ವಿವಾಹ ಪೂರ್ವವೇ ಸೆಕ್ಸ್ ಬೇಕಂತೆ! ವಿವಾಹಪೂರ್ವ ಸೆಕ್ಸ್! ದಶಕದ ಹಿಂದೆ ಈ ವಿಚಾರದ ಕುರಿತು ಭಾರತದ... ವಿವಾಹಪೂರ್ವ ಸೆಕ್ಸ್! ದಶಕದ ಹಿಂದೆ ಈ ವಿಚಾರದ ಕುರಿತು ಭಾರತದ ಯುವಜನತೆ ಮುಕ್ತ ಚರ್ಚೆಗೆ ಹಿಂದೇಟು ಹಾಕುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಐಟಿ ಕ್ರಾಂತಿ ದೇಶದ ಅರ್ಥವ್ಯವಸ್ಥೆಯನ್ನಷ್ಟೇ ಅಲ್ಲ, ಯುವಜನರ ಚಿಂತನಾ ಲಹರಿಯನ್ನೂ ಬದಲಿಸಿದೆ. ಅದರಲ್ಲೂ ಮುಖ್ಯವಾಗಿ ನಗರಪ್ರದೇಶಗಳ ಯುವಜನರು ಸೆಕ್ಸ್ ವಿಚಾರದಲ್ಲಿ ಹೆಚ್ಚು ಮುಕ್ತರಾಗುತ್ತಿದ್ದಾರೆ. 10 ವರ್ಷದ ಹಿಂದಿನ ಪರಿಸ್ಥಿತಿ ಈಗಿಲ್ಲ. ಯುವಜನರು ಈ ಕುರಿತು ಮುಕ್ತವಾಗಿ ಮಾತನಾಡಲು ಮುಂದೆ ಬರುತ್ತಿದ್ದಾರೆ. ವಿವಾಹಪೂರ್ವ ಲೈಂಗಿಕತೆ ಅಪರಾಧವೇನಲ್ಲ ಎನ್ನುವ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಗಂಡು-ಹೆಣ್ಣು ಇಬ್ಬರಿಗೂ ಪರಸ್ಪರ ನಂಬಿಕೆ ಇದ್ದರೆ ವಿವಾಹಪೂರ್ವ ಸೆಕ್ಸ್‌ನಲ್ಲಿ ತೊಡಗುವುದರಲ್ಲಿ ತಪ್ಪೇನಿಲ್ಲ. ಆದರೆ, ಈ ವೇಳೆ ಲೈಂಗಿಕ ರೋಗಗಳು ಮತ್ತು ಗರ್ಭ ಧರಿಸುವ ಸಾಧ್ಯತೆಗಳ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಇತ್ತೀಚಿಗೆ ನಡೆದ ಸರ್ವೆಯೊಂದರಲ್ಲಿ ಶೇ.90 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಶೇ.80ರಷ್ಟು ಮಂದಿ ಪ್ರೇಯಸಿ ಅಥವಾ ಪ್ರಿಯಕರನ ಜತೆಗೆ ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿದ್ದಾಗಿಯೂ ಬಹಿರಂಗಪಡಿಸಿದ್ದಾರೆ.