ಹತ್ತು ಸಾವಿರ ಪುರುಷರ ಜೊತೆಯಾಟ! ಅದು ಜಗತ್ತಿನ ಅತ್ಯಂತ ಹಳೆಯ ವೃತ್ತಿ. ಆದರೆ ಭಾರತದಲ್ಲಿ ಕಾನೂನು ಬಾಹಿರ... ಅದು ಜಗತ್ತಿನ ಅತ್ಯಂತ ಹಳೆಯ ವೃತ್ತಿ. ಆದರೆ ಭಾರತದಲ್ಲಿ ಕಾನೂನು ಬಾಹಿರ. ಆದರೆ ಪ್ರತಿ ನಗರದಲ್ಲೂ ಅದನ್ನೇ ಅವಲಂಬಿಸಿ ಬದುಕುವವರ ಸಂಖ್ಯೆ ಸಾವಿರಾರು. ಬೀದಿ ಬದಿಯಿಂದ ಆರಂಭಿಸಿ ಪಂಚತಾರಾ ಹೋಟೆಲ್‌ಗಳವರೆಗೆ ಅದಕ್ಕೆ ನೂರಾರು ಮುಖಗಳು. ಹೌದು, ಅದೆ- ವೇಶ್ಯಾವಾಟಿಕೆ. ಭಾರತದಲ್ಲಿ ಅದನ್ನು ಕಾನೂನುಬದ್ಧಗೊಳಿಸಿ ಎಂದವರಲ್ಲಿ ಕನ್ನಡದ ಕವಿ ನಿಸಾರ್ ಅಹಮ್ಮದ್ ಇತ್ತೀಚಿನವರು. ಅವರು ವ್ಯಂಗ್ಯದಿಂದಲೇ ಈ ಮಾತನ್ನು ಹೇಳಿರಬಹುದು. ಅದೇ ವ್ಯಂಗ್ಯದಿಂದಲೇ 2009ರಲ್ಲಿ ನಮ್ಮ ಸುಪ್ರೀಂ ಕೋರ್ಟ್ ಕೂಡ ಸರಕಾರವನ್ನು 'ಇದನ್ನು ಕಾನೂನುಬದ್ಧಗೊಳಿಸಿ' ಎಂದು ಛೇಡಿಸಿತ್ತು. ಒಂದು ಕಾಯಿದೆ ತರುವುದೇನೋ ಸುಲಭವೇ. ಆದರೆ ಕಾಯಿದೆಶೀರಗೊಳಿಸಿದ ಕೂಡಲೇ ಆ ವೃತ್ತಿಯ ಅಸಹ್ಯಗಳೆಲ್ಲ ಇಲ್ಲವಾಗುತ್ತದೆಯೆ? ಇಲ್ಲೊಂದು ಅನುಭವಾಮೃತವಿದೆ. ಈಕೆ ಮೆಲ್ಬೋರ್ನ್‌ನವಳು. 15 ವರ್ಷಗಳಿಂದ ಹೈ ಸೊಸೈಟಿ ವೇಶ್ಯಾವಾಟಿಕೆ, ಕ್ಷಮಿಸಿ, ಎಸ್ಕಾರ್ಟ್ ಉದ್ಯಮದಲ್ಲಿದ್ದಾಳೆಯ 10000 ಪುರುಷರ ಜತೆ ಮಲಗಿ ಎದ್ದಿದ್ದಾಳಂತೆ! ಆಕೆ ಬರೆದಿರುವ ಬೆಸ್ಟ್ ಸೆಲ್ಲರ್ ಪುಸ್ತಕದ ಹೆಸರೇ 'ಟೆನ್ ಥೌಸಂಡ್ ಮೆನ್, ಆ್ಯಂಡ್ ಕೌಂಟಿಂಗ್‌'. ಅದರಿಂದ ಆಯ್ದ ಕೆಲವು ಭಾಗಗಳು ಇಲ್ಲಿವೆ. ನಾನು ಹದಿನೆಂಟು ವರ್ಷದವಳಿದ್ದಾಗ, ನನ್ನ ಮೇಲೆ ಅತ್ಯಾಚಾರ ನಡೆಯಿತು. ನಾಲ್ಕು ಯುವಕರು ನನ್ನನ್ನು ಅಮಾನುಷವಾಗಿ ಬಳಸಿಕೊಂಡರು. ಆಗ ನಾನಿನ್ನೂ ಕೌಮರ್ಯದಲ್ಲಿದ್ದೆನೆಂದೇ ಹೇಳಬೇಕು. ಈ ಘಟನೆಯನ್ನು ನಾನು ಯಾರಿಗೂ ಹೇಳಲಿಲ್ಲ. ಆದರೆ, ನನ್ನ ಭವಿಷ್ಯಕ್ಕೆ ಇದೇ ಮುನ್ನುಡಿಯಾಯಿತೆಂಬುದು ಸತ್ಯ. ನಾನು ಹತ್ತೊಂಬತ್ತು ವರ್ಷದವಳಿದ್ದಾಗ, ಬಾರ್‌ನಲ್ಲಿ ಟೇಬಲ್ ಟಾಪ್ ನೃತ್ಯಕ್ಕೆ ಹುಡುಗಿಯರು ಬೇಕೆಂಬ ಜಾಹೀರಾತು ನೋಡಿ ಆಕರ್ಷಿತಳಾಗಿ, ಅಲ್ಲಿ ಸೇರಿದೆ. ದಾರಿ ತಪ್ಪುವಷ್ಟು ಶಾಣ್ಯಾ ಇದ್ದೆನಲ್ಲ! ಇನ್ನೂ ಮುಂದುವರಿದರೆ ಸಾಕಷ್ಟು ಹಣ ಮಾಡಬಹುದೆಂಬುದು ಅಲ್ಲೇ ಹೊಳೆಯಿತು. ನಾನು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಮೊದಲ ಬಾರಿ ಪ್ರಜ್ಞೆ ತಪ್ಪುವಷ್ಟು ಕುಡಿದು, ನನ್ನ ಕೆಲಸಕ್ಕೆ ಸಮರ್ಥನೆ ಒದಗಿಸಿಕೊಂಡೆ. ಮೊದಲ ರಾತ್ರಿ ಸಾವಿರ ಡಾಲರ್ ಗಳಿಸಿದೆ. ಪರವಾಗಿಲ್ವೆ ಅನ್ನಿಸಿತು. ಮೂರು ವರ್ಷ ಮೆಲ್ಬೋರ್ನ್‌ನಲ್ಲಿ ದುಡಿದೆ. ನಂತರ ವೇಶ್ಯಾವಾಟಿಕೆ ಕಾನೂನು ಬದ್ಧವಾಗಿರುವ ಇತರ ದೇಶಗಳಿಗೆ ದೊಡ್ಡ ಮನುಷ್ಯರ ಜತೆ ಸಂಚರಿಸಿದೆ. ಹಾಗೆ ಹೋಗುವಾಗಲೆಲ್ಲ ಬೇರೆ ಬೇರೆ ಹೆಸರಿನಲ್ಲಿರುತ್ತಿದ್ದೆ. 'ಏಂಜೆಲಿನಾ' ಎಂಬುದು ನಾನು ತುಂಬಾ ಬಾರಿ ಬಳಸಿದ ಹೆಸರು. ನನ್ನ ಗಿರಾಕಿಗಳ ಪಟ್ಟಿಯಲ್ಲಿ ರಾಜಕಾರಣಿಗಳು, ಸಂಗೀತಗಾರರು, ವಕೀಲರು ಎಲ್ಲ ಇದ್ದರು ಇದೇ ಹೊತ್ತಿಗೆ ನಾನು ಮಾಡೆಲಿಂಗ್ ಕೂಡ ಮಾಡುತ್ತಿದ್ದೆ. ಅದೇ ಸಮಯಕ್ಕೆ ಕಾರು ಅಪಘಾತವಾಯಿತು. ಹೇಗೋ ಗಾಯಳಿಲ್ಲದೆ ಬದುಕುಳಿದೆ. ಈ ವೃತಿ ಬಿಡಬೇಕೆಂದು ಮನಸ್ಸು ಹೇಳಿತು. ಪೈಲಟ್ ಆಗಿ ಸೇರಿಕೊಂಡೆ ಮೂರು ವರ್ಷಗಳ ವೃತ್ತಿ ಚೆನ್ನಾಗಿತ್ತು. ಆ ಅವಧಿಯಲ್ಲಿ ಎಸ್ಕಾರ್ಟ್‌ಗಿರಿಯಿಂದ ಸಂಪೂರ್ಣ ದೂರವಿದ್ದೆ, ನಂಬಿ. ಆದರೆ ನನ್ನ ಕಿಡ್ನಿ ಹಾಳಾಯಿತು. ಅದರಿಂದಾಗಿ ನನ್ನ ಪೈಲಟ್ ಪರವಾನಗಿ ನವೀಕರಣಗೊಳ್ಳಲಿಲ್ಲ. ಈಗಾಗಲೇ ಎತ್ತರದಲ್ಲಿದ್ದ ಜೀವನಶೈಲಿಯನ್ನು ಕೆಳಗಿಳಿಸುವುದು ಸಾಧ್ಯವಿರಲಿಲ್ಲ. ಹಳೆಯ ದಂಧೆಗೆ ಮರಳುವುದು ಅನಿವಾರ್ಯವಾಯಿತು. ನಾನು ಮೊದಲ ಬಾರಿಗೆ ಕೊಕೇನ್ ಸೇವಿಸಿದ್ದು ಒಬ್ಬ ಕೋಟ್ಯಧೀಶನ ಜತೆ. ಆತನಲ್ಲಿ ದುಡ್ಡು ಸಾಕಷ್ಟಿತ್ತು. ಬಯಸಿದ ಹೆಣ್ಣುಗಳೂ ಸಿಗುತ್ತಿದ್ದರು. ಆದರೆ ಯಾವುದನ್ನೂ ಸರಿಯಾಗಿ ಅನುಭವಿಸಲು ಕೊಕೇನ್ ಬಿಡುತ್ತಿರಲಿಲ್ಲ. ನನ್ನ ಜತೆ ಆತ ಇದ್ದಷ್ಟೂ ಸಮಯ ನನ್ನನ್ನು ಬಳಸಿಕೊಂಡದ್ದಕ್ಕಿಂತಲೂ ಕೊಕೇನ್ ಸೇವಿಸಿ ಚಿತ್ತಾಗಿದ್ದದ್ದೇ ಹೆಚ್ಚು. ಅದೊಂದು ಲೈಫ್ ಸ್ಟೈಲ್. ಶಾಂಪೇನ್, ಕೊಕೇನ್, ದುಡ್ಡು, ಕಾರುಗಳು, ಕ್ಯಾಸಿನೋ ಮತ್ತು ಹೈಸೊಸೈಟಿ ಕ್ಲಬ್ಬುಗಳು. ನಿಧಾನವಾಗಿ ನಾನು ನಾಶದ ಹಾದಿಯಲ್ಲಿದ್ದೆ. ಭಯಂಕರ ಅನಿಸುವ ಅನುಭವಗಳೇನಾಗಿಲ್ಲ ನನಗೆ. ಆದರೆ ನನ್ನ ಕೆಲವು ಗೆಳತಿಯರು ಹೇಳುವುದನ್ನು ಕೇಳಿದರೆ ನಡುಕ ಹುಟ್ಟುತ್ತದೆ. ವಿಟರಲ್ಲಿ ಕೆಲವರು, ವೇಶ್ಯೆಯರ ಮೈಯಲ್ಲಿ ಎಲ್ಲೆಲ್ಲ ರುಂಧ್ರ ಇದೆಯೇ ಅಲ್ಲೆಲ್ಲಾ ದಾಳಿ ನಡೆಸುವವರಿರುತ್ತಾರೆ. ಕನಸಿನಲ್ಲೂ ಊಹಿಸಿದ ವಿಧಾನದ ಚಿತ್ರಹಿಂಸೆ ನೀಡುವವರಿರುತ್ತಾರೆ. ಇವರ ಪತ್ನಿಯರು(ಇದ್ದರೆ) ಅದೇನು ಪಾಡು ಪಡುತ್ತಾರೋ ನನಗೆ ಗೊತ್ತಿಲ್ಲ. ಬರೀ ಕಾಸು ಕೊಟ್ಟು ಎಲ್ಲಾ ನೋಡಿ ಏನೂ ಮಾಡದೆ ಎದ್ದು ಹೋಗುವವರೂ ಇದ್ದಾರೆ. ವೇಶ್ಯಾವಾಟಿಕೆಗೆ ಹೋಗುಬಯಸುವವರಿಗೆ ನಾನೊಂದು ಮಾತು ಹೇಳಬಯಸುತ್ತೇನೆ. ಅದೊಂದು ನಿಮ್ಮೊಳಗೇ ಬೆಳೆಯುವ, ಉಳಿಯುವ ವೃತ್ತಿ. ನೀವೊಮ್ಮೆ ಅದರಿಂದ ಹೊರಬಂದರೂ, ಅದು ನಿಮ್ಮೊಳಗೆ ಉಳಿದು ಬೆಳೆಯುತ್ತದೆ. ಎಂದೂ ಅದರಿಂದ ಪೂರ್ತಿ ಬಿಡಿಸಿಕೊಳ್ಳಲಾರಿರಿ. ಆ ಉದ್ಯಮದಲ್ಲಿರುವವರಿಗೆ ನಾನು ದನಿಯಾಗಲೂ ಬಯಸಿದ್ದೇನೆ. ಏಕೆಂದರೆ ಅವರೆಲ್ಲ ಮನುಷ್ಯ ಜೀವಗಳು, ನಿಮ್ಮಂತೆಯೇ. ನನ್ನ ಮಾತುಗಳನ್ನು ಓದಿ ಒಂದು ಜೀವ ಅದರಿಂದ ಹಿಂತೆಗೆದರೂ ಸಾಕು, ನನ್ನ ಜೀವನ ಸಾರ್ಥಕವಾಗುತ್ತದೆ. ಭಾರತದ ರಸಿಕ ನಗರಿಗಳು, ಇಲ್ಲಿ ಇದು ಕಾನೂನುಬದ್ಧ ಕಾಮಾಟಿಪುರ- ಮುಂಬಯಿ ಸೊನಗಾಚಿ- ಕೋಲ್ಕತಾ ಜೆ.ಬಿ.ರೋಡ್ - ದೆಹಲಿ ಕಬಡಿ ಬಜಾರ್ - ಮೀರತ್ ಮೀರ್‌ಗಂಜ್ - ಅಲಹಬಾದ್ -ಅನು: ಶ್ರವಂತಿ