ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆ ಕೇರಳ ರಾಜ್ಯದ ಪ್ರತಿಷ್ಟಿತ ಮಿಸ್ ಕೇರಳ ಫ್ಯಾಷನ್ ಶೋಗೆ ದೇಶಾದ್ಯಂತ 500 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅನುಪ್ರಸೋಬಿನಿಯೂ ಒಬ್ಬಳಾಗಿದ್ದಳು. ಪಾಲಕ್ಕಾಡ್: ಅನುಪ್ರಸೋಬಿನಿ, ಆದಿವಾಸಿ ಜನಾಂಗಕ್ಕೆ ಸೇರಿದ ಹುಡುಗಿ. ಪಾಲಕ್ಕಾಡ್ ನ ಚೊರಿಯಾನೂರ್ ಎಂಬಲ್ಲಿ ಆಕೆಯ ಕುಟುಂಬ ನೆಲೆಸಿದೆ. ಆಕೆ ಫ್ಯಾಷನ್ ಶೋ ನಲ್ಲಿ ರಾಂಪ್ ವಾಕ್ ಮಾಡಿದ್ದು, ಈ ಸಾಧನೆ ಮಾಡಿದ ಮೊದಲ ಆದಿವಾಸಿ ಹೆಣ್ಣುಮಗಳು ಎನ್ನುವ ಹೆಸರಿಗೆ ಅನುಪ್ರಸೋಬಿನಿ ಪಾತ್ರಳಾಗಿದ್ದಾಳೆ. ಇದನ್ನೂ ಓದಿ: 'ಮಲ್ನಾಡ್ ಕನ್ನಡ ಕಾರ್ಟೂನ್' ಮೂಲಕ ಯೂಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದ ಪೂಜಾ ಹರೀಶ್17 ವರ್ಷದ ಆಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಕೇರಳ ರಾಜ್ಯದ ಪ್ರತಿಷ್ಟಿತ ಮಿಸ್ ಕೇರಳ ಫ್ಯಾಷನ್ ಶೋಗೆ ದೇಶಾದ್ಯಂತ 500 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅನುಪ್ರಸೋಬಿನಿಯೂ ಒಬ್ಬಳಾಗಿದ್ದಳು. ಇದನ್ನೂ ಓದಿ: ಕಾಳಿ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಡ ಮುಸ್ಲಿಂ ರೈತಫ್ಯಾಷನ್ ಶೋ ನ ವಿವಿಧ ಹಂತಗಳ ನಂತರ, ಅಂತಿಮ ಸುತ್ತಿನಲ್ಲಿ 33 ಪ್ರತಿಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅವರಲ್ಲಿ ಈಕೆಯೂ ಒಬ್ಬಳು. ಆಕೆಗೆ ಪ್ರತಿಸ್ಪರ್ಧಿಗಳ ಪ್ರೋತ್ಸಾಹ ಮತ್ತು ಪ್ರೀತಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.ಇದನ್ನೂ ಓದಿ: ಬಳ್ಳಾರಿಯ 1 ರೂಪಾಯಿ ಭಿಕ್ಷುಕನ ಅಂತ್ಯಕ್ರಿಯೆಗೆ 4 ಸಾವಿರಕ್ಕೂ ಹೆಚ್ಚು ಜನ!ದೇಶಿ ಕಾಳುಮೆಣಸು ಬೆಳೆ ಸಂರಕ್ಷಣೆಗಾಗಿ ಕೊಡಗಿನ ರೈತನಿಗೆ ಪ್ರಶಸ್ತಿಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಯಿಂದ ಹಳೆಯ ಪಠ್ಯಪುಸ್ತಕಗಳ ಸಂಗ್ರಹ ಲೋಕಾರ್ಪಣೆಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ಕುಟುಂಬದ ಮೂರನೇ ತಲೆಮಾರಿನ ಮಹತಿ ಸುಬ್ರಮಣಿಯಂ ಮ್ಯೂಸಿಕ್ ವಿಡಿಯೊ ಬಿಡುಗಡೆಪ್ರವಾಹದಿಂದ ರಕ್ಷಿಸಲ್ಪಟ್ಟ ಹೆಣ್ಣುಮಗುವಿನ ಹುಟ್ಟುಹಬ್ಬ ಅಚರಿಸಿದ ಚೆನ್ನೈ ಪೊಲೀಸರು