12ನೇ ವಯಸ್ಸಿಗೇ ಮದುವೆಯಾಗಿ ಶಾಲೆ ಬಿಟ್ಟಿದ್ದ ಕೇರಳ ಮಹಿಳೆ ಈಗ ಹೈಸ್ಕೂಲ್ ಶಿಕ್ಷಕಿ 26ನೇ ವಯಸ್ಸಿನಲ್ಲಿ ಅಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಿ, ಮುಂದೆ ಮಾಸ್ಟರ್ಸ್ ಪದವಿಯನ್ನೂ ಪಡೆಯುತ್ತಾರೆ ರಾಮ್ಲಾ. ತಮ್ಮ ಇಂದಿನ ಸಾಧನೆಗೆ ಪತಿ ನೀಡಿದ ಸಹಕಾರವೇ ಕಾರಣ ಎಂದು ಅವರು ತಮ್ಮ ಸಾಧನೆಯ ಶ್ರೇಯವನ್ನು ಪತಿಗೆ ನೀಡುತ್ತಾರೆ. ಕೊಚ್ಚಿ: 6ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ ಕೇರಳದ ಮಹಿಳೆ ರಾಮ್ಲಾ ಅಷ್ಟೂ ವರ್ಷ ತರಗತಿಗೆ ಮೊದಲಿಗರಾಗಿದ್ದರು. ನಂತರ ಓದು ಮುಂದುವರಿಸಲಾಗಲಿಲ್ಲ. ಅದಕ್ಕೆ ಕಾರಣ, ಮದುವೆ. 12ನೇ ವಯಸ್ಸಿಗೇ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಇದನ್ನೂ ಓದಿ: ಪತ್ನಿ ಮೇಲಿನ ಪ್ರೀತಿಯಿಂದ ತಾಜ್ಮಹಲ್ ಮಾದರಿಯ ಮನೆ ಕಟ್ಟಿಸಿಕೊಟ್ಟ ಮಧ್ಯಪ್ರದೇಶ ವ್ಯಕ್ತಿ!ಮದುವೆ ನಂತರ ಶಿಕ್ಷಣ ಮುಂದುವರಿದಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಅವರ 4 ಮಕ್ಕಳ ತಾಯಿಯಾದ ನಂತರ ಮನೆಯ ಉಸ್ತುವಾರಿ ಮತ್ತು ಮಕ್ಕಳ ಲಾಲನೆಪಾಲನೆಯಲ್ಲಿಯೇ ಅವರ ಜೀವನ ಕಳೆದುಹೋಯಿತು. ಅಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಿದ್ದು 26ನೇ ವಯಸ್ಸಿನಲ್ಲಿ ಎನ್ನುವುದು ಅಚ್ಚರಿಯ ಸಂಗತಿ. ಮನೆಗೆ ಬಂದಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಯೋರ್ವರು 18 ದಾಟಿದ ಯಾರು ಬೇಕಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬಹುದು ಎನ್ನುವ ಮಾಹಿತಿ ತಿಳಿಸಿದರು. ರಾಮ್ಲಾ ಅವರ ಓದಿನ ಆಸೆ ಚಿಗುರಲು ಅ ಸಿಬ್ಬಂದಿ ಕಾರಣರಾದರು.ಇದನ್ನೂ ಓದಿ: ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರಮಕ್ಕಳ ಲಾಲನೆ ಪಾಲನೆ ನಡುವೆಯೇ ಓದಿಗೆ ಸಮಯ ಮೀಸಲಿಟ್ಟರು. ಅದೀಗ ಫಲ ನೀಡಿದೆ. ಈಗ ರಾಮ್ಲಾ ಅವರಿಗೆ 45 ವರ್ಷ ವಯಸ್ಸು. ಅರೇಬಿಕ್ ಭಾಷೆಯಲ್ಲಿ ಅವರು ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ಇದನ್ನೂ ಓದಿ: ಯೋಧರಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 61'ರ ವೃದ್ಧ ಮ್ಯಾರಥಾನರ್ ಓಟರಾಜ್ಯ ಸರ್ಕಾರಿ ಶಿಕ್ಷಕರ ನೇಮಕಾತಿಗೆ ನಡೆಸಲಾಗುವ ಅರ್ಹತಾ ಪರೀಕ್ಷೆಯನ್ನು ರಾಮ್ಲಾ ಪಾಸು ಮಾಡಿದ್ದಾರೆ. ಇಂದು ರಾಮ್ಲಾ ಅವರು ತಮ್ಮ ಓದುವ ಕನಸನ್ನು ಮಾತ್ರವೇ ನನಸು ಮಾಡಿಕೊಂಡಿಲ್ಲ, ನಾದಪುರಂನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆತಮ್ಮ ಇಂದಿನ ಸಾಧನೆಗೆ ಪತಿ ನೀಡಿದ ಸಹಕಾರವೇ ಕಾರಣ ಎಂದು ಅವರು ತಮ್ಮ ಸಾಧನೆಯ ಶ್ರೇಯವನ್ನು ಪತಿಗೆ ನೀಡುತ್ತಾರೆ. ಮಾಸ್ಟರ್ಸ್ ಪದವಿ ಪಡೆಯುವವರೆಗಿನ ಸಂದರ್ಭದಲ್ಲಿ ಮಕ್ಕಳನ್ನು ಬಿಟ್ಟಿರಬೇಕಾಗಿಬರುತ್ತಿತ್ತು. ಮನೆಗೆಲಸಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿರಲಿಲ್ಲ.ಅಲ್ಲದೆ ಹಾಸ್ಟೆಲ್ಲಿನಲ್ಲಿ ಇರಬೇಕಾದ ಪರಿಸ್ಥಿತಿಯೂ ಬಂದಿತ್ತು. ಆ ಸಂದರ್ಭದಲ್ಲಿ ಪತಿ ಧೈರ್ಯ ತುಂಬಿ ತಮ್ಮನ್ನು ಹಾಸ್ಟೆಲ್ಲಿಗೆ ಕಳಿಸಿಕೊಟ್ಟಿದ್ದರು ಎಂದು ಪತಿಯನ್ನು ತುಂಬು ಹೃದಯದಿಂದ ನೆನೆಯುತ್ತಾರೆ ರಾಮ್ಲಾ.ಇದನ್ನೂ ಓದಿ: 'ಮಲ್ನಾಡ್ ಕನ್ನಡ ಕಾರ್ಟೂನ್' ಮೂಲಕ ಯೂಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಪೂಜಾ ಹರೀಶ್ ಜನಪ್ರಿಯಜಗತ್ತಿನ ಅತ್ಯಂತ ವಿಷಕಾರಿ ಮೀನು: ಕುಟುಕಿದರೆ ಪ್ರಜ್ಞೆ ತಪ್ಪುವುದು ಪಕ್ಕಾ, ನಿರಂತರ ಬಣ್ಣ ಬದಲಾವಣೆ!ವಿಷ ನಿರೋಧಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನಿತ ಪ್ರಯೋಗಾಲಯದಿಂದ ಉರಗ ಉದ್ಯಾನ ಸ್ಥಾಪನೆಚಿಕ್ಕ ವಯಸ್ಸಿಗೆ ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಯುವತಿ: ಈಕೆ ಓದಿದ್ದು ಕರ್ನಾಟಕದಲ್ಲಿ!ಪಶ್ಚಿಮ ಬಂಗಾಳ: ಕಾಳಿ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಡ ಮುಸ್ಲಿಂ ರೈತಬಳ್ಳಾರಿಯ 1 ರೂಪಾಯಿ ಭಿಕ್ಷುಕನ ಅಂತ್ಯಕ್ರಿಯೆಗೆ 4 ಸಾವಿರಕ್ಕೂ ಹೆಚ್ಚು ಜನ!ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ಕುಟುಂಬದ ಮೂರನೇ ತಲೆಮಾರಿನ ಮಹತಿ ಸುಬ್ರಮಣಿಯಂ ಮ್ಯೂಸಿಕ್ ವಿಡಿಯೊ ಬಿಡುಗಡೆಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಯಿಂದ ಹಳೆಯ ಪಠ್ಯಪುಸ್ತಕಗಳ ಸಂಗ್ರಹ ಲೋಕಾರ್ಪಣೆ