ಬರಡು ಭೂಮಿಯಲ್ಲಿ ಸೋಲಾರ್ ಬೆಳೆ ತೆಗೆದ ರಾಜಸ್ಥಾನ ರೈತ: ತಿಂಗಳಿಗೆ 4 ಲಕ್ಷ ರೂ. ಆದಾಯ ಕೆಲವರ್ಷಗಳ ಹಿಂದೆ ತಪ್ಪಿನಿಂದಾಗಿ ಅಗಾಧ ಮೊತ್ತದ ವಿದ್ಯುತ್ ಬಿಲ್ ಬಂದಿತ್ತು. ಆ ತಪ್ಪನ್ನು ಪರಿಹರಿಸುವಷ್ಟರಲ್ಲಿ ಯಾದವ್ ಕುಟುಂಬಕ್ಕೆ ಸಾಕೋಸಾಕಾಗಿತ್ತು. ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿನ ರೈತ ಕುಟುಂಬವೊಂದು 3.5 ಎಕರೆ ಜಮೀನಿನಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿ ತಿಂಗಳಿಗೆ 4 ಲಕ್ಷ ರೂ. ಗಳಿಸುತ್ತಿರುವ ಸುದ್ದಿ ಬೆಳಕಿಗೆ ಬಂದಿದೆ. ರೈತರಾದ ದೇವ್ ಕಿರಣ್ ಯಾದವ್ ಮತ್ತು ಅವರ ಪುತ್ರ ಡಾ. ಅಮಿತ್ ಯಾದವ್ ಕೊತ್ಪುಲಿ ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ಸ್ಥಾಪಿಸಿದ್ದಾರೆ. ಪ್ರಧಾನ ಮಂತ್ಫ್ರಿ ಕಿಸಾನ್ ಉಜ್ರಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್() ಯೋಜನೆ ಸಹಕಾರದೊಂದಿಗೆ ಈ ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗಿದೆ.ಇದನ್ನೂ ಓದಿ: ಕರ್ನಾಟಕದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು ಅದ್ಭುತ ಯೋಜನೆ; ಆದರೆ ಸವಾಲುಗಳು ಅನೇಕ!ಯಾದವ್ ಅವರ ರೈತ ಕುಟುಂಬ ರಾಜಸ್ಥಾನ ನವೀಕರಿಸುವ ಶಕ್ತಿ ಪ್ರಾಧಿಕಾರದೊಂದಿಗೆ 25 ವರ್ಷಗಳ ಕಾಲ ವಿದ್ಯುತ್ ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಅದರಿಂದಾಗಿ ಪ್ರತಿ ತಿಂಗಳು ಈ ಕುಟುಂಬ 4 ಲಕ್ಷ ರೂ. ಸಂಪಾದಿಸುತ್ತಿದೆ. ಇದನ್ನೂ ಓದಿ: ಕಬ್ಬು ಎಫ್ಆರ್'ಪಿ ಅವೈಜ್ಞಾನಿಕವಾಗಿದ್ದು, ಮರುಪರಿಶೀಲನೆ ನಡೆಸಿ: ಸರ್ಕಾರಕ್ಕೆ ಕಬ್ಬು ಬೆಳೆಗಾರರ ಸಂಘ ಆಗ್ರಹಕೆಲವರ್ಷಗಳ ಹಿಂದೆ ತಪ್ಪಿನಿಂದಾಗಿ ಅಗಾಧ ಮೊತ್ತದ ವಿದ್ಯುತ್ ಬಿಲ್ ಬಂದಿತ್ತು. ಆ ತಪ್ಪನ್ನು ಪರಿಹರಿಸುವಷ್ಟರಲ್ಲಿ ಯಾದವ್ ಕುಟುಂಬಕ್ಕೆ ಸಾಕೋಸಾಕಾಗಿತ್ತು. ಆಗಲೇ ವಿದ್ಯುತ್ ಶಕ್ತಿಗೆ ಬದಲಾಗಿ ಇತೆರೆ ಆಯ್ಕೆಯಾದ ಸೋಲಾರ್ ಕಡೆ ಗಮನ ಹರಿದಿದ್ದು. ಅವರ ಬಳಿ ತುಂಬಾ ಜಮೀನಿದ್ದರೂ ಅಂತರ್ಜಲ ಕೊರತೆಯಿಂದಾಗಿ ಬರಡು ಭೂಮಿಯಾಗಿ ಬಿಟ್ಟಿದ್ದವು. ಹೀಗಾಗಿ ಸೋಲಾರ್ ಘಟಕ ಸ್ಥಾಪಿಸಲು ತಮ್ಮ ಬರಡು ಭೂಮಿಯನ್ನೇ ಬಳಸಿಕೊಂಡಿದ್ದಾರೆ ದೇವ್ ಕಿರಣ್ ಯಾದವ್. ಇದನ್ನೂ ಓದಿ: ಬಳ್ಳಾರಿ: ತುಂಗಭದ್ರಾ ನದಿ ದಾಟುವಾಗ ಮೊಸಳೆ ಬಾಯಿಗೆ ಸಿಕ್ಕಿದ 38 ವರ್ಷದ ರೈತ ಸಾವುಮಹಿಳಾ ಕಾನ್‌ಸ್ಟೆಬಲ್ ಜತೆ ರಾಸಲೀಲೆ ವಿಡಿಯೋ ವೈರಲ್, ರಾಜಸ್ಥಾನ ಪೊಲೀಸ್ ಅಧಿಕಾರಿ ಬಂಧನಸಮಯ ಬಂದಾಗ ರೈತರು ಬಿಜೆಪಿಗೆ ಪಾಠ ಕಲಿಸುತ್ತಾರೆ: ರಾಜಸ್ಥಾನ ಸಿಎಂ ಗೆಹ್ಲೋಟ್ರಾಜಸ್ಥಾನದಲ್ಲಿ ಭಾರೀ ಮಳೆ: ಮನೆ ಮೇಲೆ ಗೋಡೆ ಕುಸಿದು ಒಂದೇ ಕುಟುಂಬದ ಐವರ ದುರ್ಮರಣ