ಭಯಗಳು ಸಾರ್ ಭಯಗಳು ಸಾಮಾನ್ಯ ಮನುಷ್ಯರಿಗೆ ಸೆಲೆಬ್ರಿಟಿಗಳೆಂದರೇ ಭಯ. ಭಯ ಯಾಕೆಂದರೆ, ಅವರ ಚಿತ್ತ ಯಾವ ಕ್ಷಣದಲ್ಲಿ ಹೇಗಿರುತ್ತದೋ, ಅವರ ಆಗಮನದಿಂದ ಟ್ಪಾಫಿಕ್ ಜಾಮ್ ಆಗಿ ಎಲ್ಲಿ ತಾನು ಒದ್ದಾಡುವಂತಾಗುತ್ತದೋ ಅಂತ. ಸೆಲೆಬ್ರಿಟಿಗಳಿಗೆ ಅಭಿಮಾನಿಗಳ ಭಯ. ಅವರ ಗುಂಪಿನಲ್ಲಿ ಸಿಕ್ಕಿಹಾಕಿಕೊಂಡು ಅಜ್ಜಿಬಜ್ಜಿಯಾದರೆ ಅಂತ. ಇದು ತಮಾಷೆಗಾಗಿ ಮಾತ್ರ. ಸೆಲೆಬ್ರಿಟಿಗಳಿಗೂ ನಾನಾ ರೀತಿಯ ಭಯಗಳಿರುತ್ತವೆ. ಭಯದ ಕಾಯಿಲೆ ಇರುವ ಕೆಲ ಹಾಲಿವುಡ್ ಸೆಲೆಬ್ರಿಟಿಗಳಿದ್ದಾರೆ. ಈ ಫೇಮಸ್ ಸೆಲೆಬ್ರಿಟಿಗಳು ಯಾವ ವಿಷಯಕ್ಕೆ ಭಯ ಪಡುತ್ತಾರೆ ಎಂದು ತಿಳಿದರೆ ನಿಮಗೆ ಇಷ್ಟೆಲ್ಲಾ ಚಿಕ್ಕ ವಿಷಯಕ್ಕೆ ಭಯ ಪಡುತ್ತಾರಾ ಎಂದು ಆಶ್ವರ್ಯವಾಗಬಹದು. ಈ ಸೆಲೆಬ್ರಿಟಿಗಳು ಅನುಭವಿಸುವ ಕೆಲ ಫೋಬಿಯಾಗಳಂತೂ ಭಲೇ ವಿಚಿತ್ರ. ಪಮೇಲಾ ಆಂಡರ್ಸನ್ ಆತ್ಯಂತ ಮಾದಕ ನಟಿ. ಆದರೆ ಕನ್ನಡಿ ನೋಡಿದರೆ ಮಾರು ದೂರ ಓಡುತ್ತಾಳಂತೆ. ತನ್ನ ಸೌಂದರ್ಯವನ್ನು ಕನ್ನಡಿಯಲ್ಲಿ ನೋಡಲು ಈಕೆಗೆ ಭಯಯ. ಕನ್ನಡಿಯ ಮುಂದೆಯೇ ಜೀವನ ಕಳೆದು ಬಿಡುವ ಹುಡುಗಿಯರು ಈಕೆಯಿಂದ ಪಾಠ ಕಲಿಯಬೇಕೋ ಜಿಗುಪ್ಸೆ ಪಡೆಯಬೇಕೋ ಗೊತ್ತಿಲ್ಲ. ಈ ಕಾಯಿಲೆ ಕೆಲ ಮಾಡಲ್‌ಗಳಲ್ಲಿ ಸಾಮಾನ್ಯವಂತೆ. ಇದಕ್ಕೆ ಎಂಬ ಹೆಸರಿದೆ. ನಿಕೋಲ್ ಕಿಡ್ಮನ್ ಎಂಬ ನಟಿಗೆ ಚಿಟ್ಟೆ ಕಂಡರೆ ವಿಪರೀತ ಭಯವಂತೆ. ಪಾತರಗಿತ್ತಿ ಹಾರಾಡುತ್ತ ಹತ್ತಿರ ಬಂದರೆ ಈಕೆಯೂ ಹಾರಾಡುತ್ತಾ ಕಟ್ಟಡದಿಂದ ಜಿಗಿದುಬಿಡುತ್ತಾಳೆ. ಇದನ್ನು .. ಎಂದು ಗುರುತಿಸಲಾಗಿದೆ. ಕಿರುತೆರೆಯ ಹಿರಿ ತಾರೆ ಓಪ್ರಾ ವಿನ್‌ಫ್ರೇಗೆ ಚ್ಯೂಯಿಂಗ್ ಗಮ್ ಅಗಿಯುವುದೆಂದರೆ ವಿಪರೀತ ಭಯ. ಇವರ ಎದುರಿಗೆ ಯಾರಾದರೂ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರೆ ಅದನ್ನು ನೋಡಿ ಈಕೆಯ ದವಡೆಗಳು ಅಲುಗದಂತೆ ಫ್ರೀಝ್ ಆಗಿಬಿಡುತ್ತವೆ. ಈ ವಿಪರೀತ ಭಯಕ್ಕೆ ಎಂದು ಹೆಸರು. ರಾಬರ್ಟ್ ಪ್ಯಾಟಿನ್ಸನ್ ಎಂಬ ನಟನಿಗೆ ಎಲ್ಲಾ ಪ್ರಾಣಿಗಳೂ ಇಷ್ಟ, ಆದರೆ ಕುದುರೆ ಕಂಡರೆ ಹೇಷಾರವ ಮಾಡುತ್ತ ಓಡಿಬಿಡುತ್ತಾನೆ. ಕುದುರೆ ನೋಡುವುದಿರಲಿ ಅದರ ಬಗ್ಗೆ ಹೇಳಿದರೂ ನಡುಕ. ಈ ಕಾಯಿಲೆಗೆ ಎಂದು ಹೆಸರು. ಕಾರ್ಮೆನ್ ಎಲೆಕ್ಟ್ರಾಗೆ ನೀರೆಂದರೆ ತುಂಬಾ ಭಯ. ನೀರು ಕಂಡರೇ ಮೈಮೇಲೆ ಐಸ್ ಎರಚಿದಂತೆ ಎಗರಾಡುವ ಈ ಕಾಯಿಲೆಗೆ . ಕೆಲ್ಲಿ ಆಸ್ಟಾರ್ನ್‌ಗೆ . ಹಾಗೆಂದರೆ ಸ್ಪರ್ಶದ ಭಯ. ಕ್ಯಾಮರೂನ್ ಡಯಾಜ್‌ಗೆ ಕದ ತಟ್ಟುವ ಶಬ್ದ ಕೇಳಿದರೆ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತದೆ. ಈಕೆಯ ಮನೆಯ ಬಾಗಿಲು ತೆರೆಯುವುದೆಲ್ಲಾ ಸಂಗಡಿಗರೇ ಆದ್ದರಿಂದ ಬಚಾವು. ಮಿತ್ತಿ ಮೌಸ್ ಅನ್ನು ಸೃಷ್ಟಿಸಿ ಅದನ್ನು ಅಜರಾಮರಗೊಳಿಸಿದ ಕಾರ್ಟೂನಿಷ್ಟ್ ವಾಲ್ಟ್ ಡಿಸ್ನಿಗೆ ಯಾವುದರ ಭಯ ಗೋತ್ತಾ? ಇಲಿಯದರು! ಡೊನಾಲ್ಡ್ ಟ್ರಂಪ್ ಎಂಬಾತನಿಗೆ ಶೇಕ್ ಹ್ಯಾಂಡ್ ಮಾಡಲು ಭಯ. ನಟಿ ಮೆಗಾನ್ ಫಾಕ್ಸ್‌ಗೆ ಕತ್ತಲೆಯೆಂದರೆ ಭಯ, ಪೇಪರ್ ಕಂಡರೆ ಭಯ. ನಿತ್ಯ ಬೆಳಕಿನ ಸಹವಾಸದಲ್ಲಿರುವವರಿಗೆ ಈ ಭಯ ಸಹಜವೇನೋ! -ವನಮಾಲಿ