ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಜನಸೇವೆಯಿಂದ ಹಿಂದೆ ಸರಿಯದ ತಮಿಳುನಾಡಿನ ವೈದ್ಯ! ಡಾ ಕೆ ವರದರಾಜನ್ ಗೆ ಚುನಾವಣೆಯಲ್ಲಿ ಸೋಲಾಗಿರಬಹುದು ಆದರೆ ಜನರಿಗೆ ಸಹಾಯ ಮಾಡುವುದಕ್ಕೆ ಇದು ಅಡ್ಡಿಯಾಗಿಲ್ಲ. ಮೂಳೆ ಶಸ್ತ್ರಚಿಕಿತ್ಸಕ, ವರದರಾಜನ್ ಅವರು ಪೊಲ್ಲಾಚಿಯ ಡಿಎಂಕೆ ಪಟ್ಟಣ ಕಾರ್ಯದರ್ಶಿಯಾಗಿದ್ದು, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಯ ಪೊಲ್ಲಾಚಿ ವಿ ಜಯರಾಮನ್ ವಿರುದ್ಧ ಸೋಲುಂಡರು. ಕೊಯಮತ್ತೂರ್: ಡಾ ಕೆ ವರದರಾಜನ್ ಗೆ ಚುನಾವಣೆಯಲ್ಲಿ ಸೋಲಾಗಿರಬಹುದು ಆದರೆ ಜನರಿಗೆ ಸಹಾಯ ಮಾಡುವುದಕ್ಕೆ ಇದು ಅಡ್ಡಿಯಾಗಿಲ್ಲ. ಮೂಳೆ ಶಸ್ತ್ರಚಿಕಿತ್ಸಕ, ವರದರಾಜನ್ ಅವರು ಪೊಲ್ಲಾಚಿಯ ಡಿಎಂಕೆ ಪಟ್ಟಣ ಕಾರ್ಯದರ್ಶಿಯಾಗಿದ್ದು, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಯ ಪೊಲ್ಲಾಚಿ ವಿ ಜಯರಾಮನ್ ವಿರುದ್ಧ ಸೋಲುಂಡರು.ಪೊಲ್ಲಾಚಿಯ ಸರ್ಕಾರಿ ಮುಖ್ಯ ಆಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿದಾಗ, ಪಟ್ಟಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ 100 ಬೆಡ್ ಗಳನ್ನು ಹೊಂದಿರುವ ನೂತನ ಕಟ್ಟಡವಿನ್ನೂ ಬಳಕೆಗೆ ಬಂದಿಲ್ಲ ಎಂದು ವರದರಾಜನ್ ಗಮನಿಸಿದರು. ಹೆಚ್ಚುವರಿ ವೈದ್ಯರನ್ನು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಆಸ್ಪತ್ರೆಯಲ್ಲಿ ಹಣವಿಲ್ಲ ಎಂದು ಅರಿತುಕೊಂಡರು."ಪೊಲ್ಲಾಚಿ, ವಾಲ್ಪಾರೈ ಮತ್ತು ಇತರ ಪ್ರದೇಶಗಳಿಂದ ನೂರಾರು ಜನರು ಈ ಆಸ್ಪತ್ರೆಗೆ ಬರುತ್ತಾರೆ ಆದರೆ ಹಲವಾರು ಹುದ್ದೆಗಳು ಖಾಲಿ ಇವೆ. ನಾನು ಈ ವಿಷಯವನ್ನು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರ ಗಮನಕ್ಕೆ ತರುತ್ತೇನೆ. ನಾನು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಹೊಸ ಕಟ್ಟಡವನ್ನು ಬಳಕೆಗೆ ತರಲು ಅವರು ಆರು ವೈದ್ಯರು, 24 ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಬೇಕಾಗುವುದು ಎಂದರು. ಅವರಿಗೆ ಒಂದು ತಿಂಗಳ ಸಂಬಳ ಪಾವತಿಸಲು 12.90 ಲಕ್ಷ ರೂ. ಅಗತ್ಯವಿದೆ ”ಎಂದು ವರದರಾಜನ್ ಹೇಳಿದರು.ಅಗತ್ಯ ಸಿಬ್ಬಂದಿಯನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡುವಂತೆ ಆಸ್ಪತ್ರೆ ಆಡಳಿತಕ್ಕೆ ಮನವರಿಕೆ ಮಾಡಿಕೊಟ್ಟ ಅವರು 10 ಲಕ್ಷ ರೂ ನೀಡಿದ್ದಲ್ಲದೆ ಉಳಿದ 2.90 ಲಕ್ಷ ರೂ.ಗಳನ್ನು ಸ್ನೇಹಿತರು ಮತ್ತು ಪಕ್ಷಗಳ ಕಾರ್ಯಕರ್ತರಿಂದ ಸಂಗ್ರಹಿಸಿ ನೀಡಿದ್ದಾರೆ. ಆಮ್ಲಜನಕ ಸೌಲಭ್ಯ ಹೊಂದಿರುವ 100 ಹೆಚ್ಚುವರಿ ಬೆಡ್ ಗಳು ಈಗ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ಲಭ್ಯವಾಗಿದೆ.ವೈದ್ಯರಿಗೆ 50,000 ರೂ, ನರ್ಸ್‌ಗೆ 25 ಸಾವಿರ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ತಲಾ 10,000 ರೂ ವೇತನ ನಿಗದಿಯಾಗಿದೆ. . ಹೆಚ್ಚುವರಿ ಶಕ್ತಿ ಅವರಿಗೆ ಉತ್ತಮ ಕೆಲಸ ಮಾಡಲು ಇದು ನೆರವಾಗಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಭಾರತೀಯ ವೈದ್ಯಕೀಯ ಸಂಘ ಮತ್ತು ಜನಾನುರಾಗಿಗಳ ಸಹಾಯದಿಂದ ಮುಂದಿನ ಕೆಲವು ತಿಂಗಳುಗಳವರೆಗೆ ಸಂಬಳ ವ್ಯವಸ್ಥೆ ಮಾಡುವುದಾಗಿ ವರದರಾಜನ್ ಭರವಸೆ ನೀಡಿದ್ದಾರೆ.