ಸೈಕ್ಲೋನ್ ನಾಮಕರಣಕ್ಕೆ ಸೂಕ್ಷ್ಮತೆ ಇರಲಿ ಕಮಲವೋ ಅಥವಾ ಲಿಲ್ಲಿಯೋ ನಾಶ ಮಾಡಬಲ್ಲುದೆ? ಅಸಾಧ್ಯವೆಂದೆನಿಸುತ್ತದೆ. ಆದರೆ ಅರೇಬಿಯನ್ ಸಮುದ್ರದಿಂದ ಭಾರತಕ್ಕೆ ೧೦೦ ಕಿಮೀ... ಕಮಲವೋ ಅಥವಾ ಲಿಲ್ಲಿಯೋ ನಾಶ ಮಾಡಬಲ್ಲುದೆ? ಅಸಾಧ್ಯವೆಂದೆನಿಸುತ್ತದೆ. ಆದರೆ ಅರೇಬಿಯನ್ ಸಮುದ್ರದಿಂದ ಭಾರತಕ್ಕೆ ೧೦೦ ಕಿಮೀ ವೇಗದಲ್ಲಿ ಅಪ್ಪಳಿಸುತ್ತಿರುವ ಚಂಡಮಾರುತದ ಹೆಸರು ನಿಲೋಫರ್. ಪರ್ಷಿಯನ್ ಭಾಷೆಯಲ್ಲಿ ನಿಲೋಫರ್ ಎಂದರೆ ಕಮಲ ಅಥವಾ ಲಿಲ್ಲಿ. ಉಷ್ಣವಲಯದ ಸೈಕ್ಲೋನ್ ಗಳ ಹೆಸರುಗಳನ್ನು, ಉಷ್ಣವಲಯದ ಸೈಕ್ಲೋನ್ ಪ್ರಾದೇಶಿಕ ಸಂಸ್ಥೆಗೆ ಸದಸ್ಯರಾದ ರಾಷ್ಟ್ರಗಳು ಸರತಿಯಂತೆ ಹೆಸರಿಸುತ್ತವೆ. ಸೈಕ್ಲೋನ್ ನಿಲೋಫರ್ ಅನ್ನು ಹೆಸರಿಸಿದ್ದು ಪಾಕಿಸ್ತಾನ. ಒಮನ್, ಭಾರತಕ್ಕೆ ಕಳೆದ ತಿಂಗಳು ಅಪ್ಪಳಿಸಿದ ಚಂಡಮಾರುತ ಹುಡ್ ಹುಡ್ ಅನ್ನು ಹೆಸರಿಸಿತ್ತು. ಹಾನಿಕಾರಕವಲ್ಲದ ಪಾಪದ ಪಕ್ಷಿಗಳು ಮತ್ತು ಹೂಗಳ ಹೆಸರುಗಳನ್ನು ಚಂಡಮಾರುತಗಳಿಗೆ ನಾಮಕರಣ ಮಾಡುವುದು ಸರಿಯಲ್ಲವೆಂದೆನಿಸುತ್ತದೆ. ೧೯೪೫ ರಿಂದ ವಿವಿಧ ಕಾರಣಗಳಿಗೆ ಚಂಡಮಾರುತಗಳಿಗೆ ಹೆಸರನ್ನಿಡಲಾಗುತ್ತಿದೆ. ಅವುಗಳಲ್ಲಿ ಅಪಾಯದ ಮುನ್ಸೂಚನೆಯ ಎಚ್ಚರಿಕೆ ಸುಲಭವಾಗಿ ಜನರಿಗೆ ಸಂವಹನ ಆಗಲಿ ಎಂಬುದು ಒಂದು. ಆದರೆ ಅಂತಹ ಹೆಸರುಗಳು ಸಾಂಸ್ಕೃತಿಕ ಸೂಕ್ಷತೆಯನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಭಾರತೀಯ ಮಹಾಸಾಗರದ ಚಂಡಮಾರುತಗಳಿಗೆ ತಟಸ್ಥ ಸಂಸ್ಕೃತ ಹೆಸರುಗಳಾದ ಅಗ್ನಿ, ಆಕಾಶ, ಬಿಜಲಿ, ಜಲ, ಲೆಹರ್, ಮೇಘ, ಸಾಗರ, ವಾಯು ಇಂತಹ ಹೆಸರುಗಳನ್ನಿಟ್ಟು ಭಾರತ ತಪ್ಪೆಸಗಿದೆ. ಇದರ ಬದಲು ಹೆಚ್ಚು ಆಪ್ತವಾದ ಹೆಸರುಗಳೆಂದರೆ ಗಬ್ಬರ್, ಮೊಗ್ಯಾಂಬೊ ಅಥವಾ ಡಾನ್. ಇವುಗಳು ಪಾಕಿಸ್ತಾನ ಇಟ್ಟ ಕೆಲವು ಅನುಪದ್ರವಿ ಜಂತುಗಳ ಹೆಸುರುಗಳಾದ ಬುಲ್ ಬುಲ್, ತಿತ್ಲಿ ಇವುಗಳಿಗಿಂತ ಉತ್ತಮವಾದ ಹೆಸರುಗಳು. ೧೯೭೮ ರವರೆಗೆ ಪೂರ್ವದೇಶಗಳಲ್ಲಿ ಹೆಂಗಸರ ಹೆಸರನ್ನು ಮಾತ್ರ ಚಂಡಮಾರುತಗಳಿಗೆ ಹೆಸರಿಸಲಾಗುತ್ತಿತ್ತು. ೨೦೦೫ ರಲ್ಲಿ ನ್ಯೂ ಆರ್ಲಿಯಾನ್ಸ್ ಅನ್ನು ನಾಶಮಾಡಿದ ಒಂದು ಚಂಡಮಾರುತದ ಹೆಸರು ಕತ್ರಿನಾ. ಇದು ಇಲ್ಲಿಯವರೆಗೂ ದಾಖಲಾಗಿರುವ ೭ನೆ ಡೆಡ್ಲಿಯೆಸ್ಟ್ ಸೈಕ್ಲೋನ್ ಎನ್ನಲಾಗಿತ್ತು. ಅದೇ ವರ್ಷ ಹೆಂಗಸಿನ ಹೆಸರಿತ್ತ ವಿಲ್ಮಾ ಮತ್ತು ರೀತಾ ಚಂಡಮಾರುತಗಳೂ ಅಪ್ಪಳಿಸಿದ್ದವು. ೧೯೭೯ ರಿಂದೀಚೆಗೆ ಗಂಡಸರ ಹೆಸರನ್ನು ಕೊಡ ಉಪಯೋಗಿಸಲಾಯಿತು , ಉದಾಹರಣೆಗೆ ೧೯೯೨ ರ ಆಂಡ್ರ್ಯೂ ಹರಿಕೇನ್. ಆದರೆ ಅವುಗಳನ್ನು ನಂತರ ಹೆಚ್ಚು ಉಪಯೋಗಿಸಲಿಲ್ಲ. ಬಹುಶಃ ಸ್ತ್ರೀದ್ವೇಶಿಗಳನ್ನು ಅಷ್ಟು ಸುಲಬವಾಗಿ ತಡೆಯಲು ಸಾಧ್ಯವಿಲ್ಲ.