ನು ನೂರಾರು ಸಂಸ್ಥೆಗಳಲ್ಲಿ ಹೊಂದುವ ಅವಕಾಶವನ್ನು ಈ ಜಾಬ್ ಪೋರ್ಟಲ್ ದುಡಿವ ತುಡಿತ ಹೊಂದಿರುವವರಿಗೆ ಒದಗಿಸಿಕೊಟ್ಟರೆ, ಮತ್ತೊಂದೆಡೆ ಅಗತ್ಯ ವಿದ್ಯಾರ್ಹತೆ/ಪರಿಣಿತಿ ಹೊಂದಿರುವ ಮಾನವ ಸಂಪನ್ಮೂಲವನ್ನು ಹೊಂದಲು ಸಂಸ್ಥೆಗಳಿಗೆ ನೆರವಾಗಲಿದೆ. ಜಾಬ್ ಪೋರ್ಟಲ್‍ನ ಆರಂಭವೇ ದುಡಿವ ಕೈಗಳು ಮತ್ತು ಉದ್ಯೋಗದಾತ ಸಂಸ್ಥೆಗಳ ನಡುವೆ ಸೇತುವೆಯಂತೆ ವ್ಯವಹರಿಸುವುದು" ಎನ್ನುತ್ತಾರೆ ವ್ಯಾಲ್ಯೂ ವಿಂಗ್ಸ್‍ನ ಸಿಇಓ ಕೆ ಪ್ರಶಾಂತ್. ಸಮಗ್ರ ಮಾಹಿತಿ: ಈ ಉದ್ಯೋಗ ಹುಡುಕುತಾಣ ಮಾಹಿತಿಯ ಕಣಜವೇ ಆಗಿದೆ. ನೂರಾರು ಸಂಸ್ಥೆಗಳ ಸಹಸ್ರಾರು ಉದ್ಯೋಗಗಳು ಬೆರಳ ತುದಿಯಲ್ಲಿಯೇ ಲಭ್ಯ. ಮತ್ತೊಂದೆಡೆ, ಉದ್ಯೋಗ ಸಂಬಂಧಿತ ಪ್ರಕಟಣೆಗಳು/ಅಧಿಸೂಚನೆಗಳೂ ಲಭ್ಯ. ಉಚಿತ ನೋಂದಣಿಗೆ ಅವಕಾಶ ಕಲ್ಪಿಸುವ ಈ ಉದ್ಯೋಗ ಹುಡುಕುತಾಣವು, ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಅರ್ಜಿ ಗುಜರಾಯಿಸುವ ಅವಕಾಶ ಕಲ್ಪಿಸುತ್ತದೆ. ಜೊತೆಗೆ, ಸಂಸ್ಥೆ ಬಗೆಗಿನ ವರದಿಗಳು-ವಿಶ್ಲೇಷಣೆಗಳು, ಕೆಲಸ ಮಾಡುವ ಸ್ಥಳ ಪರಿಚಯಿಸುವ ಚಿತ್ರಗಳು, ದೃಶ್ಯ ಮತ್ತು ಶ್ರಾವ್ಯ ) ಪ್ರೊಫೈಲ್‍ಗಳು, ಹೆಚ್ಚಿನ ಶ್ರಮವಿಲ್ಲದೆ ಸೂಕ್ತ ಕೆಲಸ ಹುಡುಕಲು ನೆರವಾಗುವ `ಸ್ಮಾರ್ಟ್ ಸಿಸ್ಟಮ್' ಮೊದಲಾದವುಗಳಿಂದ ಕೂಡಿದೆ. ಪ್ರೊಫೈಲ್/ಸ್ವವಿವರ ಆಯ್ಕೆಯಾದಲ್ಲಿ, ಸಂದರ್ಶನದ ದಿನಾಂಕ, ಸ್ಥಳ, ಸಮಯ ಮತ್ತಿತರ ವಿವರಗಳನ್ನೂ ಅರ್ಜಿದಾರರಿಗೆ ತಿಳಿಸುವ ಅಪರೂಪದ ಅವಕಾಶವನ್ನು 1008 ಜಾಬ್ ಡಾಟ್ ಕಾಮ್ ಒದಗಿಸಿಕೊಡಲಿದೆ. ತೃತೀಯ ಲಿಂಗಿಗಳಿಗೆ: ಸಮಾಜದಿಂದ ಕಡೆಗಣಿಸಲ್ಪಟ್ಟಿರುವ ತೃತೀಯ ಲಿಂಗಿಗಳೂ (ಮಂಗಳಮುಖಿಯರು) ಕೆಲಸ ಮಾಡಲು ಅರ್ಹರು ಎನ್ನುವುದನ್ನು ಬಲವಾಗಿ ಪ್ರತಿಪಾದಿಸುವ ವ್ಯಾಲ್ಯೂ ವಿಂಗ್ಸ್, ಈ ಲೈಂಗಿಕ ಅಲ್ಪಸಂಖ್ಯಾತರಿಗೂ ಉದ್ಯೋಗ ದೊರಕಿಸಿಕೊಡಲು ತನ್ನ ಹುಡುಕುತಾಣದ ಮೂಲಕ ಯತ್ನಿಸಲಿದೆ. ತೃತೀಯ ಲಿಂಗಿಗಳು ಈ ಜಾಬ್ ಪೋರ್ಟಲ್ ಮೂಲಕ ತಮ್ಮ ವಿದ್ಯಾರ್ಹತೆ/ಅನುಭವಕ್ಕೆ ಅನುಗುಣವಾದ ಉದ್ಯೋಗವನ್ನು ಆಸಕ್ತಿಯ ಕ್ಷೇತ್ರದಲ್ಲಿ ಪಡೆಯಬಹುದು. "ಕಿಯೋಸ್ಕ್ ಮೂಲಕ ಮಾತ್ರವೇ ಉದ್ಯೋಗ ಒದಗಿಸಿಕೊಡದೆ, ಎಲೆಕ್ಟ್ರಾನಿಕ್ ಕಿಯೋಸ್ಕ್ (‘- ' ) ಮೂಲಕವೂ ವ್ಯಾಲ್ಯೂ ವಿಂಗ್ಸ್ ದುಡಿವ ಕೈಗಳಿಗೆ ಕೆಲಸ ಕೊಡಿಸಲು ನಿರ್ಧರಿಸಿದೆ. ಅದಕ್ಕಾಗಿ, ವಿವಿಧ ನಗರ-ಪಟ್ಟಣಗಳಲ್ಲಿ ಕಿಯೋಸ್ಕ್‍ಗಳನ್ನು ಸ್ಥಾಪಿಸಲಿದೆ" ಎನ್ನುತ್ತಾರೆ ವ್ಯಾಲ್ಯೂ ವಿಂಗ್ಸ್‍ನ ಸಿಇಓ ಕೆ ಪ್ರಶಾಂತ್