ಭಾರತೀಯ ಮೂಲದ ಬಾಲಕಿಗೆ ಬ್ರಿಟನ್ ಪ್ರಧಾನಿ ಪ್ರಶಸ್ತಿ: ಹವಾಮಾನ ಬದಲಾವಣೆ ಜಾಗೃತಿಗೆ ಸಂದ ಗೌರವ ಆಟವಾಡುವ ಸಮಯದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿರುವ 6 ವರ್ಷದ ಅಲೀಶಾ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಲಂಡನ್: ಭಾರತೀಯ ಮೂಲದ 6 ವರ್ಷದ ಬಾಲಕಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೊಡಮಾಡುವ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾಳೆ. ಅಲೀಶಾ ಗದಿಯಾ ಹವಾಮಾನ ಬದಲಾವಣೆ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯಳಾಗಿದ್ದಾಳೆ. ಇದನ್ನೂ ಓದಿ: ವಿಶ್ವ ಸರ್ವಧರ್ಮ ಸಂಸತ್ ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಬೆಂಗಳೂರಿನ ಗಾಯಕಿ ದೀಪ್ತಿ ನವರತ್ನಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿರುವ ಎನ್ ಜಿ ಒ ಕೂಲ್ ಅರ್ತ್ ನಲ್ಲಿ ಆಕೆ ಸದಸ್ಯೆಯಾಗಿದ್ದಾಳೆ.ಇದನ್ನೂ ಓದಿ: ಅಪಾಯ ಲೆಕ್ಕಿಸದೆ ಮುಳುಗುತ್ತಿರುವವರ ರಕ್ಷಿಸುವ ಆಪತ್ಬಾಂಧವ, ಮುಳುಗುತಜ್ಞ ಉಡುಪಿಯ ಆಕ್ವಾಮ್ಯಾನ್ ಈಶ್ವರ್ ಮಲ್ಪೆಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡ ಅಲೀಶ 3 ಲಕ್ಷ ರೂ.ಗಳಷ್ಟು ದೇಣಿಗೆ ಸಂಗ್ರಹಿಸಿದ್ದಳು. ಕಾರ್ಖಾನೆಗಳು ಯಾವ ರೀತಿ ಜಗತಿನಾದ್ಯಂತ ಲಾಬಿ ಮಾಡಿ ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ ಎಂಬುದರ ಕುರಿತಾಗಿ ಅಲೀಶಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾಳೆ. ಇದನ್ನೂ ಓದಿ: 1934ರಲ್ಲಿ ಮಹಾತ್ಮಾ ಗಾಂಧಿಯವರನ್ನು ದಾವಣಗೆರೆಗೆ ಕರೆತರುವಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಮಹತ್ವದ್ದುಈ ಹಿಂದೆ ಅರಣ್ಯನಾಶ ಕುರಿತಾಗಿ ಗಮನ ಸೆಳೆಯಲು 80 ಕಿ.ಮೀ ಸೈಕಲ್ ರೈಡ್ ಜಾಥಾ ಹಮ್ಮಿಕೊಂಡಿದ್ದಳು. ಬ್ರಿಟನ್ ರಾಣಿ ಮತ್ತು ಜಗತ್ಪ್ರಸಿದ್ಧ ಸಿನಿಮಾ ನಿರ್ದೇಶಕ ಡೇವಿಡ್ ಅಟೆನ್ ಬರೊ ಅದಕ್ಕೆ ಬೆಂಬಲ ಸೂಚಿಸಿದ್ದರು ಎನ್ನುವುದು ವಿಶೇಷ. ಇದನ್ನೂ ಓದಿ: ಕೃಷ್ಣನಿಗೆ ಪೇಂಟಿಂಗ್ ಅರ್ಪಿಸಿದ ಕೇರಳದ ಮುಸ್ಲಿಂ ಯುವತಿ: 6 ವರ್ಷಗಳಲ್ಲಿ 500 ಕೃಷ್ಣನ ಚಿತ್ರಗಳು ಡ್ರೋನ್ ಬಳಸಿ ಆಕಾಶಮಾರ್ಗದಲ್ಲಿ ಔಷಧಿ ತಲುಪಿಸುವ ಯೋಜನೆ ಪ್ರಾತ್ಯಕ್ಷಿಕೆ ಯಶಸ್ವಿರೈತನಾಗಿ ಬದಲಾದ ಜಾರ್ಖಂಡ್ ಎಂಜಿನಿಯರ್ ಯಶೋಗಾಥೆ: ಸಾವಯವ ಕೃಷಿ ಮೂಲಕ ರೈತರ ಆದಾಯ ದುಪ್ಪಟ್ಟು!ವಿಮಾನ 2 ಗಂಟೆ ತಡವಾದುದಕ್ಕೆ ಪ್ರಯಾಣಿಕರಿಗೆ ಗಗನಸಖಿಯರ ಪತ್ರ: ಕೋಪ ಶಮನಕ್ಕೆ ವಿನೂತನ ಮಾರ್ಗಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಹಲವು ಮಂದಿಗೆ ಜೀವದಾನ: ಅಂತಿಮ ಕ್ಷಣದ ಆಪದ್ಬಾಂಧವವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಬೆಂಗಳೂರು ಹುಡುಗ ರಿಕಿ ಕೇಜ್ ಉಭಯ ಕುಶಲೋಪರಿ ಸಾಂಪ್ರತ: ಸಂದರ್ಶನ12 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದ ಕೇರಳ ರಿಕ್ಷಾ ಡ್ರೈವರ್