ಯಾವ ಜೀವವೂ ಪುಟ್ಟದಲ್ಲ: ಲಿಫ್ಟ್ ಸಂಧಿಯಲ್ಲಿ ಸಿಲುಕಿಕೊಂಡ ಹಕ್ಕಿ ಮರಿ; ಅಗ್ನಿಶಾಮಕ ದಳ ಕಾರ್ಯಾಚರಣೆ ಕೇವಲ ಒಂದು ಹಕ್ಕಿ ಮರಿಯನ್ನು ರಕ್ಷಿಸಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಬರುವುದೆಂಬ ಕಲ್ಪನೆ ಅಲ್ಲಿ ಯಾರಿಗೂ ಇರಲಿಲ್ಲ. ಆದರೆ ಅಂಥದ್ದೊಂದು ಘಟನೆ ಅಂದು ಸಂಭವಿಸಿತು. ಕಾಸರಗೋಡು: ಯಾವುದೇ ಒಂದು ಜೀವ ಪುಟ್ಟದಲ್ಲ ಎನ್ನುವುದಕ್ಕೆ ನಿದರ್ಶನವೆಂಬಂತೆ ಕಾಸರಗೋಡಿನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಘಟನೆ ನಡೆದ ಸ್ಥಳ ಸೆಂಟ್ರಲ್ ಯೂನಿವರ್ಸಿಟಿ.ಇದನ್ನೂ ಓದಿ: ದೇವರ ನಾಡಲ್ಲಿ ಗಜರಾಜನಿಗೆ ಪುನರ್ವಸತಿ ಕೇಂದ್ರ: ಆನೆಗಳಿಗೆ ಮಾರ್ನಿಂಗ್ ವಾಕ್ ಮತ್ತು ಉತ್ಕೃಷ್ಟ ಆಹಾರಆ ಯೂನಿವರ್ಸಿಟಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡಲಿದ್ದರು. ಹೀಗಾಗಿ ಪೊಲೀಸರು ಕಟ್ಟಡವನ್ನು ಪಹರೆ ಕಾಯುತ್ತಿದ್ದರು. ಈ ಸಂದರ್ಭ ತಾಯಿ ಹಕ್ಕಿಯೊಂದು ಪೊಲೀಸ್ ಪೇದೆಯೊಬ್ಬರ ಸುತ್ತ ಹಾರಾಡುತ್ತಾ ಅವರ ಗಮನ ಸೆಳೆಯಲು ಯತ್ನಿಸುತ್ತಿತ್ತು. ಈ ವಿಚಾರವನ್ನು ಪೇದೆ ಉಪನ್ಯಾಸಕಿ ಆಶಾಲಕ್ಷ್ಮಿ ಅವರ ಗಮನಕ್ಕೆ ತಂದಿದ್ದರು. ಇದನ್ನೂ ಓದಿ: ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆಆಶಾಲಕ್ಷ್ಮಿ ಅವರಿಗೆ ಯೂನಿವರ್ಸಿಟಿ ಕಟ್ಟಡದಲ್ಲಿ ಗೂಡು ಮಾಡಿಕೊಂಡಿದ್ದ ಹಕ್ಕಿಗಳ ಪರಿಚಯವಿತ್ತು. ಈ ಹಿಂದೆ ಹಲವು ಬಾರಿ ಆ ಹಕ್ಕಿಗಳನ್ನು ಗಮನಿಸಿ ಅವುಗಳ ಆಟ ಕಂಡು ಹರ್ಷಿಸಿದ್ದರು ಕೂಡಾ.ಇದನ್ನೂ ಓದಿ: ಕಾಲೆತ್ತಿ ನಾಟ್ಯವಾಡುವ ಕೊಟ್ಟಿಗೆಹಾರ ಕಪ್ಪೆಗೂ, ವಿದೇಶಿ ಬಾರ್ನಿಯಾ ಕಪ್ಪೆ ನಡುವಿನ ವ್ಯತ್ಯಾಸ: ಅಧ್ಯಯನದಿಂದ ಬಹಿರಂಗಹಕ್ಕಿಯ ಚೀರಾಟ ಕಂಡು ಆಶಾಲಕ್ಷ್ಮಿ ಪರಿಶೀಲಿಸಿದಾಗ ಆ ಹಕ್ಕಿ ಮರಿ ಲಿಫ್ಟ್ ನಲ್ಲಿ ಸಿಲುಕಿಕೊಂಡಿರುವುದು ತಿಳಿದುಬಂದಿತ್ತು. ಒಡನೆಯೇ ಅವರು ರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದರು. ಆದರೆ ಕೇವಲ ಹಕ್ಕಿಯನ್ನು ರಕ್ಷಿಸಲು ಅವರು ಬರುವರೇ ಎನ್ನುವ ಆತಂಕ ಅವರಿಗಿತ್ತು.ಇದನ್ನೂ ಓದಿ: ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯಅವರ ಅಚ್ಚರಿಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಕೆಲ ಗಂಟೆಗಳ ಪರಿಶ್ರಮದ ನಂತರ ಅವರು ಹಕ್ಕಿ ಮರಿಯನ್ನು ರಕ್ಷಿಸುವಲ್ಲಿ ಸಫಲರಾದರು.ಇದನ್ನೂ ಓದಿ: ಕಪ್ಪೆಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ಕಪ್ಪೆಗಳ ಹಬ್ಬ ಆಯೋಜನೆಶಾರ್ಕ್ ಪ್ರತಿಕಾಯಗಳಲ್ಲಿನ ಪ್ರೋಟೀನ್ ನಲ್ಲಿ ಕೊರೊನಾಗೆ ತಡೆಯೊಡ್ಡುವ ಸಾಮರ್ಥ್ಯ!ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ!ಜನರ ಸೇವೆಯೇ ಈಶ ಸೇವೆ: ರೋಗಿಗಳಲ್ಲಿ ದೇವರನ್ನು ಕಂಡವರು: ದಿ ಲಾಸ್ಟ್ ಡಾಕ್ಟರ್ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆ