ಶಾಂತಿಯ ಡೈನಾಮೈಟ್ ಸ್ಫೋಟ! ಡೈನಾಮೈಟ್ ಸಿಡಿದಿದೆ. ಶಾಂತಿ ಕದಡಿದೆ. ಹೂ. ಭಾರತೀಯ ಮೂಲದ ಬ್ರಿಟಿಷ್ ನೀಲಿ ಚಿತ್ರತಾರೆ ಶಾಂತಿ ಡೈನಾಮೈಟ್ ತನ್ನನ್ನು ಸನ್ನಿಲಿಯೋನ್‌ಗೆ ಹೋಲಿಸಿರುವವರ ವಿರುದ್ಧ ಗರಮ್ಮಾಗಿದ್ದಾಳೆ. 'ಇಬ್ರೂ ನೀಲಿ ಚಿತ್ರದಲ್ಲಿ ನಟಿಸಿದ್ದೀವಿ ಅಂದಾಕ್ಷಣ ನಮ್ಮಿಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ' ಎಂದು ಕಿರುಚಾಡಿರುವ ಶಾಂತಿ, ಮಾಧ್ಯಮದವರಿಗೆ ತನ್ನ 'ಐ ಲವ್ ದುಬೈ' ಬಿಡುಗಡೆಯಾಗುವ ತನಕ ಕಾದು ನೋಡಲು ತಾಕೀತು ಮಾಡಿದ್ದಾಳೆ. 'ನನಗಿರುವ ಎಲ್ಲವೂ ಅವಳಿಗಿದೆ. ಅದನ್ನು ಈವರೆಗೆ ಇಬ್ಬರೂ ಪ್ರದರ್ಶಿಸಿದ್ದೇವೆ. ಆದರೆ ನನಗಿರುವ ಅಭಿನಯ ಸಾಮರ್ಥ್ಯ ಅವಳಿಗಿಲ್ಲ. ಅದನ್ನು ಇಕ್ರಮ್ ಅಕ್ತರ್ ನಿರ್ದೇಶನದ ಐ ಲವ್ ದುಬೈ ಪ್ರೂವ್ ಮಾಡಲಿದೆ' ಎಂದು ಗುಡುಗಿದ್ದಾಳೆ ಶಾಂತಿ. ಬ್ರಿಟಿಷ್ ಪತ್ರಿಕೆಯೊಂದರ ಪ್ರಕಾರ ಶಾಂತಿ ಏಷ್ಯಾದ ಟಾಪ್ 50 ಸೆಕ್ಸಿ ತಾರೆಯರಲ್ಲಿ ಒಬ್ಬಳು. ಆದರೆ ಅದರ ಹೊರತಾಗಿ ತನ್ನ ಇಮೇಜ್ ಬೆಳೆಸಿಕೊಳ್ಳುವುದು ಆಕೆಯ ಸದ್ಯದ ಆದ್ಯತೆಯಂತೆ.