14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ. 14 ವರ್ಷಗಳ ಹಿಂದೆ ಕಾಣೆಯಾದ ಬಾಲಕಿಯನ್ನು ಪಾಲಕರ ಬಳಿ ಸೇರಿಸಲಾಗಿದೆ. ರಾಂಚಿ: ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ. ಜಯಂತಿ ಲಕ್ರ ಎನ್ನುವ ಬಾಲಕಿ ಜಾರ್ಖಂಡ್ ರಾಜ್ಯದ ಗುಮ್ಲಾ ಗ್ರಾಮದ ನಿವಾಸಿ. ಆಕೆ 14 ವರ್ಷಗಳ ಹಿಂದೆ ಕಾಣೆಯಾಗಿದ್ದಳು.ಇದನ್ನೂ ಓದಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೆಬಲ್!ಬಾಲಕಿ ಪತ್ತೆಗಾಗಿ ಪಾಲಕರು ಪೊಲೀಸರಿಗೆ, ಸಂಬಂಧ ಪಟ್ತವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಮುಖ್ಯಮಂತ್ರಿಯರವಲ್ಲಿಗೂ ದೂರು ತಲುಪಿತ್ತು. ಆದರೆ ಬಾಲಕಿಯ ಇರುವಿಕೆ ಬಗ್ಗೆ ಕ್ಲೂಗಳು ಸಿಕ್ಕಿರಲಿಲ್ಲ.ಇದನ್ನೂ ಓದಿ: ಬಾಲಕನ ಜೀವ ಉಳಿಸಿದ ಕಾರ್ಮಿಕನಿಗೆ ರೈಲ್ವೇ ಇಲಾಖೆ ಗೌರವಕೆಲದಿನಗಳ ಹಿಂದೆ ಕಾಣೆಯಾಗಿದ್ದ ಜಯಂತಿ ಲಕ್ರ ಪಂಜಾಬಿನಲ್ಲಿ ಇರುವ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿತ್ತು. ಒಡನೆಯೇ ಸೊರೆನ್ ಅವರು ಬಾಲಕಿಯನ್ನು ಮರಳಿ ಕರೆತರಲು ಅಗತ್ಯ ಏರ್ಪಾಡು ಮಾಡುವಂತೆ ಆದೇಶ ನೀಡಿದರು.ಅದರಂತೆ ಅಧಿಕಾರಿಗಳು ಪಂಜಾಬ್ ನಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಜಯಂತಿಯನ್ನು ಮರಳಿ ಮನೆಗೆ ಕರೆತಂದಿದ್ದಾರೆ. ಇದನ್ನೂ ಓದಿ: ಇಡೀ ಗ್ರಾಮವೇ ಎನ್ನ ಪಾಠಶಾಲೆ, ಮನೆ ಗೋಡೆಗಳೇ ಕಪ್ಪು ಹಲಗೆ ಎಂದ ಶಿಕ್ಷಕನಿಗೆ ನವದೆಹಲಿ ಬುಲಾವ್ಮಹಾರಾಷ್ಟ್ರ: ಓಡಿ ಹೋಗಿದ್ದ, 'ಕಾಣೆಯಾಗಿದ್ದ' 56 ಯುವತಿಯರು ಮರಳಿ ಕುಟುಂಬಕ್ಕೆ ಸೇರ್ಪಡೆ!ಮಹದೇಶ್ವರ ಬೆಟ್ಟ: ಕಾಣೆಯಾಗಿದ್ದ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆ!ಬೆಂಗಳೂರು: 3 ತಿಂಗಳ ಹಿಂದೆ ಕಾಣೆಯಾಗಿದ್ದ ಅರ್ಚಕನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಕಾಣೆಯಾಗಿದ್ದ ವೈದ್ಯಾಧಿಕಾರಿ ಹಾಸನದಲ್ಲಿ ಪತ್ತೆ; ಹೇಳಿಕೆಯಲ್ಲಿ ಗೊಂದಲ