ಸೆಲ್ಫಿ ಬಿಡಿ, ಈ ಭಯಾನಕ ಎಲ್ಫಿ ನೋಡಿ ಮನಸೂರೆಗೊಳ್ಳಿ ದೇಶದ ಪ್ರಧಾನಿಯವರ ಹಲವಾರು ಸೆಲ್ಫಿಗಳನ್ನು ನೀವು ನೋಡಿದ್ದೀರಿ. ಸಿಂಗಳೀಕವೊಂದು ಸೆಲ್ಫಿ ತೆಗೆದುಕೊಂಡಿದ್ದು ನೋಡಿದ್ದೀರಿ. ಆದರೆ ಈ ಭಯಾನಕ 'ಎಲ್ಫಿ'ಗೆ ವ್ಯಾಂಕೋವರ್: ದೇಶದ ಪ್ರಧಾನಿಯವರ ಹಲವಾರು ಸೆಲ್ಫಿಗಳನ್ನು ನೀವು ನೋಡಿದ್ದೀರಿ. ಸಿಂಗಳೀಕವೊಂದು ಸೆಲ್ಫಿ ತೆಗೆದುಕೊಂಡಿದ್ದು ನೋಡಿದ್ದೀರಿ. ಆದರೆ ಈ ಭಯಾನಕ 'ಎಲ್ಫಿ'ಗೆ ನೀವು ಮನಸೂರೆಗೊಳ್ಳಲು ಇರಲು ಸಾಧ್ಯವೇ ಇಲ್ಲ. ಸಾಮಾಜಿಕ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಇರುವ ಈ ಆನೆ ಸೆಲ್ಫಿ ಅಥವಾ ಎಲ್ಫಿ ಬಳಕೆದಾರರರನ್ನು ಆಶ್ಚರ್ಯಗೊಳಿಸಿದೆ. ಬ್ರಿಟಿಶ್ ಕೊಲಂಬಿಯಾ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗು ಸದ್ಯಕ್ಕೆ ಥೈಲ್ಯಾಂಡಿನಲ್ಲಿ ಓದುತ್ತಿರುವ ಕ್ರಿಶ್ಚಿಯನ್ ಲೆಬ್ಲ್ಯಾಂಕ್ ಈ ಎಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. ಥೈಲ್ಯಾಂಡ್ ನ ಕೊಹ್ ಫಂಗನ್ ದ್ವೀಪದಲ್ಲಿ ಈ ಎಲ್ಫಿ ಕ್ಲಿಕ್ಕಿಸಲಾಗಿದೆ. "ನಾನು ಆನೆಗಳಿಗೆ ಬಾಳೆಹಣ್ಣು ತಿನ್ನಿಸುತ್ತಾ ಫೋಟೊಗಳನ್ನು ಹಿಡಿಯುತ್ತಿದ್ದೆ. ಬಾಳೆ ಹಣ್ಣುಗಳು ಮುಗಿದಾಕ್ಷಣ ಆನೆ ನನ್ನ ಗೋಪ್ರೋ ಕ್ಯಾಮರಾ ಕಸಿಯಿತು. ಕ್ಯಾಮರಾದಲ್ಲಿ ಟೈಮರ್ ಸೆಟ್ ಆಗಿದ್ದರಿಂದ ಆನೆ ಎಲ್ಫಿ ಕ್ಲಿಕ್ಕಿಸಿತು" ಎಂದು ಲೆಬ್ಲ್ಯಾಂಕ್ ತಿಳಿಸಿದ್ದಾರೆ. ಈ ಅಧ್ಬುತ ಫೋಟೊವನ್ನು ಲೆಬ್ಲ್ಯಾಂಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.