ಬೆಂಗಳೂರು: ಮುತ್ತು-ರತ್ನ ವ್ಯಾಪಾರ ಬಿಟ್ಟು ಹಣ್ಣು ಬೆಳೆದಾತನಿಗೆ ಚಿನ್ನವಾದ ಬೆಳೆ! ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಯಂ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಇಂದು ಕೃಷಿಯಲ್ಲೂ ಸಾಕಷ್ಟು ಹಣ ಗಳಿಸುವ ಅವಕಾಶವಿದೆ. ಅನೇಕ ಜನರು ಅದರಲ್ಲಿ ಉತ್ತಮ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಇದಕ್ಕೆ ನಗರದ ಮೊಹಮ್ಮದ್ ಆದಿಲ್ ಅವರು ಉದಾಹರಣೆಯಾಗಿದ್ದಾರೆ. ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಯಂ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಕೊರೋನಾ ಅಪ್ಪಳಿಸಿದ ಬಳಿಕವಂತೂ ಸಾಕಷ್ಟು ಮಂದಿ ಕೃಷಿಯನ್ನು ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಕೃಷಿಯಲ್ಲೂ ಸಾಕಷ್ಟು ಹಣ ಗಳಿಸುವ ಅವಕಾಶವಿದೆ. ಅನೇಕ ಜನರು ಅದರಲ್ಲಿ ಉತ್ತಮ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಇದಕ್ಕೆ ನಗರದ ಮೊಹಮ್ಮದ್ ಆದಿಲ್ ಅವರು ಉದಾಹರಣೆಯಾಗಿದ್ದಾರೆ.11 ವರ್ಷಗಳ ಹಿಂದೆ ಮುತ್ತು-ರತ್ನ ವ್ಯಾಪಾರ ಬಿಟ್ಟು ಮೊಹಮ್ಮದ್ ಆದಿಲ್ ಅವರು ಹಣ್ಣುಗಳ ಬೆಳೆಯಲು ಆರಂಭಿಸಿದ್ದರು. ಈ ಬೆಳೆಯೇ ಇದೀಗ ಆದಿಲ್ ಅವರಿಗೆ ಚಿನ್ನವಾಗಿ ಪರಿವರ್ತನೆಯಾಗಿದೆ.ಆದಿಲ್ ಅವರು ವಿದೇಶಿ ಸಸಿಗಳನ್ನು ನೆಟ್ಟು ಮಾರಾಟ ಮಾಡುತ್ತಿದ್ದು, ಇದರಿಂದ ವಾರ್ಷಿಕವಾಗಿ ಕೋಟ್ಯಾಂತರ ರುಪಾಯಿ ವಹಿವಾಟು ನಡೆಸುತ್ತಿದ್ದಾರೆ.ಇದನ್ನೂ ಓದಿ: ನೆಲ್ಲಿಕಾಯಿಯಿಂದ ಲಾಭದಾಯಕ ಉದ್ಯಮ: ಆದಿಲಾಬಾದ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರ ಜೀವನಕ್ಕೆ ಆಸರೆ52 ವರ್ಷದ ಮೊಹಮ್ಮದ್ ಆದಿಲ್ ಅವರು, ದೇವನಹಳ್ಳಿಯ ರೈತನಾಗಿದ್ದು, ತಮ್ಮ ಎಕರೆ ಭೂಮಿಯಲ್ಲಿ ಆವಕಾಡೊ, ಮಕಾಡಾಮಿಯಾ ಅಡಿಕೆ, ರಂಬುಟಾನ್, ಬುಷ್ ಆರೆಂಜ್, ವಾಟರ್ ಆಪಲ್, ಸ್ಟಾರ್ ಫ್ರೂಟ್ ಮತ್ತು ಲಿಚಿ ಥಾಯ್ ಗ್ವಾವವನ್ನು ಬೆಳೆಯುತ್ತಿದ್ದಾರೆ.11 ವರ್ಷಗಳ ಹಿಂದೆ ರೈತನಾಗಿ ನನ್ನ ಪಯಣ ಆರಂಭವಾಯಿತು. 4 ಎಕರೆ ಜಮೀನಿನಲ್ಲಿ ಪೇರಳದ ಮರಗಳಿದ್ದವು. ಆದರೆ, ಇಳುವರಿ ಮಾತ್ರ ಕಡಿಮೆಯಾಗಿತ್ತು. ಹೀಗಾಗಿ ನಾನು ವಿದೇಶಿ ಹಣ್ಣಿನ ಮರಗಳನ್ನು ಹಾಕಲು ನಿರ್ಧರಿಸಿದ್ದೆ. 4 ಎಕರೆ ಭೂಮಿಯಲ್ಲಿ 1 ಎಕರೆ ಭೂಮಿಯನ್ನು ನರ್ಸರಿಯಾಗಿ ಪರಿವರ್ತಿಸಿದೆ. ಇಲ್ಲಿ ನಾನು ವಿದೇಶಿ ಹಣ್ಣುಗಳ ಸಸಿಗಳನ್ನು ಬೆಳೆಸಿದೆ. ಅವಕಾಡೋದಲ್ಲಿ 13 ವಿಧದ ಹಣ್ಣುಗಳಿವೆ. ಇದೀಗ ನಾನು ನನ್ನ ನರ್ಸರಿಗೆ ಬೆಂಗಳೂರು ನರ್ಸರಿ ಎಂದು ಹೆಸರಿಟ್ಟಿದ್ದೇನೆಂದು ಆದಿಲ್ ಅವರು ಹೇಳಿದ್ದಾರೆ.ಇದನ್ನೂ ಓದಿ: ಆಸಕ್ತಿಯನ್ನೇ ಉದ್ಯಮವನ್ನಾಗಿಸಿಕೊಂಡ ಮಂಗಳೂರು ಯುವಕ; ನರ್ಸರಿ ಉದ್ಯಮದ ಯಶಸ್ಸಿನ ಕಥೆ ಇದು....ಕಳೆದ ಐದು ವರ್ಷಗಳಲ್ಲಿ ಲಕ್ಷಕ್ಕೂ ಅಧಿಕ ಆವಕಾಡೊ ಸಸಿಗಳನ್ನು ಮಾರಾಟ ಮಾಡಿದ್ದೇನೆ. ಇದು ಉಷ್ಣವಲಯದ ಹಣ್ಣುಗಳಾಗಿದ್ದು, ಶೂನ್ಯ ನಿರ್ವಹಣೆಯೊಂದಿಗೆ ಬೆಳೆಯಲು ಸುಲಭವಾಗಿದೆ ಮತ್ತು ಇಳುವರಿಯನ್ನು ಕೇವಲ ಮೂರು ವರ್ಷಗಳಲ್ಲಿ ನೋಡಬಹುದು. ಮೊದಲ ಎರಡು ವರ್ಷಗಳ ಕಾಲ ಉತ್ತಮ ಆರೈಕೆ ಮಾಡುವುದು ಮುಖ್ಯವಾಗುತ್ತದೆ ಎಂದು ಆದಿಲ್ ಮಾಹಿತಿ ನೀಡಿದ್ದಾರೆ.