ನಿಮ್ಮ ಶ್ವಾನ ಇಷ್ಟಪಡದ ಐದು ನಡವಳಿಕೆಗಳಿವು ಸಾಕು ನಾಯಿಗಳನ್ನು ಕಂಡರೆ ಮಾಲೀಕರು ಅದನ್ನು ಮುದ್ದು ಮಾಡುವುದು, ಪ್ರೀತಿಯಿಂದ ತಬ್ಬಿಕೊಳ್ಳುವುದನ್ನು ಮಾಡುತ್ತಿರುತ್ತಾರೆ. ಆದರೆ, ನಾಯಿಗಳಿಗೆ ಇದು ಇಷ್ಟವಾಗುವುದಿಲ್ಲ. ತಮಗೆ ಇಷ್ಟವಾಗದಿರುವ ನಡವಳಿಕೆಯನ್ನು ನಾಯಿಗಳು... ಸಾಕು ನಾಯಿಗಳನ್ನು ಕಂಡರೆ ಮಾಲೀಕರು ಅದನ್ನು ಮುದ್ದು ಮಾಡುವುದು, ಪ್ರೀತಿಯಿಂದ ತಬ್ಬಿಕೊಳ್ಳುವುದನ್ನು ಮಾಡುತ್ತಿರುತ್ತಾರೆ. ಆದರೆ, ನಾಯಿಗಳಿಗೆ ಇದು ಇಷ್ಟವಾಗುವುದಿಲ್ಲ. ತಮಗೆ ಇಷ್ಟವಾಗದಿರುವ ನಡವಳಿಕೆಯನ್ನು ನಾಯಿಗಳು ಕೆಲವು ಸಂಕೇತಗಳ ಮೂಲಕ ಸೂಚಿಸುತ್ತಿರುತ್ತವೆ. ಆದರೆ, ಇವುಗಳನ್ನು ಕೆಲವೊಮ್ಮೆ ನಾವು ಗ್ರಹಿಸುವುದೇ ಇಲ್ಲ. ಈ ಬಗ್ಗೆ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಮನೋವಿಜ್ಞಾನ ಪ್ರಾಧ್ಯಾಪಕ ಹಾಗೂ ತಜ್ಞರಾಗಿರುವ ಡಾ. ಸ್ಟೇನ್ಲೀ ಕೊರೆನ್ ಅವರು ಈ ಅಧ್ಯಾಯವೊಂದನ್ನು ನಡೆಸಿ. ವರದಿಯನ್ನು ಬಿಡುಗಡೆ ಮಾಡಿದ್ದರು. ವರದಿಯ ಪ್ರಕಾರ ಮಾಲೀಕರಾಗಲಿ ಅಥವಾ ಇನ್ನಾರೇ ಆದರೂ ನಾಯಿಗಳನ್ನು ತಬ್ಬಿಕೊಂಡರೆ ಅವುಗಳಿಗೆ ಒತ್ತಡ ಹೇರಿದಂತಾಗುತ್ತದೆ. ಮಾಲೀಕರ ಈ ವರ್ತನೆಯಿಂದ ಬೇಸರಗೊಂಡು ನಾಯಿಗಳು ಓಡಿಹೋಗಲು ನೋಡುತ್ತವೆ ಎಂದು ಹೇಳಿದ್ದರು. ಮಾಲೀಕರು ತಬ್ಬಿಕೊಂಡು ಮುದ್ದಾಡುವ ವೇಳೆಯಲ್ಲಿ ನಾಯಿಗಳು ಒತ್ತಡ ರೀತಿಯಲ್ಲಿರುವುದು ಕಂಡು ಬಂದಿದ್ದು, ಒತ್ತಡದಲ್ಲಿದ್ದ ನಾಯಿಗಳು ಕೆಲವೊಮ್ಮೆ ಮಾಲೀಕರನ್ನು ದ್ವೇಷಿಸಲು ಆರಂಭಿಸುತ್ತದೆ. ಇದರ ಕೋಪದಲ್ಲಿ ಕಚ್ಚುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದ್ದರು. ಸಾಕು ನಾಯಿಗಳು ಇಷ್ಟಪಡದ ಕೆಲವು ನಡವಳಿಕೆಗಳು ಅವುಗಳನ್ನು ವ್ಯಕ್ತಪಡಿಸುವ ರೀತಿ ಈ ಕೆಳಕಂಡಿಂತಿದೆ. ಒತ್ತಡದಲ್ಲಿದ್ದಾಗ ನಾಯಿಗಳು ತಮ್ಮ ಕಿವಿಗಳನ್ನು ಕೆಳಗೆ ಮಾಡಿರುತ್ತವೆ. ಅರ್ಧ ಕಣ್ಣು ತೆಗೆದಿರುತ್ತದೆ ಅಥವಾ ನೇರವಾಗಿ ನಮ್ಮ ಕಣ್ಣುಗಳನ್ನು ನೋಡುವುದಿಲ್ಲ. ಒಂದು ವೇಳೆ ನಾಯಿಗಳು ಪೂರ್ಣವಾಗಿ ಕಣ್ಣು ಮುಚ್ಚಿ ನಾಲಿಗೆಯನ್ನು ಮುಂದೆ ಹಾಕುತ್ತಿದ್ದರೆ, ಅತಂಕದಲ್ಲಿದೆ ಎಂದರ್ಥ. ನಾಯಿಗಳನ್ನು ಕುಟುಂಬದ ಸದಸ್ಯನಾಗಿ ನೋಡಬಹುದು. ಆದರೆ, ಅದನ್ನು ಮನುಷ್ಯನಂತೆ ನೋಡಬಾರದು, ನಾಯಿಗಳಿಗೆ ಅದರದ್ದೇ ಆದ ಕೆಲವು ಪ್ರತಿಕ್ರಿಯೆಗಳಿರುತ್ತವೆ. ತಬ್ಬಿಕೊಳ್ಳುವುದನ್ನು ನಾಯಿಗಳು ಇಷ್ಟಪಡುವುದಿಲ್ಲ. ನಾಯಿಗಳು ಮನುಷ್ಯರೊಂದಿಗೆ ವೇಗವಾಗಿ ಬೆರೆತುಕೊಳ್ಳುವ ಪ್ರಾಣಿ ಹೌದು, ಮನುಷ್ಯರಂತೆ ಅವುಗಳೂ ಪ್ರೀತಿ ಮಾಡುತ್ತವೆ. ಆದರೆ, ಮಾಲೀಕರು ತಮ್ಮ ಪ್ರಾಣಿಗಳು ಯಾವಾಗ ಒತ್ತಡದಲ್ಲಿರುತ್ತವೆ, ಆತಂಕದಲ್ಲಿರುತ್ತವೆ ಎಂಬುದನ್ನು ಗ್ರಹಿಸಬೇಕು. ತಲೆಯನ್ನು ಹಿಡಿದು ಮುದ್ದಾಡುವುದನ್ನು ನಾಯಿಗಳು ಇಷ್ಟಪಡುವುದಿಲ್ಲ. ತಲೆಯನ್ನು ಯಾವ ರೀತಿಯಲ್ಲಿ ಹಿಡಿದುಕೊಳ್ಳುತ್ತಿದ್ದೀರಿ. ಏನು ಮಾಡುತ್ತೀರಿ ಎಂಬುದರ ಬಗ್ಗೆ ನಾಯಿಗಳಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ನಾಯಿಗಳು ತಲೆಯನ್ನು ಕೊಡದೆ ಕೆಳಗೆ ಹಾಗೆ ಹೀಗೆ ಮಾಡುವುದು ಕೂಡ ಇದೇ ಕಾರಣಕ್ಕೆ. ಈ ಕ್ರಿಯೆಯನ್ನು ನಾವು ಮುಂದುವರಿಸಿದ್ದೇ ಆದರೆ, ಇದರಿಂದ ನಾಯಿಗಳಿಗೆ ಕೋಪ ಬರುತ್ತದೆ. ಓಡಿ ಹೋಗಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಬೇರಾವುದೇ ಆಯ್ಕೆಗಳು ಸಿಗಲಿಲ್ಲ ಎಂದರೆ, ನಾಯಿಗಳು ಕಚ್ಚುವ ಸಾಧ್ಯತೆಗಳಿರುತ್ತವೆ. ಇನ್ನು ಚಿಕ್ಕ ಮುದ್ದು ನಾಯಿ ಮರಿಗಳನ್ನು ನೋಡಿದ ಕೂಡಲೇ ಕೆಲವರು ನಾಯಿಯನ್ನು ಮೇಲೆ ಎತ್ತಿ ಕೆಳಗೆ ಬಿಡುವುದು, ಮುದ್ದಾಡುವುದನ್ನು ಮಾಡುತ್ತಾರೆ. ಇದನ್ನು ಕೂಡ ನಾಯಿಗಳು ಇಷ್ಟ ಪಡುವುದಿಲ್ಲ. ನಾಯಿಗಳನ್ನು ಎತ್ತಿಕೊಳ್ಳುವುದಕ್ಕೂ ಮುನ್ನ ದೊಡ್ಡ ನಾಯಿಗಳಾಗಿದ್ದರೆ ಹೀಗೆ ಎತ್ತಿಕೊಳ್ಳಲು ಸಾಧ್ಯವಾಗುತ್ತಿತ್ತೇ ಎಂಬುದನ್ನು ಚಿಂತಿಸಬೇಕು. ಇನ್ನು ನಾಯಿಗಳಿಗೆ ನೇರವಾಗಿ ಕಣ್ಣಿಗೆ ಕಣ್ಣಿಟ್ಟು ನೋಡುವುದು ಕಷ್ಟವಾಗುತ್ತದೆಯಂತೆ. ನಾಯಿಗಳಿಗೆ ಇದು ಬೆದರಿಕೆಯೊಡ್ಡುತ್ತಿರುವಂತೆ ಅನಿಸುತ್ತದೆ. ನೀವು ನಾಯಿಯೊಂದಿಗೆ ಜಗಳ ಮಾಡಲು ಆರಂಭಿಸುತ್ತಿದ್ದೀರಾ ಎಂಬ ಭಾವನೆ ನಾಯಿಗೆ ಬರುತ್ತದೆಯಂತೆ. ಇನ್ನು ನಾಯಿಗಳಿಗೆ ಮಕ್ಕಳಿಗೆ ಮಕ್ಕಳೊಂದಿಗೆ ಆಟವಾಡಲು ಇಷ್ಟವಾಗುವುದಿಲ್ಲ. ತಾನು ಹೋಗುವ ಜಾಗದಲ್ಲಿ ಮಕ್ಕಳು ಹಿಂಬಾಲಿಸುವುದನ್ನು ಇಷ್ಟಪಡುವುದಿಲ್ಲವಂತೆ. ನಿದ್ರೆ ಮಾಡಿ ಎದ್ದ ಕೂಡಲೇ ನಾಯಿಗಳು ತನ್ನ ದೇಹವನ್ನು ಒದರುತ್ತದೆ. ಈ ವೇಳೆ ನಾಯಿಗೆ ವಿಶಾಲವಾದ ಸ್ಥಳ ಬೇಕಾಗುತ್ತದೆ. ಈ ಸಮಯದಲ್ಲಿ ವಿಶಾಲ ಸ್ಥಳವಿಲ್ಲದಿದ್ದರೆ. ಅವುಗಳಿಗೆ ಬೇಸರವಾಗುತ್ತದೆಯಂತೆ. ವಿಶಾಲದ ಸ್ಥಳ ಒದಗಿಸುವಲ್ಲಿ ಕೆಲವೊಮ್ಮೆ ಮಾಲೀಕರು ಗೊಂದಲದಲ್ಲಿರುತ್ತಾರೆ. ನಾಯಿಗಳಿಗೆ ವಿಶಾಲವಾಗಿ ಸ್ಥಳ ನೀಡಿದ್ದರೂ ಆ ಸ್ಥಳದಲ್ಲಿ ಕೆಲವೊಮ್ಮೆ ಮಕ್ಕಳನ್ನು ಆಡಲು ಬಿಡುತ್ತಾರೆ. ಇದನ್ನು ಮಾಡಬಾರದು. ನಾಯಿಗಳು ನಡೆಯುವಾಗ ಅಡ್ಡಲಾಗಿ ಯಾರೂ ಬರಬಾರದು. ಕೆಲವೊಮ್ಮೆ ಒಬ್ಬೊಂಟಿಯಾಗಿರಲು ನಾಯಿಗಳು ಬಯಸುತ್ತವೆ. ನಾಯಿಗಳೂ ಧೀರ್ಘಕಾಲಿಕವಾಗಿ ನಿದ್ರೆ ಮಾಡಲು ಬಯಸುತ್ತವೆ. ಅವುಗಳಿಗೆ ಆಗಾಗ ತೊಂದರೆಯನ್ನು ನೀಡಬಾರದು. ನಿದ್ರೆ ಮಾಡುವ ವೇಳೆ ಮುದ್ದಿಸುವುದು ಎತ್ತಿಕೊಳ್ಳುವುದನ್ನು ಮಾಡಬಾರದು. ಮನುಷ್ಯರು ನಿದ್ರೆ ಮಾಡುವಾಗ ಯಾರಾದರೂ ಮೇಲೆ ಇದ್ದಕ್ಕಿದ್ದಂತೆ ಬಿದ್ದರೆ, ಮುಟ್ಟಿದರೆ, ಕೋಪ ಹೇಗೆ ಬರುತ್ತದೆಯೋ ಹಾಗೆಯೇ ನಾಯಿಗಳಿಗೂ ಕೋಪ ಬರುತ್ತದೆ.