ಹೊಸ ವರ್ಷಕ್ಕೆ ಓದುಗರ ಸಂಕಲ್ಪ ನಾವು ಪ್ರತಿವರ್ಷ ನ್ಯೂ ಇಯರ್ ರೆಸಲ್ಯೂಷನ್ ಹಾಕಿಕೊಳ್ಳುತ್ತೇವೆ. ಆದರೆ ಅದರನ್ವಯ ನಡೆಯುವುದು ಬಹಳ ಕಡಿಮೆ. ಆದರೆ ಕೈಗೆಟಕುವ, ಸಂತಸ ತರುವ, ನಾಲ್ಕು ಜನರೆದುರಿಗೆ ನಮ್ಮನ್ನು ಎದ್ದು ಕಾಣುವಂತೆ ಮಾಡುವ ಸಂಕಲ್ಪಗಳಿಗೆ ಒತ್ತು ನೀಡಿದರೆ ಬರಲಿರುವ ನಾಳೆಗಳು ನಮ್ಮ ಮುಖದಲ್ಲಿ ಮಂದಹಾಸ ಮಾಸದಂತೆ ಮಾಡುತ್ತವೆ. ಅಂತಹ ಬದುಕು ನಿಮ್ಮದಾಗಲಿ, ನಿಮ್ಮ ಸಂಕಲ್ಪ ಕೈಗೂಡಲಿ ಎಂದು ಆಶಿಸುತ್ತ ಕನ್ನಡಪ್ರಭ.ಕಾಮ್‌ಗೆ ಓದುಗರು ಕಳುಹಿಸಿದ ಕೆಲವು ಆಯ್ದ ಸಂಕಲ್ಪಗಳನ್ನು ಇಲ್ಲಿ ಪ್ರಕಟಿಸಲಾಗಿದೆ.ಹೊಸ ವರ್ಷದಿಂದ ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಸೋದಿಲ್ಲ, ಸಿಗ್ನಲ್ ಜಂಪ್ ಮಾಡೋದಿಲ್ಲ, ಟ್ರಾಫಿಕ್ ರೂಲ್ಸ್ ಪಾಲನೆ ಮಾಡ್ತೀನಿ. ದೇಹವೇ ಆಸ್ತಿ ಅಂತ ದೊಡ್ಡೋರ್ ಹೇಳಿದ್ದಾರೆ. ಉತ್ತಮ ದೈಹಿಕ ಆರೋಗ್ಯಕ್ಕಾಗಿ ಪ್ರತಿ ದಿನವೂ ವ್ಯಾಯಾಮ ಮಾಡ್ಬೇಕು. ಈ ಹೊಸ ವರ್ಷದ ಮೊದಲ ದಿನದಿಂದಲೇ ವ್ಯಾಯಾಮ ಶುರು. ವ್ಯಾಯಾಮದಿಂದ ಸೂಪ್ತ ಮನಸ್ಸು ಸಚೇತನಗೊಳ್ಳುತ್ತೆ. ಹಾಗೆ ನ್ಯೂಟನ್ ನಿಯಮದ ಪ್ರಕಾರ ಪ್ರತಿಯೊಂದು ಕ್ರಿಯೆಗೂ ಪ್ರತಿ ಕ್ರಿಯೆ ಇದ್ದೇ ಇರುತ್ತಂತೆ.. ಹೀಗಿರುವಾಗ ನಾವು ಇನ್ನೊಬ್ಬರನ್ನು ಪ್ರೀತಿಸಿದರೆ/ಸ್ನೇಹದಿಂದ ಮಾತನಾಡಿಸಿದರೆ ಅವರೂ ನಮ್ಮನ್ನು ಸ್ನೇಹದಿಂದ ಕಾಣುತ್ತಾರೆ, ಹಾಗಾಗಿ ಕೆಲಸ ಮಾಡುವ ಸ್ಥಳದಲ್ಲಿ ಅಥವಾ ರಸ್ತೆಯಲ್ಲಿ (ಟ್ರಾಫಿಕ್) ಅನಾವಶ್ಯಕವಾಗಿ ಜಗಳ ಆಡಿ ಬಾಂಧವ್ಯಕ್ಕೆ ಧಕ್ಕೆ ಮಾಡಿಕೊಳ್ಳುವ ಬದಲು ಎಲ್ಲರನ್ನೂ ಸ್ನೇಹದಿಂದ ಮಾತಾಡಿಸಿ ಎಲ್ಲರಿಗೂ ಅಚ್ಚು ಮೆಚ್ಚಿನ ಗೆಳೆಯನಾಗಿ ಇರುತ್ತೇನೆ. -ಸಿ.ಜಿ. ಸುಬ್ರಮಣ್ಯ ಭಾರದ್ವಾಜ್ - ಬೆಂಗಳೂರುನನ್ನ ಸಂಕಲ್ಪ.... ನನಗಾಗಿ ಬದುಕಿದ್ದು ಸಾಕಾಯಿತು ಅನಿಸ್ತಾ ಇದೆ... ಸಮಾಜಮುಖಿಯಾಗಿ ಸಮಾಜದ ಎಳಿಗೆಗೆ ಶ್ರಮಿಸುತ್ತಿರುವ ಸಂಘ- ಸಂಸ್ಥೆಯಲ್ಲಿ ಸಕ್ರಿಯವಾಗಿ ಅಥವಾ ಸ್ವಲ್ಪ ಸಮಯ ಮೀಸಲಿಡೋಣ ಅನಿಸ್ತಾ ಇದೆ. ಜೀವನವನ್ನು ಬೇರೆ ನಲ್ಲಿ ನೋಡಿ ಜೀವಿಸೋಣ ಅನಿಸ್ತಾ ಇದೆ.ಉನ್ನತ ವಿದ್ಯಾಭ್ಯಾಸದ ಕಡೆಗೆ ನನ್ನ ಸಂಕಲ್ಪ. -ಶ್ರೀಧರ ನಾಗರಾಜ್. ಸಾಗರನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಾಮುಖ್ಯತೆ ನೀಡಿರುವ ಸ್ವಚ್ಚತಾ ಅಭಿಯಾನವನ್ನು ಬೆಂಬಲಿಸಲು ಇಚ್ಚಿಸುತ್ತೇನೆ. ಇದರಿಂದ ಸುಂದರ ಭಾರತ ಮತ್ತು ಕೊಳಕು ಮುಕ್ತ ಭಾರತವನ್ನಾಗಿಸಲು ಸಂಕಲ್ಪ ಮಾಡುತ್ತೇನೆ. -ಆನಂದ್.ಬಿಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪಣತೊಡುತ್ತೇನೆ . ಅನಾಥರು ನಿರ್ಗತಿಕರಿಗೆ ಸಹಾಯ ಮಾಡುವುದು. ಶಿಕ್ಷಣ ಸ್ವಚ್ಚತೆ ಎನ್ನುವುದು ಮನೆಯಿ೦ದ ಮೊದಲು ಪ್ರಾರ೦ಭಿಸಿ ನ೦ತರ ಕೇರಿ ಊರು ಸ್ವಚ್ಚತೆಯನ್ನು ಮಾಡುವುದು. ವರ್ಷಕ್ಕೊಮ್ಮೆ ವನ ಮಹೊತ್ಸವದ ಹೆಸರಲ್ಲಿ ಶಾಲೆ ಮಕ್ಕಳೊ೦ದಿಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ನನ್ನ ವಿರಾಮದ ಸಮಯವನ್ನು ಮಕ್ಕಳೊ೦ದಿಗೆ ಕಳೆಯುತ್ತೇನೆ . ವ್ಯರ್ಥವಾಗಿ ವಿದ್ಯುತ್ ವ್ಯಯವಾಗುವುದನ್ನು ತಪ್ಪಿಸುತ್ತೇನೆ . ಹತ್ತಿರದ ಸ್ಥಳಗಳಿಗೆ ನಡೆದೇ ಹೋಗುತ್ತೇನೆ. ಸಾರ್ವಜನಿಕ ಸಾರಿಗೆ ಉಪಯೋಗಿಸಿ ಸ೦ಚಾರಕ್ಕೆ ತೊ೦ದರೆ ಉ೦ಟಾಗುವುದನ್ನು ತಪ್ಪಿಸಿದ೦ತಾಗುತ್ತದೆ ಹಾಗೂ ವಾಯು ಮಾಲಿನ್ಯ ತಪ್ಪಿಸಬಹುದು. -ಎಂ ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರ್ ತಾಲ್ಲೂಕ್ನನ್ನ ಹೊಸ ವರ್ಷದ ಸಂಕಲ್ಪ... ಪ್ರತಿ ತಿಂಗಳು 2 ರಿಂದ 4 ಸಸಿಗಳನ್ನ ನೆಡುವ ನಿರ್ಧಾರ ಮಾಡಿದ್ದೇನೆ. ಏಕೆಂದರೆ, ನಮಗೆ ಉಸಿರಾಡಲು ಸ್ವಚ್ಛ ಗಾಳಿ ಸಿಗುತ್ತಿಲ್ಲಾ, ಜೊತೆಗೆ ಮಳೆಯು ಕಡಿಮೆಯಾಗಿದೆ, ಹಾಗಾಗಿ ನಾನು ಈ ಸಂಕಲ್ಪ ಮಾಡುತಿದ್ದೇನೆ. ಜೊತೆಗೆ ನನ್ನ ಸ್ನೇಹಿತರನ್ನು, ಸಹೋದ್ಯೋಗಿಗಳನ್ನು ನನ್ನ ಜೊತೆ ಕರೆದೊಯ್ಯುತ್ತೇನೆ.ಈಗಾಗಲೇ 3 ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಿದ್ದೇವೆ. ಹೊಸ ವರ್ಷದ ಶುಭಾಶಯಗಳೊಂದಿಗೆ, -ರೇವಣಸಿದ್ದಪ್ಪ ಬಿ. ಆರ್, ಬೆಂಗಳೂರುಈ ವರ್ಷದಿಂದ ಕರೆಕ್ಟ್ ಆಗಿ ಟೈಮ್ ಫಾಲೋ ಮಾಡ್ತಿನಿ ಫ್ಯಾಮಿಲಿ ಜೊತೆ ಉತ್ತಮ ಬಾಂಧವ್ಯ ಹಾಗೂ ಸ್ವಲ್ಪ ಸಮಯ ಮಿಸಲಿರುಸುತ್ತೇನೆ. ನಾನು ಈ ವರ್ಷದಿಂದ ಯಾರಿಗೂ ನೋವನ್ನುಂಟು ಮಾಡದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತೇನೆ. ಎಲ್ಲರಿಗು ಹೊಸ ವರ್ಷದ ಶುಭಾಶಯಗಳು . -ಅಭಿನಂದನ್ ಹೊಸ ವರ್ಷಕ್ಕೆ ನನ್ನ ಸಂಕಲ್ಪ: ಇಂದು ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಎಲ್ಲ ರಂಗಗಳಲ್ಲಿ ಅನ್ಯಾಯವಾಗುತ್ತಿದೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಹೀನಾಯ ಸ್ಥಿತಿಯನ್ನು ಮುಟ್ಟಿವೆ . ಕನ್ನಡಿಗರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಈಗಾಗಲೇ ನಾವು ನಮ್ಮ ರಾಜ್ಯದಲ್ಲೇ ಅಲ್ಪ ಸಂಖ್ಯಾತರಾಗುವ ಸ್ಥಿತಿ ಮುಟ್ಟುತ್ತಿದ್ದೇವೆ. ಕನ್ನಡಿಗರನ್ನು ಒಗ್ಗಟ್ಟಾಗಿಸುವುದು , ಒಂದು ಕನ್ನಡ ಪಕ್ಷವನ್ನು ಅಧಿಕಾರಕ್ಕೆ ತರುವುದು ಮತ್ತು 370 ಕ್ಕೆ ಹೋರಾಡುವುದು ನನ್ನ ಹೊಸ ವರ್ಷದ ಸಂಕಲ್ಪ. -ಹೊಯ್ಸಳಮಾಹಿತಿ ಹಕ್ಕು ಕಾಯ್ದೆಯನ್ನು ನಾಡಿನ ಕೊನೆಯ ವ್ಯಕ್ತಿಗೂ ತಲುಪಿಸುವುದಕ್ಕಾಗಿ ನಿಯಮಿತ ಹೋರಾಟ ಮಾಡುತ್ತೇನೆ. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಜನರು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಸಂಕಲ್ಪ ಮಾಡುತ್ತೇನೆ. -ಜೆ.ಎಂ.ರಾಜಶೇಖರ್ಹೊಸ ಯೋಜನೆ, ಯೋಚನೆ, ಉತ್ತಮ ಜೀವನ ಶೈಲಿ, ಉತ್ತಮ ಗೆಳೆಯರೊಡನೆ ಮತ್ತು ಒಳ್ಳೆ ಬದಲಾವಣೆಯತ್ತ ಚಿತ್ತ ಹರಿಸುವುದು. ನಮ್ಮ ಆಕಾಂಕ್ಷೆಗಳನ್ನು ಒಂದು ದಿನಕ್ಕೆ ಸೀಮಿತಗೊಳಿಸದೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಸಾಗುವುದು. -ರಘು ಗೌಡ, ಸೂರತ್, ಗುಜರಾತ್ನನ್ನ ವೃತ್ತಿಯಲ್ಲಿ ನಾನು ಪ್ರಾಮಾಣಿಕನಾಗಿದ್ದರೂ ಕೆಲವರಿಗೆ ಸಂಕಷ್ಟ ಹಾಗಾಗಿ ಅವರೇನೆಂದು ಕೊಂಡಾರೋ ಎನ್ನುವ ಬಗ್ಗೆ ಒಮ್ಮೊಮ್ಮೆ ಚಿಂತಿಸುತ್ತಿರುತ್ತೇನೆ ಹಾಗಾಗಿ ಇನ್ಮುಂದೆ ಅದರ ಅನಗತ್ಯ ಚಿಂತನೆಗೆ ಗೋಲಿ. ಎಲ್ರೂ ಅವರವರ ಕೆಲಸದಲ್ಲಿ ಶ್ರದ್ಧೆಯಿಂದಿದ್ದರೆ ಪ್ರತಿಫಲ ಉತ್ತಮ ಖಂಡಿತ. ಮೊದಲು ಹೆಚ್ಚಿಗೆ ಅಪ್ಪಮ್ಮ ಜೊತೆಯಿದ್ದ ನಂಗೆ ಆರು ತಿಂಗಳಿಂದ ಹೊಟ್ಟೆಪಾಡಿಗಾಗಿ ಹೈದರಾಬಾದ್ನಲ್ಲಿರುವ ಅನಿವಾರ್ಯತೆ ಆದ್ರೂ ಪ್ರತಿ ನಿತ್ಯವೂ ಮಾತನಾಡಿಸುತ್ತಿರುತ್ತೇನೆ ಕರೆಮಾಡಿ ಇದು ನಿತ್ಯನಿರಂತರ ನಮಗೆ ಜೀವಕೊಟ್ಟ ತಂದೆ ತಾಯಿಯೇ ದೇವರೆಂದು ನಂಬಿದವ ನಾನು ಮೊದಲ ಪ್ರಾಶಸ್ತ್ಯ ಅವರಿಗೆ ನಂತರ ಬೇರೆಲ್ಲ. ಅವರನ್ನು ಆತಂಕಕ್ಕೀಡು ಮಾಡದಿರುವುದೇ ನಾವು ಸಮಾಜಕ್ಕೆ ಕೊಡುವ ಉತ್ತಮ ಕೊಡುಗೆ. ಸಹಾಯ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ನಿರೀಕ್ಷೆ ಮತ್ತು ಅನಿವಾರ್ಯ... ಹೆಚ್ಚಿಗೇನೆ ಮಾಡಿ ನಾ ಕಷ್ಟಪಟ್ಟಿದ್ದೂ ಇದೆ, ಹಣದ ತೆಗೆದುಕೊಳ್ಳುವುದು ಹಣದ ಕೊರತೆಯಿಂದ ವಾಪಸ್ ಮಾಡಲು ಅದೇ ಕಾರಣ, ದಯವಿಟ್ಟು ಸಾಲ ಕೊಟ್ಟವರಿಗೆ ಮರುಪಾವತಿಸಿ ಇದು ನನ್ನ ಮನವಿ... ಇಷ್ಟು ಸಾಕು, ಮಿಕ್ಕವು ನನ್ನಲ್ಲೇ ಇರಲಿ. :-) -ಹರೀಶ್ ಎನ್. ಹೈದರಾಬಾದ್ ().ಕಾಯುವೆ ಕಾಯುತಿರುವೆ ನಿನ್ನ ಆಗಮನ ನೋಡುತಿರುವೆ ಹರುಷ ತುಂಬಿದ ತುಡಿತದಿಂದ ಹೊಸ ವರುಷವ ಸ್ವಾಗತಿಸುವೆ. ಹೊಸ ವರ್ಷದ ಶುಭಾಶಯಗಳು .... -ಅಶ್ರಫ್ ಚೀನಾಮಾಡತ್ ಕಡಂಗ (ದುಬೈ)ಹೊಸ ವರ್ಷದ ಶುಭ ದಿನಕ್ಕೆ ಒಂದು ಉತ್ತಮ ನಿರ್ಧಾರ ಕೈಗೊಂಡು ಅದನ್ನು ಸಾಧಿಸುವ ಚಲವನ್ನು ಪಡೆಯೋದು -ಬಂಡೆಪ್ಪ ಚಿಕ್ಕಮೇಟಿ ಯಾದಗಿರಿನಾನು ದೌರ್ಜನ್ಯ ಮಾಡುವುದಿಲ್ಲ. ಮತ್ತು ಮಾಡಿಸಿಕೊಳ್ಳುವುದಿಲ್ಲ -ಚಿದಾನಂದ ಮೂರ್ತಿ