ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಇನ್ನುಮುಂದೆ ಚಲಿಸುವ ಹುಂಡಿ ವಿಶ್ವವಿಖ್ಯಾತ ಶ್ರೀ ಮೀನಾಕ್ಷಿ ದೇವಸ್ಥಾನಕ್ಕೆ ಈಗ ಕಡಿಮೆ ತೂಕದ ಆಧುನಿಕ ಚಲಿಸುವ ಹುಂಡಿ ಬಂದಿದೆ... ಮಧುರೈ: ವಿಶ್ವವಿಖ್ಯಾತ ಶ್ರೀ ಮೀನಾಕ್ಷಿ ದೇವಸ್ಥಾನಕ್ಕೆ ಈಗ ಕಡಿಮೆ ತೂಕದ ಆಧುನಿಕ ಚಲಿಸುವ ಹುಂಡಿ ಬಂದಿದೆ. ಅಗತ್ಯಕ್ಕೆ ತಕ್ಕಂತೆ ಈ ದೇವಾಲಯದಲ್ಲಿ ಎಲ್ಲಿಗೆ ಬೇಕಾದರೂ ಈ ಹುಂಡಿಯನ್ನು ತನ್ನ ಚಕ್ರಗಳ ಮೂಲಕ ಎಳೆದುಕೊಂಡು ಇಡಬಹುದಾಗಿದೆ. ಟಿವಿಎಸ್ ಸಮೂಹದ ಸಂಸ್ಥೆ, ಉತ್ತಮ ಲೋಹದಿಂದ ತಯಾರಿಸಿದ ಈ ಹುಂಡಿಯನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದೆ ಎಂದು ವೇವಾಲಯದ ಅಧಿಕಾರಿ ಎನ್ ನಟರಾಜನ್ ತಿಳಿಸಿದ್ದಾರೆ. ಸುಂದರವಾಗಿ ಕಾಣುವ ಈ ಹುಂಡಿ ಬಹಳ ಸುರಕ್ಷಿತ ಎಂದು ವಿವರಿಸಿದ ಅವರು ಎಣಿಸಲು ದುಡ್ಡನ್ನು ಹೊರ ತೆಗೆಯುವಾಗ ಕೂಡ ನೋಟುಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದಿದ್ದಾರೆ.