ಹಾವಿನೊಂದಿಗೆ ನಾಲ್ಕು ಬೆಕ್ಕುಗಳ ಕಾದಾಟ: ಶಾಕಿಂಗ್ ವಿಡಿಯೋ! ವಿಷಪೂರಿತ ನಾಗರ ಹಾವಿನ ಜೊತೆ ನಾಲ್ಕು ಬೆಕ್ಕುಗಳು ಕಾದಾಟ ನಡೆಸುತ್ತಿರುವ ಭಯಾನಕ ವಿಡಿಯೋವನ್ನು ನಟ ನೀಲ್ ನಿತಿನ್ ಮುಖೇಶ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ: ವಿಷಪೂರಿತ ನಾಗರ ಹಾವಿನ ಜೊತೆ ನಾಲ್ಕು ಬೆಕ್ಕುಗಳು ಕಾದಾಟ ನಡೆಸುತ್ತಿರುವ ಭಯಾನಕ ವಿಡಿಯೋವನ್ನು ನಟ ನೀಲ್ ನಿತಿನ್ ಮುಖೇಶ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ವಿಡಿಯೋದಲ್ಲಿರುವಂತೆ ಹಾವಿನ ಸುತ್ತ ಇರುವ ನಾಲ್ಕು ಬೆಕ್ಕುಗಳು ಕುತೂಹಲದಿಂದ ನೋಡುತ್ತಿವೆ. ಹಾವು ಎಲ್ಲೂ ಹೋಗದಂತೆ ಅಡ್ಡ ಹಾಕಿವೆ.ಈ ಪೈಕಿ ಒಂದು ಬೆಕ್ಕು ಹಾವನ್ನು ಕೆಣಕುತ್ತದೆ. ಹೆಡೆ ಎತ್ತಿದ ಹಾವು ಹೋಗುತ್ತಿದ್ದರೆ ಅದರ ಹಿಂದೆಯೇ ಮೂರು ಬೆಕ್ಕುಗಳು ಹೋಗುತ್ತಿವೆ. ನಂತರ ಆ ಹಾವು ಅಲ್ಲಿಯೇ ಇದ್ದ ಪಾರ್ಕ್ ಕಡೆ ನುಸುಳುತ್ತದೆ. . @.. # , . (@) 14, 2019 9:41am PDTನೀಲ್ ನಿತಿನ್ ಮುಖೇಶ್ ಮುಂದಿನ ಸಿನಿಮಾ' ಬೈ ಪಾಸ್ ರೋಡ್ ' ಚಿತ್ರೀಕರಣಕ್ಕಾಗಿ ಆಗಮಿಸಿದ ವೇಳೆ ಈ ಭಯಾನಕ ವಿಡಿಯೋವನ್ನು ಮಾಡಿದ್ದಾರೆ. ಸುಮಾರು 77 ಸಾವಿರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಹಾವನ್ನು ರಕ್ಷಿಸಿದ್ದಾರೆ ಎಂದು ನೀಲ್ ನಿತಿನ್ ಮುಖೇಶ್ ಪ್ರತಿಕ್ರಿಯಿಸಿದ್ದಾರೆ.