ಕಣ್ಣಿನಿಂದಲೇ ಸಕಲ ಜತೆಯಾಗಿ ಹೋಗುತ್ತಿರುವ ಹೆಣ್ಣು-ಗಂಡುಗಳು ಪ್ರಿಯತಮ ಪ್ರೇಯಸಿಯರೇ... ಜತೆಯಾಗಿ ಹೋಗುತ್ತಿರುವ ಹೆಣ್ಣು-ಗಂಡುಗಳು ಪ್ರಿಯತಮ ಪ್ರೇಯಸಿಯರೇ ಆಗಿರಬೇಕಾದ್ದಿಲ್ಲ. ಆದರೆ ಅವರ ವರ್ತನೆಯನ್ನು ನೋಡಿಯೇ ಅವರು ಅಣ್ಣ-ತಂಗಿಯೋ, ಗಂಡ-ಹೆಂಡತಿಯೋ ಹೇಳಿಬಿಡಬಹುದು. ಅಥವಾ ಅವರ ಭಂಗಿಗಳನ್ನು ನೋಡಿ, ಅವರು ಪ್ರೇಮದ ಅವಸ್ಥೆಗಳಲ್ಲಿ ಯಾವ ಹಂತದಲ್ಲಿದ್ದಾರೆಂದೂ ಹೇಳಬಹುದು. ಬದ್ಧಹೃದಯಾಯಾಃ ಕಾಂತಃ ತಥೈವ ಅರ್ಧ್ಧಾಕ್ಷಪಿಚ್ಛಿಲಾ ವಾಮಾ ನಿಃಶ್ವಸಿತಮಪಿ ಜ್ಞಾಕ್ಷಯತೇ ವಿದಗ್ಧಜನಸಂಕುಲೇ ಗ್ರಾಮೇ ಅನುರಾಗಗೊಂಡ ಹೆಣ್ಣಿನ ಹೃದಯದಲ್ಲಿ ಸ್ಥಾನ ಪಡೆದವನು ಇವನೇ, ಆತನ ಹೃದಯಮಂದಿರದಲ್ಲಿ ಮನೆ ಮಾಡಿದವಳು ಇವಳೇ ಎಂಬುದನ್ನು ಬೇಗನೆ ಹೇಳಿಬಿಡಬಹುದು - ಅವರ ಕಣ್ಮೋಟವನ್ನು ಹಿಂಬಾಲಿಸುವ ಮೂಲಕ. ಬುದ್ಧಿವಂತರಿರುವ ಊರಿನಲ್ಲಿ ಯಾವುದೂ ಗುಟ್ಟಲ್ಲ. ಅಲ್ಲಿ ಪಕ್ಕದ ಮನೆಯವನು ನಿಟ್ಟುಸಿರು ಬಿಟ್ಟರೂ ಇನ್ನೊಬ್ಬನಿಗೆ ತಿಳಿದುಹೋಗುತ್ತದೆ. ಕಣ್ಣೋಟದಲ್ಲಿ ಪ್ರೇಮ ವ್ಯಕ್ತವಾಗುತ್ತದೆ. ಇನ್ನೂ ಈಗಷ್ಟೇ ಪ್ರೇಮದ ಚಮತ್ಕಾರಕ್ಕೆ ತೆರೆದುಕೊಳ್ಳುತ್ತಿರುವ ಯುವಜೋಡಿಯಾದರೆ, ಅವರ ಕಣ್ಣೋಟಗಳು ಪರಸ್ಪರ ಸಂಧಿಸದೆ ಆಟವಾಡುತ್ತಿರುತ್ತವೆ. ಅವನ ಕಣ್ಮು ಆಚೆ ತಿರುಗಲೆಂದು ಇವಳು, ಇವಳ ಕಣ್ಣು ತನ್ನೆಡೆಗೆ ತಿರುಗಲೆಂದು ಅವನು ವಿಲವಿಲಗುಡುತ್ತಿರುತ್ತಾರೆ. ತುಸು ಪಳಗಿದ ಪ್ರೇಮಿಗಳಾದರೆ ಅವರ ಕಣ್ಣುಗಳು ಎಗ್ಗಿಲ್ಲದೆ ಒಬ್ಬರನ್ನೊಬ್ಬರು ದೃಷ್ಟಿಸುತ್ತಿರುತ್ತವೆ. ಇನ್ನೂ ಮುಂದುವರಿದವರಾದರೆ, ಅವರ ಕಣ್ಣೋಟವನ್ನು ಸ್ಪರ್ಶ ಮತ್ತಿತರ ಚೇಷ್ಟೆಗಳು ಹಿಂಬಾಲಿಸುತ್ತವೆ. ಎಲ್ಲ ಊರಿನ ಪ್ರೇಮಿಗಳ ಪರಿಯೂ ಹೀಗೇ. ಯಾರೂ ಇದಕ್ಕೆ ಹೊರತಲ್ಲ. ಹರಿಹರ