ಫೆಮಿನಿಸಂ ಬೆಂಬಲಿಸಿ ಎಂದ ಜೈಪುರ ಯುವತಿಯರು ದಿನೇ ದಿನೇ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ... ದಿನೇ ದಿನೇ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಮಹಿಳೆಯರ ಮೇಲೆ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ, ಪುರುಷ ಕೀಳ್ಮೆಚ್ಚುಗೆ-ದುರಭಿಮಾನ ಇವುಗಳನ್ನು ವಿರೋಧಿಸಲು ಜೈಪುರ ಯುವತಿಯರು ವಿನೂತನ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಫೆಮಿನಿಸಂ ಬೆಂಬಲಿಸಿ ಎಂಬ ಕೂಗನ್ನು ಪ್ರಾರಂಭಿಸಿರುವ ಈ ಮಾನಿನಿಯರು, ಫೆಮಿನಿಸಂ ಕುರಿತ ಹೇಳಿಕೆಯುಳ್ಳ ಹಲಗೆಗಳನ್ನಿಡಿದು ಫೋಟೋಗಳಿಗೆ ಫೋಸ್ ನೀಡಿದ್ದಾರೆ. "ನಾನು ಹುಡುಗಿ. ಅದಕ್ಕೆ ನನಗೆ ಅಡುಗೆ ಮಾಡುವುದು ಗೊತ್ತಿರಬೇಕೆ?" "ನೀವು ಗಂಡಸು ಎಂಬ ಮಾತ್ರಕ್ಕೆ ನೀವು ಶ್ರೇಷ್ಠರಲ್ಲ. ಮೇಲ್ ಚವನಿಸಂ ಸಾಕು" "ಸೆಕ್ಸ್ ಎಂಬುದು ಸ್ವಾಭಾವಿಕ. ಅದನ್ನು ಒಪ್ಪಿಕ್ಕೊಳ್ಳಿ" "ಒಬ್ಬ ಗಂಡಸು ನಿನ್ನ ನೋಡೀ ಸಿಳ್ಳೆ ಹೊಡೆದರೆ ಪ್ರಿತಿಕ್ರಿಯಿಸಬೇಡ. ನೀನು ಮಹಿಳೆ, ನಾಯಿಯಲ್ಲ" "ಹುಡುಗಿ ಪಾರ್ಟಿಗೆ ಹೋಗಬಹುದು, ಸಣ್ಣ ಉಡುಗೆಗಳನ್ನು ತೊಡಬಹುದು ಮತ್ತು ಮನೆಗೆ ತಡವಾಗಿ ಹೋಗಬಹುದು. ಇಷ್ಟಕ್ಕೆ ಅವಳ ಶೀಲ ಹರಣ ಮಾಡಬೇಡಿ" "ನೀನು ವರ್ಜಿನ್ ನಾ? ಎಂದು ಯಾರಾದರೂ ಗಂಡಸಿಗೆ ಕೇಳಿದ್ದೀರಾ? ಹಾಗಿದ್ದ ಮೇಲೆ ಹುಡುಗಿಯ ನೈತಿಕತೆಯನ್ನು ಪ್ರಶ್ನಿಸಬೇಡಿ" ಎಂಬಿತ್ಯಾದಿ ಮೆಸೇಜ್ ಗಳುಳ್ಳ ಈ ಚಿತ್ರಗಳು ಅಂತರ್ಜಾಲದಲ್ಲಿ ಅಲೆಯೆಬ್ಬಿಸಿವೆ. ನೀವೇ ನೋಡಿ. ://../1zONsyT