ಗೋಕಾಕ ಕುಡಿ ಕಹಳೆ ವಿಕೃ ಗೋಕಾಕ್ ಹಿರಿಯ ಮಗಳು ಡಾ.ಯಶೋಧ, ಅಳಿಯ ನಾರಾಯಣ ಭಟ್ ಅವರು ಈ ಅಪರೂಪಗಳಲ್ಲಿ ಒಬ್ಬರು. ಅವರ ಕನ್ನಡ ಸೇವೆಯನ್ನು ನೀವೆ ಹೃದಯ ತುಂಬಿಕೊಳ್ಳಿ.... ಸಾಹಿತಿಗಳ ಮಕ್ಕಳೂ ಸಾಹಿತ್ಯ ಪ್ರೇಮ ಮೆರೆಯುವುದು ಅಪರೂಪ. ವಿಕೃ ಗೋಕಾಕ್ ಹಿರಿಯ ಮಗಳು ಡಾ.ಯಶೋಧ, ಅಳಿಯ ನಾರಾಯಣ ಭಟ್ ಅವರು ಈ ಅಪರೂಪಗಳಲ್ಲಿ ಒಬ್ಬರು. ಅವರ ಕನ್ನಡ ಸೇವೆಯನ್ನು ನೀವೆ ಹೃದಯ ತುಂಬಿಕೊಳ್ಳಿ.... -ಹೊನ್ನಪ್ಪ ಲಕ್ಕಮ್ಮನವರ ನನ್ನ ಭಾಷೆಗೆ ಇಂಗ್ಲಿಷ್ ಭಾಷೆಯೊಂದೇ ಲಗ್ಗಿ ಇಡುತ್ತಿಲ್ಲ. ಜತಗೆ ಆ ಇಂಗ್ಲಿಷ್‌ನ ಸಂಸ್ಕೃತಿ ನನ್ನ ಮಾತೃ ಭಾಷೆಯನ್ನು ನುಂಗುತ್ತಿದೆ ಎಂದು ಗದ್ಗದಿತವಾಗಿ ಆ ಹಿರಿಯ ದಂಪತಿ ಕಣ್ಣೋರಿಸಿಕೊಂಡರು..! ಹೀಗೆ ಗದ್ಗದಿತರಾದವರು ಜ್ಞಾನಪೀಠ ಪುರಸ್ಕೃತ ಡಾ.ವಿ.ಕೃ.ಗೋಕಾಕ್ ಅವರ ಹಿರಿಯ ಮಗಳು ಡಾ.ಯಶೋದಾ ಹಾಗೂ ಅಳಿಯ ನಾರಾಯಣ ಭಟ್ ಅವರು. ಈ ದಂಪತಿಯ ತುಡಿತ ಕನ್ನಡ ಭಾಷೆ ಸಾಹಿತ್ಯವಾಗಿರುವುದರಿಂದ ತಮ್ಮ ನಿವೃತ್ತಿ ನಂತರ ಸಾಹಿತ್ಯ ಪ್ರೋತ್ಯಾಹಿಸಿ, ಭಾಷೆ ಉಳಿಸಲೆಂದೇ ಧಾರವಾಡಕ್ಕೆ 1990ರಲ್ಲಿ ಆಗಮಿಸಿದರು. ಆಗ ಕನ್ನಡ ಭಾಷೆ ಸ್ಥಿತಿಗತಿ ಕಂಡ ಈ ದಂಪತಿ ಅವನಿ 'ರಸಿಕರ ರಂಗ' ಸಾಹಿತ್ಯ ವೇದಿಕೆ ಹುಟ್ಟುಹಾಕಿದರು. ಅವರ ಮನೆಯೇ ಈ ವೇದಿಕೆಯ ಸಭಾಂಗಣ. ಸದ್ಯ ಇಲ್ಲಿ ನಿತ್ಯ ಸಾಹಿತ್ಯ ಸಂಗೀತದ ಕಹಳೆ ಮೊಳಗುತ್ತಿದೆ. ವೃತ್ತಿ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದಾಗ ಮೊದಲು ಕೇಳುವುದು, ಇಲ್ಲಿ ಕನ್ನಡ ಸಂಘ ಹುಟ್ಟು ಹಾಕಿ ಕನ್ನಡ ಒಟ್ಟುಗೂಡಿಸುವ ಕಾರ್ಯವನ್ನು ಮಾಡುವ ಮೂಲಕ ಹೊರನಾಡಿನಲ್ಲಿ ಕನ್ನಡದ ಕಹಳೆ ಊದಿದ್ದಾರೆ. ಹೀಗೆ ದೇಶದ ನಾಗಪುರ, ಇಂದೋರ್ ಸೂರತ್, ಮದ್ರಾಸ್. ದೆಹಲಿಗಳಲ್ಲಿ ಕನ್ನಡ ಸಂಘ ಹುಟ್ಟುಹಾಕಿದ್ದಾರೆ. 50ಕ್ಕೂ ಹೆಚ್ಚು ಪುಸ್ತಕ ಬಿಡುಗಡೆ ಕನ್ನಡ ಭಾಷೆ ಬಗ್ಗೆ ಕಾಳಜಿ, ಪ್ರೀತಿ, ಸಾಹಿತ್ಯವನ್ನು ಇಂದಿನ ಯುವ ಪೀಳಿಗೆಯಲ್ಲಿ ಬಿತ್ತಲು ಇಲ್ಲಿಯ ಗ್ರಂಥಾಲಯಗಳನ್ನು ತೆರೆದಿದ್ದಾರೆ. ಯುವ ಸಾಹಿತಿಗಳ ಪ್ರೋತ್ಸಾಹಕ್ಕಾಗಿ ಅವನಿ ರಸಿಕರ ರಂಗ ಪ್ರಕಾಶನ ಹುಟ್ಟುಹಾಕಿದ್ದಾರೆ. ನಾವು ಸಾಹಿತಿಗಳನ್ನು ಗುರುತಿಸುವುದಿಲ್ಲ, ಸಾಹಿತ್ಯವನ್ನು ಗುರುತಿಸುತ್ತೇವೆ ಎನ್ನುತ್ತಾರೆ. ಕುಂದಗೋಳ ತಾಲೂಕಿನ ಶಿಶುವಿನಹಳ್ಳಿಯಲ್ಲಿ ವಿದ್ಯುತ್ ಮೀಟರ್ ಓದುವ ಯುವಕನ ಸಾಹಿತ್ಯ ಗುರುತಿಸಿ 4 ಕಾದಂಬರಿಗಳನ್ನು ಬರೆಸಿದ್ದಾರೆ. ಹಸ್ತಪ್ರತಿ ರೂಪದಲ್ಲಿದ್ದ ಎಷ್ಟೋ ಸಾಹಿತಿಗಳ ಕೃತಿಗಳಿಗೆ ಪುಸ್ತಕದ ರೂಪ ನೀಡಿದ್ದಾರೆ. 55 ವರ್ಷಗಳ ಹಿಂದೆ ದೇವಾಂಗನಾ ಶಾಸ್ತ್ರಿ ಎಂಬ ಮಹಿಳೆಯ ಸಣ್ಣ ಕಥೆಗಳ ಹಸ್ತ ಪ್ರತಿಗಳನ್ನೆಲ್ಲ ಒಗ್ಗೂಡಿಸಿ, ವೇಣಿಸಂಹಾವೆಂಬ ಕಥಾ ಸಂಕಲನವನ್ನು ಸಿದ್ದಪಡಿಸಿದ್ದಾರೆ. 16ನೇ ಶತಮಾನದಲ್ಲಿನ ಮೂರನೇ ಮಂಗರಸ ದೊರೆಯ ಹಳಗನ್ನಡದಲ್ಲಿ ರಚಿಸಿದ್ದ ಸೂಪಶಾಸ್ತ್ರ ಎಂಬ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಕ್ಕೆ ಮರುಜೀವ ನೀಡಿ, ಒಂದು ವಿವಿ ಮಾಡದ ಕಾರ್ಯ ಮಾಡಿದ್ದಾರೆ. ನೇಪಥ್ಯಕ್ಕೆ ಸರಿದ ಸಾಹಿತಿಗಳು, ಯುವ ಸಾಹಿತಿಗಳಿಂದ 50ಕ್ಕೂ ಹೆಚ್ಚು ಪುಸ್ತಕಗಳನ್ನು ತಮ್ಮ ಪ್ರಕಾಶನದಿಂದ ಮುದ್ರಿಸಿದ್ದಾರೆ. ಭಾಷೆ, ಸಾಹಿತ್ಯ ಸಂಬಂಧ ವಸ್ತು ಸಂಗ್ರಹಾಲಯ ತೆರೆದಿದ್ದಾರೆ. 'ಧಾರವಾಡ ಗ್ರಾಹಕ ವೇದಿಕೆ' ಹುಟ್ಟುಹಾಕಿ ಗ್ರಾಹಕರಿಗೆ ನ್ಯಾಯ ಕೊಡಿಸುತ್ತಿದ್ದಾರೆ. ಸಮಾಜ ಸಂಕಷ್ಟಕ್ಕೀಡಾದಾಗ ಬೀದಿಗಳಿದು ಹಣ ಸಂಗ್ರಹಿಸಿ, ನೊಂದವರ ಕಣ್ಣೀರೊರೆಸುತ್ತಿದ್ದಾರೆ. ಹಲವು ಸಾಧಕರನ್ನು ಹುರಿದುಂಬಿಸುವ ಸಲುವಾಗಿ ಪ್ರಶಸ್ತಿ, ಶಿಷ್ಯವೇತನ ನೀಡುತ್ತಿದ್ದಾರೆ. ತಮ್ಮ ಪ್ರತಿ ಉಸಿರಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಉಳಿಯುವಿಕೆಗೆ ಹೀಗೆ ಪಾದರಸದಂತೆ ಹಗಲಿರುಳು ದುಡಿಯುತ್ತಿರುವ ಇವರ ವಯಸ್ಸು ಎಷ್ಟು ಗೊತ್ತೆ? ಡಾ.ಯಶೋಧ ಅವರದು 83, ನಾರಾಯಣ ಭಟ್‌ರದು 85. ಈ ದಂಪತಿಯ ಸಮರಸ ಜೀವನ ಲೋಕಕ್ಕೆ ಮಾದರಿ. ನಮ್ಮ ಯುವ ಪೀಳಿಗೆ ಇದನ್ನು ನೋಡಿ ನಾಚಬೇಕಲ್ಲವೇ..?