ಕುಸ್ತಿ ಪೈಲ್ವಾನನ ಪ್ರೇಮ ಪ್ರಸಂಗ ಕುಸ್ತಿ ಪೈಲ್ವಾನನ ಪ್ರೇಮ ಪ್ರಸಂಗ, ಕುಸ್ತಿ ಪೈಲ್ವಾನನೊಬ್ಬ ಪ್ರತಿವರ್ಷ ವಸಂತ... ಕುಸ್ತಿ ಪೈಲ್ವಾನನೊಬ್ಬ ಪ್ರತಿವರ್ಷ ವಸಂತ ಋತುವಿನಲ್ಲಿ ತಮಿಳುನಾಡಿನ ಪ್ರಸಿದ್ಧ ತೀರ್ಥಕ್ಷೇತ್ರವೊಂದಕ್ಕೆ ಕಾಲ್ನಡಿಗೆಯಲ್ಲಿ ಯಾತ್ರೆಗೆ ಹೋಗುತ್ತಿದ್ದ. ಯುಗಾದಿಯ ದಿನ ನಡೆಯಲು ಆರಂಭಿಸಿ ಶುಕ್ಲಪಕ್ಷದ ಹುಣ್ಣಿಮೆಯ ದಿನ ತೀರ್ಥಕ್ಷೇತ್ರ ತಲುಪುತ್ತಿದ್ದ. ಅಲ್ಲಿ ಒಂದು ವಾರ ಇದ್ದು ವಾಪಸ್ ಕಾಲ್ನಡಿಗೆಯಲ್ಲೇ ಊರಿಗೆ ಹೊರಡುತ್ತಿದ್ದ. ಒಂದು ವರ್ಷ ಹೀಗೆ ಯಾತ್ರೆಗೆ ಹೊರಟವನು ಮಧ್ಯ ದಾರಿಯಲ್ಲಿ ಹೋಟೆಲ್ಲೊಂದರಲ್ಲಿ ರಾತ್ರಿ ತಂಗಿದ. ಅದೊಂದು ಕೆಟ್ಟ ಕೊಳಕು ಹೋಟೆಲ್. ಕರೆಂಟ್ ಸಂಪರ್ಕ ಕೂಡ ಇರಲಿಲ್ಲ. ಗಿರಾಕಿಗಳಿಗೆಲ್ಲ ಒಂದೊಂದು ಮೇಣದಬತ್ತಿ ಕೊಡುತ್ತಿದ್ದರು. ಅದನ್ನು ಹಿಡಿದು ಪ್ರತಿಯೊಬ್ಬರೂ 'ಆಜಾರೇ ಓ ಮೇರೆ ದಿಲ್‌ಬರ್ ಆಜಾ' ಎನ್ನುವ ದೆವ್ವದಂತೆ ಕೋಣೆಗೆ ಹೋಗಿ ಸೇರಿಕೊಳ್ಳುತ್ತಿದ್ದರು. ಪೈಲ್ವಾನ್ ಕೂಡ ಹೀಗೆ ಕ್ಯಾಂಡಲ್ ಹಿಡಿದು ರೂಮು ಸೇರಿಕೊಂಡ. ತಿಗಣೆ ಕಾಟದಿಂದ ರಾತ್ರಿ ನಿದ್ದೆ ಬರಲಿಲ್ಲ. ಮಧ್ಯರಾತ್ರಿಯ ಹೊತ್ತಿಗೆ ದೂರದಿಂದ ಇಂಪಾದ ಹಾಡು ಕೇಳಿಬರಲಾರಂಭಿಸಿತು. ಅದೊಂದು ಹೆಣ್ಣು ಧ್ವನಿ. ಎಷ್ಟು ಇಂಪಾಗಿತ್ತು ಅಂದರೆ, ತನ್ನ ಜೀವಮಾನದಲ್ಲಿ ಪೈಲ್ವಾನ್ ಅಂತಹ ಸ್ವರಮಾಧುರ್ಯ ಕೇಳಿರಲಿಲ್ಲ. ಹಾಡು ಕೇಳುತ್ತ ಕೇಳುತ್ತ ಅದರ ಕಂಠದೊಡತಿಗೆ ಮನಸೋತ. ಕ್ಯಾಂಡಲ್ ಮುಗಿದಿತ್ತು. ಹಾಡು ಇನ್ನೂ ಕೇಳಿಬರುತ್ತಿತ್ತು. ಧ್ವನಿ ಅಷ್ಟು ಇಂಪಾಗಿರಬೇಕೆಂದರೆ ಅದರ ಯಜಮಾನಿ ಇನ್ನೆಷ್ಟು ಸುಂದರವಾಗಿರಬೇಡ. ಪೈಲ್ವಾನನಿಗೆ ಏನಾದರೂ ಮಾಡಿ ಅವಳನ್ನು ಅನುಭವಿಸಲೇಬೇಕು ಎಂಬ ತಲುಬು ಬಂದುಬಿಟ್ಟಿತು. ಕತ್ತಲಲ್ಲೇ ತಡಕಾಡುತ್ತ ಧ್ವನಿ ಕೇಳಿಬರುತ್ತಿದ್ದ ಕಡೆ ಹೊರಟ. ಕೊನೆಗೂ ಆ ಧ್ವನಿಯ ಮೂಲ ಸಿಕ್ಕಿತು. ಆ ಧ್ವನಿಯೊಡತಿ ಕುಳಿತು ಹಾಡುತ್ತಿದ್ದ ಕೋಣೆಯಲ್ಲೂ ಬೆಳಕಿರಲಿಲ್ಲ. ಕತ್ತಲಲ್ಲೇ ಹಾಡುತ್ತಿದ್ದಳು. ಇವನು ಕಳ್ಳಬೆಕ್ಕಿನಂತೆ ಹೋಗಿ ಅವಳ ಮೇಲೆ ಬಿದ್ದ. ಆಶ್ಚರ್ಯವೆಂದರೆ, ಅವಳು ಸ್ವಲ್ಪವೂ ಪ್ರತಿಭಟಿಸಲಿಲ್ಲ. ಇವನಿಗೆ ಸಹಕರಿಸಿ ತಾನೂ ಸುಖಪಟ್ಟಳು. ಪೈಲ್ವಾನ ತೃಪ್ತಿಯಿಂದ ಅಲ್ಲೇ ನಿದ್ದೆಹೋದ. ಬೆಳಗ್ಗೆ ಎದ್ದು ನೋಡುತ್ತಾನೆ, ಅವಳು ಭಯಂಕರ ಕುರೂಪಿ ಹೆಣ್ಣು. ಮನುಷ್ಯಮಾತ್ರರು ಅವಳ ಜೊತೆ ಮಲಗಲು ಸಾಧ್ಯವಿಲ್ಲ ಎಂದು ಪೈಲ್ವಾನನಿಗೆ ವಾಕರಿಕೆ ಬಂದುಬಿಟ್ಟಿತು. ಧ್ವನಿ ಕೇಳಿ ಹೀಗೆ ಮೋಸಹೋದೆನಲ್ಲ ಎಂದು ನಖಶಿಖಾಂತ ಸಿಟ್ಟೂ ಬಂತು. ಆದರೆ ಅವಳ ಮುಖ ಮಾತ್ರ ಖುಷಿಯಿಂದ ತುಳುಕುತ್ತಿತ್ತು. ಜೀವನದಲ್ಲೇ ಯಾರೂ ನೀಡದ ಸುಖವನ್ನು ಪೈಲ್ವಾನ ಅವಳಿಗೆ ನೀಡಿದ್ದ. ಅದಕ್ಕಾಗಿ ಅವನಿಗೆ ಥ್ಯಾಂಕ್ಸ್ ಹೇಳಿದಳು. ಇವನಿಗೆ ಇನ್ನೂ ಸಿಟ್ಟು ಬಂತು. ಬಾ ಯಾತ್ರೆಗೆ ಹೋಗೋಣ ಎಂದು ಅವಳನ್ನು ಕರೆದುಕೊಂಡು ಮುಂದೆ ಪ್ರಯಾಣ ಬೆಳೆಸಿದ. ನಂತರ ಅರ್ಧ ದಾರಿಯಲ್ಲಿ ಅವಳನ್ನು ಪ್ರಪಾತಕ್ಕೆ ತಳ್ಳಿ ಕೊಂದುಬಿಟ್ಟ. ಪೈಲ್ವಾನನ ಆ ವರ್ಷದ ಯಾತ್ರೆ ದುರಂತದಲ್ಲಿ ಕೊನೆಗೊಂಡಿತು. ಮರುವರ್ಷ ಮತ್ತೆ ಯಾತ್ರೆಗೆ ಹೋಗುವಾಗ ಅನಿವಾರ್ಯವಾಗಿ ಅದೇ ಹೋಟೆಲ್‌ನಲ್ಲಿ ರಾತ್ರಿ ತಂಗುವ ಪ್ರಸಂಗ ಬಂತು. ಹೋಟೆಲ್‌ನ ರಿಸೆಪ್ಷನಿಸ್ಟ್‌ಗೆ ಹೇಳಿ ರಾತ್ರಿಯೆಲ್ಲ ಉರಿಸಲು ನಾಲ್ಕೈದು ಮೇಣದಬತ್ತಿ ತೆಗೆದುಕೊಂಡು ರೂಮಿಗೆ ಹೋದ. ಇವನ ಗ್ರಹಚಾರಕ್ಕೆ ಅದೇ ಹೆಣ್ಣಿನ ಹಾಡು ಆವತ್ತು ರಾತ್ರಿಯೂ ಕೇಳತೊಡಗಿತು. ಪೈಲ್ವಾನನ ಮೈಮೇಲೆ ಹೆದರಿಕೆಯ ಮುಳ್ಳುಗಳು ಎದ್ದವು. ಡೌಟೇ ಇಲ್ಲ, ಅದೇ ಧ್ವನಿ. ಸತ್ತವಳು ಮತ್ತೆ ಹಾಡುತ್ತಿರುವುದು ಹೇಗೆ? ಎದ್ದುಹೋಗಲು ಧೈರ್ಯ ಬರಲಿಲ್ಲ. ಆದರೆ ನಸೀಬು ಕೈಕೊಟ್ಟಾಗ ಎಲ್ಲ ಅಪಾಯಗಳೂ ಅವಾಗಿಯೇ ಮೈಮೇಲೆ ಬೀಳುತ್ತವೆ. ಆ ಹೆಣ್ಣು ತಾನಾಗಿಯೇ ಬಂದು ಪೈಲ್ವಾನನ ಮೇಲೆ ಬಿದ್ದಳು! ಇವನು ತಪ್ಪಿಸಿಕೊಳ್ಳಲು ಹೆಣಗಾಡಿದ. ಅವಳ ತಾಕತ್ತು ಎಷ್ಟು ತೀವ್ರವಾಗಿತ್ತೆಂದರೆ, ಇವನ ಪೈಲ್ವಾನಿಕೆ ಅವಳ ಮುಂದೆ ಯಾವ ಪ್ರಯೋಜನಕ್ಕೂ ಬರಲಿಲ್ಲ. ಅವಳೇ ಮೇಲಾಗಿ ಅವನನ್ನು ಭೋಗಿಸಿದಳು. ಪೈಲ್ವಾನ ಹೈರಾಣಾಗಿದ್ದ. 'ಇಷ್ಟು ಬೇಗ ನನ್ನನ್ನು ಮರೆತುಬಿಟ್ಟೆಯಾ? ಕಳೆದ ವಸಂತ ಋತುವಿನಲ್ಲಿ ನೀನು ನೀಡಿದ್ದ ಸುಖವನ್ನು ಹೇಗೆ ಮರೆಯಲಿ? ಅದ್ಸರಿ, ಆಮೇಲೆಕೆ ನನ್ನನ್ನು ಪ್ರಪಾತಕ್ಕೆ ತಳ್ಳಿ ಹೋದೆ? ನಿಜ ಹೇಳಬೇಕೆಂದರೆ ನಾನು ಕುರುಡಿ. ನನಗೆ ನಿನ್ನ ಮುಖ ಕಾಣಿಸುತ್ತಿಲ್ಲ. ಆದರೂ ನಿನ್ನ ರೂಪ ನನ್ನೆದೆಯಲ್ಲಿ ಅಚ್ಚಾಗಿದೆ. ನಾನದನ್ನು ನೋಡಬಲ್ಲೆ. ಬಾ, ಯಾತ್ರೆಗೆ ಹೋಗೋಣ'. ಈ ಬಾರಿ ಅವಳೇ ಅವನನ್ನು ಯಾತ್ರೆಗೆ ಕರೆದುಕೊಂಡು ಹೊರಟಳು. ಮೂರು ದಿನದ ನಂತರ ಪೇಪರ್‌ನಲ್ಲಿ ಸುದ್ದಿ ಬಂತು. 'ತೀರ್ಥಯಾತ್ರೆಗೆ ಬಂದಿದ್ದ ಪೈಲ್ವಾನ್ ಪ್ರಪಾತಕ್ಕೆ ಬಿದ್ದು ದುರ್ಮರಣ'. (ಮುಂದುವರೆಯುವುದು..) -ಅಮ್ಮಜ್ಜನದುಗ್ಗ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು ://..//---//%27s-/55398ಗೆ ಭೇಟಿನೀಡಿ.