ಚೈನಾ ಇಂದ ಸ್ಪೇನ್ ವರೆಗೆ: ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ ಚೈನಾದ ಕೈಗಾರಿಕಾ ನಗರ ಯಿವು.. ವಾಶಿಂಗ್ ಟನ್: ಚೈನಾದ ಕೈಗಾರಿಕಾ ನಗರ ಯಿವು ಇಂದ ಸ್ಪೇನ್ ರಾಜಧಾನಿ ಮ್ಯಾಡ್ರಿಡ್ ಗೆ ೨೧ ದಿನಗಳಲ್ಲಿ ೬೨೦೦ ಮೈಲಿ ಕ್ರಮಿಸಿ ತೆರಳುವ ೮೨ ಬಂಡಿಗಳ ಸರಕು ರೈಲನ್ನು ಚೈನಾ ಅನಾವರಣಗೊಳಿಸಿದೆ. ಈ ಕಾರ್ಗೋ ರೈಲು ಆರು ದೇಶಗಳ ಮುಖಾಂತರ ಸ್ಪೇನ್ ಗೆ ತೆರಳಲಿದೆ. ಇದು ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ. ಈ ರೈಲು ಯಿವು ನಗರವನ್ನು ನವೆಂಬರ್ ೧೮ ರಂದು ಬಿಟ್ಟಿದೆ ಎಂದು ವಾಶಿಂಗ್ ಟನ್ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ. ಈ ರೈಲು ಮಾರ್ಗ ರಷಿಯಾದ ಟ್ರಾನ್ಸ್-ಸೈಬೀರಿಯನ್ ರೈಲು ಮಾರ್ಗಕ್ಕಿಂತ ಉದ್ದವಾದುದು. ಸಣ್ಣ ಬಳಕೆ ವಸ್ತುಗಳಿಗೆ ಯಿವು ನಗರ ಅತಿ ದೊಡ್ಡ ಸಗಟು ವ್ಯಾಪಾರಿ ಕೇಂದ್ರ. ಈ ರೈಲು ಮಾರ್ಗದಿಂದ ಈ ನಗರ ಇನ್ನೂ ಎತ್ತರದ ಯೋಜನೆಗೆ ಅಡಿಯಿಟ್ಟಿದೆ.