ಕಾಕಿನಾಡ ಸರ್ಕಾರಿ ಶಾಲೆಗಳಲ್ಲಿ ಅಮೆರಿಕನ್ ಉಚ್ಚಾರಣೆಯಲ್ಲಿ ಇಂಗ್ಲಿಷ್ ಕಲಿಕೆ! ಕಾಕಿನಾಡ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ರೆಡಿನೆಸ್ ಇನಿಶಿಯೇಟಿವ್ ಫಾರ್ ಸಿಚುಯೇಷನಲ್ ಇಂಗ್ಲಿಷ್(ರೈಸ್) ಕಾರ್ಯಕ್ರಮವನ್ನು ಅಧಿಕೃತವಾಗಿ ಅನುಷ್ಠಾನಗೊಳಿಸುವ ಮಾದರಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಕಾಕಿನಾಡ: ಕಾಕಿನಾಡ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ರೆಡಿನೆಸ್ ಇನಿಶಿಯೇಟಿವ್ ಫಾರ್ ಸಿಚುಯೇಷನಲ್ ಇಂಗ್ಲಿಷ್(ರೈಸ್) ಕಾರ್ಯಕ್ರಮವನ್ನು ಅಧಿಕೃತವಾಗಿ ಅನುಷ್ಠಾನಗೊಳಿಸುವ ಮಾದರಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.ಈ ಉಪಕ್ರಮದ ಭಾಗವಾಗಿ, ಬೆಂಡಪುಡಿ ಜಿಲ್ಲಾ ಪರಿಷತ್ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ಜಿ.ವಿ.ಪ್ರಸಾದ್ ಅವರ ಮಾರ್ಗದರ್ಶನದಲ್ಲಿ 12 ತಜ್ಞರ ತಂಡವು ವಿದ್ಯಾರ್ಥಿಗಳಿಗೆ ಅಮೆರಿಕನ್ ಉಚ್ಚಾರಣೆಯಲ್ಲಿ ಇಂಗ್ಲಿಷ್ ಮಾತನಾಡಲು ಕಲಿಸುತ್ತದೆ. ಪ್ರಸಾದ್ ಅವರಿಂದ ತರಬೇತಿ ಪಡೆದಿದ್ದ ವಿದ್ಯಾರ್ಥಿಗಳ ಗುಂಪು ಅಮೆರಿಕನ್ ಉಚ್ಚಾರಣೆಯಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಮನಸ್ಸು ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.ಮಕ್ಕಳು ಜಗನ್ ಅವರೊಂದಿಗೆ ಸಂವಹನ ನಡೆಸುತ್ತಿರುವ ವೀಡಿಯೊ ವೈರಲ್ ಆದ ನಂತರ, ವಿದೇಶದಲ್ಲಿ ವಾಸಿಸುವ ಹಲವಾರು ಜನ ಈ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ನೀಡಲು ಮುಂದೆ ಬಂದಿದ್ದರು.ಇದನ್ನು ಓದಿ: ಮಕ್ಕಳಿಲ್ಲದ ಕೊರಗು ಬಿಟ್ಟು ಮರಗಳ ಮಹಾತಾಯಿಯಾದರು: ಇದು ತಿಮ್ಮಕ್ಕ 'ವೃಕ್ಷ ಮಾತೆ'ಯಾದ ಕಥೆವಿದ್ಯಾರ್ಥಿಗಳಿಗೆ ಉಚ್ಚಾರಣಾ ಇಂಗ್ಲಿಷ್ ಕಲಿಸುವ ಪ್ರಸಾದ್ ಅವರ ಉಪಕ್ರಮದ ಯಶಸ್ಸಿನ ನಂತರ, ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲೂ ಇದೇ ರೀತಿಯ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಅವರನ್ನು ಆಹ್ವಾನಿಸಿದ್ದರು. ಈ ವರ್ಷ ಜುಲೈನಲ್ಲಿ ತುನಿ ಕ್ಷೇತ್ರದ ವ್ಯಾಪ್ತಿಯ 34 ಶಾಲೆಗಳಲ್ಲಿ ರೈಸ್ ಕಾರ್ಯಕ್ರಮಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಗಿತ್ತು.ಅಮೆರಿಕನ್ ಉಚ್ಚಾರಣೆಯಲ್ಲಿ ಇಂಗ್ಲಿಷ್ ಕಲಿಕೆ: ರೈಸ್ ತಂಡವು ಇತ್ತೀಚೆಗೆ ಕಾಕಿನಾಡ ನಗರ ಮತ್ತು ಗ್ರಾಮಾಂತರ ಮಂಡಲಗಳತ್ತ ತನ್ನ ಗಮನವನ್ನು ಹರಿಸಿದೆ. ನಗರದ ಸ್ಪಂದನಾ ಸಭಾಂಗಣದಲ್ಲಿ ಮಾಡ್ಯೂಲ್‌ಗೆ ಚಾಲನೆ ನೀಡಿದ ನಂತರ ಜಿಲ್ಲಾಧಿಕಾರಿ ಕೃತಿಕಾ ಶುಕ್ಲಾ ಅವರು ವಿದ್ಯಾರ್ಥಿಗಳು ಮತ್ತು ಅವರ ತರಬೇತುದಾರರೊಂದಿಗೆ ಸಂವಾದ ನಡೆಸಿದರು. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಮಕ್ಕಳ ಪ್ರಗತಿಯನ್ನು ಅವರು ಶ್ಲಾಘಿಸಿದರು.ನಂತರ ಜಿಲ್ಲಾಧಿಕಾರಿಗಳು ಈ ಯೋಜನೆ ಹಾಗೂ ಅದರ ಫಲಿತಾಂಶಗಳ ಪರಿಶೀಲನೆ ನಡೆಸಿದರು.