ಸಾಹಸಮಯ ಚಕ್ರವ್ಯೂಹದ ಅನುಭವ. ಒಮ್ಮೆ ಸಾಹಸಕ್ಕಿಳಿದರೆ 48 ಬಗೆಯ ಮೈ ಬೆವರಿಳಿಸುವ, ಮೈ ರೋಮಾಂಚನಗೊಳಿಸುವ... ಚಕ್ರವ್ಯೂಹದ ಅನುಭವ. ಒಮ್ಮೆ ಸಾಹಸಕ್ಕಿಳಿದರೆ 48 ಬಗೆಯ ಮೈ ಬೆವರಿಳಿಸುವ, ಮೈ ರೋಮಾಂಚನಗೊಳಿಸುವ, ಮೈಯೊಳಗೆ ಅಡ್ರಿನಾಲಿನ್ ಧುಮ್ಮಿಕ್ಕಿ ಹರಿಯುವಂತೆ ಮಾಡುವ ಆಟಗಳನ್ನು ಮುಗಿಸಿಯೇ ಹೊರಬರಬೇಕು. ಹೈದ್ರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರವಾಸಿಗರಿಗಾಗಿಯೇ ನಿರ್ಮಿಸಿದ ಸಾಹಸ್ ಕ್ರೀಡಾ ಚಟುವಟಿಕೆ ಅನಾವರಣಕ್ಕೆ ಸಜ್ಜಾಗಿದೆ. ಸದ್ಯಕ್ಕೆ ಫಿಲ್ಮ್ ಸಿಟಿಯಲ್ಲಿ ವಾಸ್ತವ್ಯ ಹೂಡುವವರಿಗೆ ಮಾತ್ರ ಸಾಹಸ್ ನಲ್ಲಿ ಪಾಲ್ಗೊಳ್ಳುವ ಅವಕಾಶ. ನೆಟ್ ಪ್ರಾಕ್ಟೀಸ್‌ನಲ್ಲಿ ಮಕ್ಕಳಿಗೂ ಸಾಹಸ ತೋರುವ ಸೌಲಭ್ಯವಿದೆ. 20 ಅಡಿ ಎತ್ತರದಲ್ಲಿ ನಿರ್ಮಿಸಿರುವ ನೆಟ್‌ನಲ್ಲಿ ಜಿಗಿದಾಡಬಹುದು. ಆಯ ತಪ್ಪಿದರೂ ಅಪಾಯವಾಗದ ರೀತಿಯಲ್ಲಿ ಬಲೆಯಿದೆ. 40 ಅಡಿ ಎತ್ತರದ ಬಲೆಯನ್ನು ಹತ್ತಬೇಕು. ಅಲ್ಲಿಂದ ಒಂದೊಂದೇ ಸಾಹಸಮಯ ಆಟಗಳ ಪ್ರಾರಂಭ, ಸ್ಪೈಡರ್ ವೆಬ್, ಹಲಗೆಯ ಕಾಲು ಸಂಕ ದಾಟುವುದು, ಹಗ್ಗ ಹಿಡಿದು ದಾಟುವುದು ಮುಂತಾದ ವೈವಿಧ್ಯಮಯ ಸಾಹಸ ಕ್ರಿಯೆಗಳು ಪ್ರವಾಸಿಗರನ್ನು ಹುರಿದುಂಬಿಸುತ್ತವೆ. ನೆಟ್ ಪ್ರಾಕ್ಟೀಸ್ ಮುಗಿಯುತ್ತಿದ್ದಂತೆ ಹ್ಯೂಮನ್ ಫೂಸ್ ಬಾಲ್, ಟೆಲಿಬಾಕ್ಸಿಂಗ್, ಮೆಲ್ಟ್ ಡೌನ್ ಮುಂತಾದ ಮುದ ನೀಡುವ ಕ್ರೀಡೆಗಳು ಸಜ್ಜಾಗಿರುತ್ತದೆ. ಹೈದರಾಬಾದ್‌ನಿಂದ 35 ಕಿ.ಮೀ ದೂರದಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಹಲವಾರು ವಿಷಯಗಳಲ್ಲಿ ಪ್ರಥಮ. ಈಗ ಸಾಹಸ್ ನೊಂದಿಗೆ ಏಷ್ಯಾದಲ್ಲಿಯೇ ಮೊದಲು ಎನ್ನುವ ಹೆಗ್ಗಳಿಕೆ. ಪ್ರತಿ ಕ್ರೀಡಾ ಚಟುವಟಿಕೆಗೂ ಜಾಗತಿಕ ಗುಣಮಟ್ಟ, ಸುರಕ್ಷಾಕ್ರಮ. ಅಂತಾರಾಷ್ಟ್ರೀಯ ಮಟ್ಟದ ಫ್ರಾನ್ಸ್ ತಜ್ಞರಿಂದ ನಿರ್ಮಾಣ, ಮಹಿಳೆಯರು-ಮಕ್ಕಳಿಗಾಗಿ ಪ್ರತ್ಯೇಕ ಟ್ರಾಕ್‌ಗಳು, ಪರಿಣಿತಿ ಹೊಂದಿದ ತರಬೇತುದಾರರು. ಝಾರ್ಬ ಫ್ಲಾರ್ಮ್ ದೇಶದಲ್ಲಿಯೇ ಅತ್ಯಂತ ಉದ್ದವಾಗಿದ್ದು, 220 ಮೀಟರ್ ಫ್ಲಾಟ್‌ಫಾರ್ಮ್ ಹೊಂದಿದೆ. ಎಟಿವಿ (ಆಲ್ ಟೆರೈನ್ ವೆಹಿಕಲ್) ರೈಡ್ ಮಾಡುವ ಮಕ್ಕಳಿಗೆ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಟ್ರಾಕ್ ರೂಪಿಸಲಾಗಿದೆ. 1.50 ಕಿ.ಮೀ ಉದ್ದದ ಎಟಿನಿ ಟ್ರಾಕ್‌ನಲ್ಲಿ ಮೋಟಾರ್ ಸೈಕಲ್ ಓಡಿಸುವುದೇ ಅದ್ಭುತ ಅನುಭವ . ಹೆಲ್ಮೆಟ್, ಕೈಗವಸು, ಎದೆಗವಚ, ಕಾಲಿನ ರಕ್ಷಾ ಕವಚ ಧರಿಲಿ ಬೈಕ್ ಏರಿದರೆ ಒಮ್ಮೆ ಎದೆ ಝಲ್ ಎಂದರೂ ಬೈಕ್ ಓಡಿಸುವ ಹುಮ್ಮಸ್ಸು ಇಮ್ಮಡಿಗೊಳ್ಳುತ್ತದೆ. ಕೈಗೆಟಕುವ ದರ ರಾಮೋಜಿ ಫಿಲ್ಮ್ ಸಿಟಿ 1650 ಎಕರೆ ಪ್ರದೇಶದ್ದು. ಕಲ್ಲು ಗುಡ್ಡ, ಡಿಣ್ಣೆ, ಎಲ್ಲವನ್ನೂ ಹೊಂದಿರುವ ಇಲ್ಲಿ ಸಾಹಸ್ ಗಾಗಿಯೇ 16 ಎಕರೆ ಪ್ರದೇಶ ಮೀಸಲು. ಹೈರೋಪ್, ಹಾರ್ನೆಸ್ ಕೋರ್ಸ್, ನೆಟ್ ಕೋರ್ಸ್, ಪೇಯಿಂಟ್ ಬಾಲ್, ಝಾರ್ಬಿಂಗ್, ಎಟಿವಿ ರೈಡ್ಸ್, ಮೌಂಟನ್ ಬೈಕ್, ಸೈಕ್ಲಿಂಗ್, ಟಾರ್ಗೆಟ್ ಶೂಟ್ ರೇಂಜ್, ಸುಮೋ ಸ್ಯೂಟ್ ಫೈಟಿಂಗ್, ಭಂಗಿ ಎಜೆಕ್ಷನ್, ಹ್ಯೂಮನ್ ಫೂಸ್‌ಬಾಲ್, ಮೆಲ್ಟ್-ಡೌನ್, ಬಾಡಿ ಝಾರ್ಬ್ ಫೈಟ್, ಟೆಲಿ ಬಾಕ್ಸಿಂಗ್, ಏರ್ ರೈಫಲ್, ಸ್ಲಿಂಗ್ ಶಾಟ್ಸ್ ಮುಂತಾದ ಮೈನವಿರೇಳಿಸುವ ಚಟುವಟಿಕೆಗಳು. ನಿತ್ಯ ಬದುಕಿನ ಏಕತಾನತೆಯಲ್ಲಿರುವ ನೌಕರ ವರ್ಗ, ಉದ್ಯಮಿಗಳು, ಕಾರ್ಪೋರೇಟ್ ವಲಯದ ಉದ್ಯೋಗಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಕೈಗೆಟಕುವ ರೀತಿಯಲ್ಲಿ ಸಾಹಸ್ ಅಣಿಗೊಳಿಸಲಾಗಿದೆ . ಪೇಯಿಂಟ್ ಬಾಲ್‌ಗಳಲ್ಲಿ ಭಾಗವಹಿಸುವವರನ್ನು ನೋಡುವ ಸಲುವಾಗಿಯೇ ವಿಶೇಷ ಗ್ಯಾಲರಿಗಳಿವೆ. ರಾಷ್ಟ್ರದಲ್ಲಿಯೇ ಪ್ರಥಮವಾಗಿರುವ ಆಂಗ್ರೀ ಬರ್ಡ್ ಥೀಮ್ ಆಧಾರಿತ ಶೂಟಿಂಗ್ ಝೋನ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ರಾಮೋಜಿ ಗ್ರೂಪ್‌ನ ಅಧ್ಯಕ್ಷ ರಾಮೋಜಿರಾವ್ ಹೇಳುವ ಪ್ರಕಾರ ಏಷ್ಯಾದ ಅತ್ಯುತ್ತಮ ಪ್ರವಾಸಿ ತಾಣವಾಗಬೇಕು ಎನ್ನುವ ಉದ್ದೇಶದಿಂದಲೇ ಸಾಹಸ್‌ನ್ನು ರೂಪಿಸಿದ್ದು ವಿಶಾಲ ಶ್ರೇಣಿಯ ಸಾಹಸ ಚಟುವಟಿಕೆ ಅಳವಡಿಸಲಾಗಿದೆ. ಫಿಲ್ಮ್ ಸಿಟಿಗೆ ಭೇಟಿ ಕೊಟ್ಟು ಸಾಹಸ್ ನ್ನು ಸವಿದರೆ ಜೀವನ ಪರ್ಯಂತ ಇದರ ನೆನಪು ಅಚ್ಚಳಿಯದೇ ಉಳಿಯುವುದರಲ್ಲಿ ಸಂಶಯವಿಲ್ಲ. ಸಂಪರ್ಕ: ಪವನ್ , 09394489085 - ವಿಶ್ವಾಮಿತ್ರ ಹೆಗಡೆ